More

    ಶಿಕ್ಷಣದಿಂದ ಹಳ್ಳಿಗಳ ಪ್ರಗತಿ ಸಲೀಸು

    ಭೀಮಸಮುದ್ರ: ದೇವಸ್ಥಾನ ನಿರ್ಮಾಣಕ್ಕೆ ತೋರುವ ಶ್ರದ್ಧೆ, ಭಕ್ತಿ ಶಾಲೆಗಳ ಸ್ಥಾಪನೆಯತ್ತವೂ ಇರಬೇಕು. ಇದರಿಂದ ಹಳ್ಳಿಗಳ ಪ್ರಗತಿ ಸಾಧ್ಯ ಎಂದು ಭೀಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಜಿ.ದೇವಕುಮಾರ್ ಹೇಳಿದರು.

    ಇಲ್ಲಿನ ಭೀಮೇಶ್ವರ ಬಾಲವಿಕಾಸ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯೊಂದು ಜ್ಞಾನ ಪ್ರಸರಣ ಮಾಡುವ ತಾಣ. ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು ಎಂದರು.

    ವಿದ್ಯಾಸಂಸ್ಥೆ ನಿರ್ದೇಶಕ ಶಿಕ್ಷಕ ದೇವರಾಜ್ ಮಾತನಾಡಿ, ಮಕ್ಕಳಿಗೆ ದೇಶದ ಮಹಾನ್ ನಾಯಕರ ಜೀವನ ಚರಿತ್ರೆಗಳ ಕುರಿತು ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

    ಅರೇಕಾ ಚೇಂಬರ್ಸ್‌ನ ಉಪಾಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳಲ್ಲಿ ಕೀಳರಿಮೆ ಹೋಗಲಾಡಿಸಿ ಧೈರ್ಯವಾಗಿ ಮಾತನಾಡುವ ಗುಣ ಬೆಳೆಸಬೇಕು. ಯಾವುದು ಸರಿ, ತಪ್ಪು ಎಂದು ಗುರುತಿಸುವಂತೆ ಅರಿವು ಮೂಡಿಸಬೇಕು ಎಂದರು.

    ಸಿಆರ್‌ಪಿ ಧೃವಕುಮಾರ್, ಹಿರೇಗುಂಟನೂರು ಗೊಲ್ಲರಹಟ್ಟಿ ಶಾಲೆ ಶಿಕ್ಷಕ ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts