ಬೇಡಿಕೆ ಈಡೇರಿಸದ ಸರ್ಕಾರದ ಕ್ರಮ ವಿರೋಧಿಸಿ ತಲೆ ಬೋಳಿಸಿಕೊಂಡ ಶಿಕ್ಷಕಿಯರು

<< ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅಸಹಾಯಕತೆಯಿಂದ ಸಾಮೂಹಿಕ ಮುಂಡನ>>

ಭೋಪಾಲ್: ಸರ್ಕಾರ ತಮ್ಮ ಬೇಡಿಕೆಯನ್ನು ಈಡೇರಿಸದ್ದಕ್ಕೆ ಭೋಪಾಲ್​ನಲ್ಲಿ ಶಿಕ್ಷಕಿಯರು ಸಾಮೂಹಿಕ ಮುಂಡನ ಮಾಡಿಸಿಕೊಂಡಿದ್ದಾರೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಶಾಲಾ ಶಿಕ್ಷಕಿಯರು ಸರ್ಕಾರವನ್ನ ಆಗ್ರಹಿಸಿದ್ದರು. ಆದರೆ, ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಶಿಕ್ಷಕಿಯರು ಸಾಮೂಹಿಕವಾಗಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.

ಬೋಪಾಲ್​ನ ಜಂಬೂರಿ ಮೈದಾನದಲ್ಲಿ ಮಹಿಳಾ ಶಿಕ್ಷಕಿಯರು ಮುಂಡನ ಮಾಡಿಸಿಕೊಳ್ಳುವಾಗ ಅದನ್ನು ನೋಡಿದವರ ಕಣ್ಣಲ್ಲಿ ನೀರು ತುಂಬಿತ್ತು. ಸುಮಾರು 120 ಶಿಕ್ಷಕಿಯರು ಸರ್ಕಾರದ ವಿರುದ್ಧ ಕೇಶ ಮುಂಡನೆ ಮಾಡಿದರು. ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Leave a Reply

Your email address will not be published. Required fields are marked *