ಬೆಂಗಳೂರು: ನಟಿ ಭಾವನಾ ಮೆನನ್ (Bhavana Menon) ಬಗ್ಗೆ ಆಗಾಗ ಡಿವೋರ್ಸ್ ಕುರಿತು ವದಂತಿಗಳು ಚರ್ಚೆಯಾಗುತ್ತಲೇ ಇರುತ್ತದೆ. ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ನಟಿ ಭಾವನಾ ಮೆನನ್ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿದ್ದು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಪತಿ ನವೀನ್ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುವುದು ಬಹಳ ಅಪರೂಪ. ಅಭಿಮಾನಿಗಳು ನವೀನ್ ಮತ್ತು ಭಾವನಾ ಅವರನ್ನು ಇತರ ಕಾರ್ಯಕ್ರಮಗಳಲ್ಲಿ ಅಥವಾ ಸಂದರ್ಶನಗಳಲ್ಲಿ ಅಪರೂಪಕ್ಕೆ ನೋಡುತ್ತಾರೆ. ಇದರ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವದಂತಿಗಳು ಹರಡಿತು. ಭಾವನಾ ಮತ್ತು ನವೀನ್ ನಡುವೆ ಸಮಸ್ಯೆಗಳಿವೆ ಮತ್ತು ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈಗ ತಾರೆ ಅದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.
ಗಲಾಟ್ಟಾ ತಮಿಳಿಗೆ ನೀಡಿದ ಸಂದರ್ಶನದಲ್ಲಿ ನಟಿ ಮಾತನಾಡಿ, ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಕ್ಯಾಪ್ಷನ್ ಕೊಡಲ್ಲ. ಏನಾದರೂ ನಾನು ಫೋಟೋವೊಂದನ್ನು ಪೋಸ್ಟ್ ಮಾಡಿದರೆ, ಅಯ್ಯೋ ಇದು ಹಳೆಯ ಫೋಟೋ ಎನ್ನುತ್ತಾರೆ. ನಿಮ್ಮ ನಡುವೆ ಸಮಸ್ಯೆ ಇದ್ಯಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಾರೆ. ಅದಕ್ಕೆ ನಾನು ಪ್ರತಿ ನಿತ್ಯ ನಾವು ಫೋಟೋ ತೆಗೆದುಕೊಳ್ಳಲ್ಲ ಎನುತ್ತೇನೆ ಎಂದಿದ್ದಾರೆ.
ನನ್ನ ತಾಯಿ, ಅಣ್ಣ ಎಲ್ಲರೂ ಇದ್ದಾರೆ. ಎಲ್ಲರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಕೂರೋಕೆ? ಆಗುತ್ತಾ. ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ನಾವು ಚೆನ್ನಾಗಿದ್ದೇವೆ ಎಂದು ಪ್ರೂವ್ ಮಾಡಲು ಯಾವಾಗಲೂ ಫೋಟೋ ಹಾಕ್ತಾ ಕೂರುವುದಕ್ಕೆ ಆಗಲ್ಲ ಎಂದು ಡಿವೋರ್ಸ್ ವದಂತಿಗೆ ನಟಿ ತೆರೆ ಎಳೆದಿದ್ದಾರೆ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡದಿದ್ದರೆ ಜನರು ಸಮಸ್ಯೆ ಇದೆ ಎಂದು ಭಾವಿಸಿದರೂ ಪರವಾಗಿಲ್ಲ ಎಂದು ಭಾವನಾ ಸ್ಪಷ್ಟಪಡಿಸಿದ್ದಾರೆ.
ನವೀನ್ ಮತ್ತು ಭಾವನಾ 2018 ರಲ್ಲಿ ವಿವಾಹವಾದರು. ನವೀನ್ ಕನ್ನಡ ಚಲನಚಿತ್ರ ನಿರ್ಮಾಪಕರು. ನವೀನ್ ನಿರ್ಮಾಣದ ಚಿತ್ರದಲ್ಲಿ ಭಾವನಾ ನಟಿಸಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.