ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿಗೆ ಸಮೀಪದ ಭೂಪಾಲ ತೆಗನೂರು ಗ್ರಾಮದ ಜೈ ಬಜರಂಗ ಬಲಿ ದೇವರ ಜಾತ್ರಾ ಮಹೋತ್ಸವ ಶುರುವಾಗಿದೆ. ಸೆ.೨೪ ಮತ್ತು ೨೫ರಂದು ಎರಡು ದಿನಗಳ ಕಾಲ ಸಡಗರ ಸಂಭ್ರಮದಿAದ ಜರುಗುಲಿದೆ ಎಂದು ಜೈ ಬಜರಂಗ ಬಲಿಜೀರ್ಣೋದ್ಧಾರ ಸಂಘ ಪ್ರಮುಖ ಹಾಗೂ ಗ್ರಾಪಂ ಸದಸ್ಯ ಸಾಹೇಬಗೌಡ ತಿಳಿಸಿದರು.
೨೪ರಂದು ಪ್ರಾತಃಕಾಲದಲ್ಲಿ ಮಹಾಭಿಷೇಕ, ೮ ಗಂಟೆಗೆ ಗಂಗಾಸ್ನಾನ ಬಳಿಕ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದರು.
೨೫ರಂದು ಬೆಳಗ್ಗೆ ೮ಗಂಟೆಗೆ ರಾಜಬೀದಿಯಲ್ಲಿ ಪಲ್ಲಕ್ಕಿ ಮೆರವಣಿಗೆ, ಸಂಜೆ ೬ ಗಂಟೆಗೆ ನೂತನವಾಗಿ ನಿರ್ಮಿಸಿರುವ ರಥದ ಪ್ರಥಮ ರಥೋತ್ಸವ ಜರುಗಲಿದೆ. ಓಂಕಾರ ಬೇನೂರಿನ ಪೂಜ್ಯ ಸಿದ್ದ ರೇಣುಕಾ ಶಿವಾಚಾರ್ಯರ ಹಾಗೂ ಸಕಲ ಹರ ಗುರುಚರ ಮೂರ್ತಿಗಳು ಸಾನ್ನಿಧ್ಯದಲ್ಲಿ ರಥೋತ್ಸವ ನಡೆಯಲಿದೆ. ಬಳಿಕ ನಡೆಯುವ ಧರ್ಮ ಸಭೆಯಲ್ಲಿ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಲಿz್ದÁರೆ ಎಂದು ಹೇಳಿದರು. ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಜೈ ಬಜರಂಗ ಬಲಿ ಜೀರ್ಣೋz್ದÁರ ಸಂಘ ಅಧ್ಯಕ್ಷ ಶಿವರಾಜ ಖಂಡಾರಿ, ಕಾರ್ಯದರ್ಶಿ ಗುರುದೇವಪ್ಪ ನರುಣಿ,ಖಜಾಂಚಿ ಜಗದೇವಪ್ಪ ಶೆಳ್ಳಗಿ,ಪ್ರಮುಖರಾದ ಮಲ್ಲಪ್ಪ ಹಾಗರಗಿ, ಹನುಮಂತ ಚಂದ್ರಶೇಖರ, ಸಾಯಬಣ್ಣ ನರುಣಿ, ಶಶಿಕುಮಾರ ಪಾಟೀಲï, ಬಸವರಾಜ ನಾಟೀಕಾರ, ಸತೀಶ ಮೊದಲಾದವರಿದ್ದರು.