ಭೇರ್ಯ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23 ನೇ ಸಾಲಿನಲ್ಲಿ ಸದಸ್ಯರಿಗೆ 9.66 ಕೋಟಿ ರೂ.ಸಾಲ ವಿತರಿಸಿದ್ದು, 1.80 ಕೋಟಿ ರೂ. ಮರುಪಾವತಿಯಾಗಬೇಕಿದೆ. ಸಂಘವು ಸುಸ್ತಿಯಲ್ಲಿದ್ದು ಯಾವುದೇ ಲಾಭವಿಲ್ಲದೆ ನಷ್ಟದಲ್ಲಿದೆ ಎಂದು ಸಂಘದ ಅಧ್ಯಕ್ಷ ಮುಶೀರ್ ಅಹಮ್ಮದ್ ಖಾನ್ ಹೇಳಿದರು.
ಭೇರ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಸಂಘದಲ್ಲಿ ಒಟ್ಟು 2,082 ಸದಸ್ಯರು ಇದ್ದು, 1.10 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಸಂಘದ ವ್ಯಾಪ್ತಿಯಲ್ಲಿ ಭೇರ್ಯ, ಚಿಕ್ಕಭೇರ್ಯ, ಮುಂಜನಹಳ್ಳಿ, ಕಾವಲ್ ಹೊಸೂರು, ಗುಳುವಿನ ಅತ್ತಿಗುಪ್ಪೆ, ಅರಕೆರೆ, ಉದಯಗಿರಿ, ಸಂಬ್ರವಳ್ಳಿ, ಸೋಮನಹಳ್ಳಿ, ಗೇರದಡ, ಕೆಂಚನಹಳ್ಳಿ, ಮೇಲೂರು, ಬಾಚಹಳ್ಳಿ, ಕುರುಬಹಳ್ಳಿ, ಸಂಕನಹಳ್ಳಿ, ಎಲೆಮುದ್ದನಹಳ್ಳಿ, ಎಲೆಮುದ್ದನಹಳ್ಳಿ ಕೊಪ್ಪಲು ಗ್ರಾಮಗಳಿವೆ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಚ್.ಮಹದೇವ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 9.66 ಕೋಟಿ ರೂ.ಕೆಸಿಸಿ ಸಾಲ ವಿತರಿಸಲಾಗಿದೆ. ಸಂಘದ ಸದಸ್ಯರಿಂದ 1.80 ಕೋಟಿ ರೂ.ಸಾಲ ಮರುಪಾವತಿಯಾಗಬೇಕಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ರಾಮೇಗೌಡ, ಮಕಬಲ್ ಷರೀಫ್, ಯಶೋಧಮ್ಮ, ಸುಬ್ಬನಾಯಕ, ರಂಜಿನಿ ಜಯಕೀರ್ತಿ, ತಾರಾ ಚಂದ್ರಶೇಖರ್, ಅನಿತಾ ಅಮರ್, ಕೃಷ್ಣ, ಶ್ರೀನಿವಾಸ್, ಮಂಜೇಗೌಡ, ಸಿಬ್ಬಂದಿ ಎಂ.ಡಿ.ಧನಂಜಯ್, ಬಿ.ವಿ.ಭರತ್, ನಿರ್ದೇಶಕರು, ಷೇರುದಾರರು ಇದ್ದರು.