ಭೀಮಾತೀರದ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​: ಪಿಎಸ್​ಐ ಗೋಪಾಲ ಹಳ್ಳೂರಗೆ ಗೃಹಬಂಧನ

ವಿಜಯಪುರ: ಭೀಮಾತೀರದ ಗಂಗಾಧರ್​ ಹತ್ಯೆ ಪ್ರಕರಣಕ್ಕೆ ದಿನೇದಿನೆ ಟ್ವಿಸ್ಟ್​ ಸಿಗುತ್ತಿದೆ. ಪಿಎಸ್​ಐ ಗೋಪಾಲ ಹಳ್ಳೂರ ವಿಚಾರಣೆ ಚುರುಕುಗೊಂಡಿದೆ. ಗೋಪಾಲ ಅವರನ್ನು ಗೃಹ ಬಂಧನ ಇರಿಸಿ ವಿಚಾರಣೆ ಮಾಡಲಾಗುತ್ತಿದೆ.

ಗಂಗಾಧರ ಚಡಚಣ ಹತ್ಯೆ ಪ್ರಕರಣ ಆರೋಪಿ ಹನುಮಂತ ಪೂಜಾರಿ ವಿಚಾರಣೆ ವೇಳೆ ಪೊಲೀಸರೇ ಗಂಗಾಧರ್​ ಅವರನ್ನು ಕರೆದುಕೊಂಡು ಬಂದಿದ್ದರು ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನಾಧರಿಸಿ ಚಡಚಣ ಪಿಎಸ್​ಐ ಆಗಿದ್ದ ಗೋಪಾಲ ಹಳ್ಳೂರ್​ ಅವರನ್ನು ಸ್ಥಳೀಯ ಪೊಲೀಸ್​ ಅಧಿಕಾರಿಗಳು ಹಿಟ್ನಳ್ಳಿ ಅತಿಥಿ ಗೃಹದಲ್ಲಿ ಇರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಗೋಪಾಲ್​ ವಿಚಾರಣಾ ಸ್ಥಳಕ್ಕೆ ಉತ್ತರ ವಲಯ ಐಜಿಪಿ ಅಲೋಕ್​ ಕುಮಾರ್​ ಆಗಮಿಸಲಿದ್ದು ಬಳಿಕ ವಿಚಾರಣೆ ತೀವ್ರಗೊಳ್ಳಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *