25.8 C
Bangalore
Friday, December 13, 2019

ಯೌಗಿಕಪ್ರಭೆಯನ್ನು ವಿಶ್ವಕ್ಕೆ ಹರಡಿದ ತಪಸ್ವೀಜಿ ಮಹಾರಾಜ್

Latest News

ನಾಡಿನ ಹಿತ ಕಾಪಾಡುವಲ್ಲಿ ಮಠಗಳು ಶ್ರಮಿಸುತ್ತಿವೆ

ಶಹಾಪುರ: ಅನಾದಿ ಕಾಲದಿಂದಲೂ ನಾಡಿನ ಹಿತ ಕಾಪಾಡುವಲ್ಲಿ ಮಠಮಾನ್ಯಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಶುಕ್ರವಾರ ನಗರದ ಕುಂಬಾರಗೇರಿ...

ಕಾಲುವೆ ಒಡೆದು ರೈತರ ಜಮೀನಿನಲ್ಲಿ ನೀರು !

ಯಾದಗಿರಿ: ಸನ್ನತಿ ಏತ ನೀರಾವರಿ ಯೋಜನೆಯಡಿ ಕೆಬಿಜೆಎನ್ಎಲ್ನಿಂದ ನಿಮರ್ಿಸಲಾಗಿದ್ದ ಕಾಲುವೆ ಒಡೆದು ರೈತರ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಘಟನೆ ತಾಲೂಕಿನ...

ಜಟಿಲತೆ ಪ್ರಶ್ನೆಗಳಲ್ಲಿಲ್ಲ, ವಿದ್ಯಾರ್ಥಿಗಳ ಮನದಲ್ಲಿದೆ

ತಾಳಿಕೋಟೆ: ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಅದು ವಿದ್ಯಾರ್ಥಿಗಳಲ್ಲಿರುವ ಕೌಶಲ ಹಾಗೂ ಪ್ರತಿಭೆ ಹೊರಹಾಕಲಿರುವ ಸಾಧನ ಎಂದು ಬೆಂಗಳೂರಿನ ಶೈಕ್ಷಣಿಕ ತಜ್ಞ ಹಾಗೂ...

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಗಸ್ತ್ಯ ಅಂತಾರಾಷ್ಟೀಯ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ...

ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಪ್ರತಿಭಟನೆ

ಇಂಡಿ: ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಜಮೀತತಲ್ಮಾ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ...

ಧ್ಯಾತ್ಮಿಕ ಕ್ಷೇತ್ರದ ಮಹಾಸಾಧಕರಲ್ಲಿ ತಪಸ್ವೀಜಿ ಮಹಾರಾಜ್ ಹೆಸರು ಚಿರಸ್ಥಾಯಿಯಾದುದು. ಇವರು 185 ಸಂವತ್ಸರಗಳ ಕಾಲ ಜೀವಿಸಿ, ಭಾರತದಾದ್ಯಂತದ ಕ್ಷೇತ್ರಗಳನ್ನೆಲ್ಲ ದರ್ಶಿಸಿ, ಭಕ್ತರಿಗೆ ಆಧ್ಯಾತ್ಮಿಕ ಬೆಳಕು ತೋರಿದರು. ರಾಜಮನೆತನಕ್ಕೆ ಸೇರಿದ್ದ ಇವರು ರಾಜವೈಭವ ತ್ಯಜಿಸಿ ತಪಸ್ಸಿಗಾಗಿಯೇ ಜೀವನವನ್ನು ಮೀಸಲಿರಿಸಿದ ಮಹಾಸಂತ.

ಜನನ-ಪರಿವ್ರಾಜಕ: ಪಂಜಾಬ್ ಪ್ರಾಂತ್ಯದ ಪಟಿಯಾಲಾ ಎಂಬ ನಗರದಲ್ಲಿ 1770ರಲ್ಲಿ ಜನಿಸಿದ ತಪಸ್ವೀಜಿ ಗುರುನಾನಕ್ ಸ್ಥಾಪಿಸಿದ ಸಿಖ್ ಮತಕ್ಕೆ ಸೇರಿದವರು. ತಂದೆ ಪಟಿಯಾಲಾದ ಮಹಾರಾಜರಾಗಿ ಹೆಸರಾಗಿದ್ದವರು. ತಪಸ್ವೀಜಿ ಜನ್ಮನಾಮ ರಾಜಕುಮಾರ್ ಕೃಷ್ಣ ಸಿಂಗ್. ಇವರು ಬಾಲ್ಯದಲ್ಲಿ ‘ನಾನು ವಿಶ್ವಾಮಿತ್ರ ಮಹರ್ಷಿಯಂತೆ ತಪಸ್ಸು ಮಾಡುತ್ತೇನೆ’ ಎನ್ನುತ್ತ ರಾಜಭವನದ ಉದ್ಯಾನದಲ್ಲಿ ಧ್ಯಾನಸ್ಥರಾಗುತ್ತಿದ್ದುದುಂಟು. ತರುಣಾವಸ್ಥೆಯಲ್ಲಿ ಮುಸಲ್ಮಾನರ ಮೇಲೆ ಯುದ್ಧಮಾಡುವ ಪ್ರಸಂಗ ಆಗಾಗ ಬರುತ್ತಿತ್ತು. ಸುಮಾರು 55 ವರ್ಷ ಇಂಥ ರಾಜಕಾರ್ಯದಲ್ಲೇ ಕಳೆಯಬೇಕಾಯಿತು. ಒಮ್ಮೆ ಮೊಘಲ್ ಚಕ್ರವರ್ತಿ ಬಹಾದ್ದೂರ್ ಷಾ ಭೇಟಿಗೆಂದು ದೆಹಲಿಗೆ ತೆರಳಿದರು. ಆ ಪ್ರಸಂಗದಲ್ಲಿ ಜ್ಞಾನವೃದ್ಧ ಬಹಾದ್ದೂರ್ ಷಾ ‘ಕೃಷ್ಣಸಿಂಗರೇ, ನಾನು ಚಕ್ರವರ್ತಿಯಾದರೂ ಮನಸ್ಸಿಗೆ ಶಾಂತಿಯಿಲ್ಲ. ಮನುಷ್ಯ ಸುಖಿಯಾಗಿರಬೇಕಾದರೆ ದೇವರನ್ನು ಪ್ರೀತಿಯಿಂದ ಭಜಿಸಬೇಕು. ಯಾರು ದೇವರನ್ನು ಸ್ಮರಿಸುತ್ತಾರೋ ಅವರಿಗೆ ಆನಂದ ಪ್ರಾಪ್ತವಾಗುತ್ತದೆ’ ಎಂದರು. ಈ ಮಾತು ಕೃಷ್ಣಸಿಂಗರಿಗೆ ಉಪದೇಶವೇ ಆಗಿ ವೈರಾಗ್ಯಭಾವ ಸ್ಪುರಿಸಿತು.

ಪಂಜಾಬ್ ಪ್ರಾಂತ್ಯಕ್ಕೆ ಹಿಂತಿರುಗುವ ಬದಲು ಕೃಷ್ಣ ಸಿಂಗ್ ಷಹರನ್​ಪುರ ತಲುಪಿ ವಸ್ತ್ರಭೂಷಣಗಳನ್ನೂ ಕತ್ತಿ-ಕಠಾರಿ-ಕವಚಗಳನ್ನೂ ಬಿಚ್ಚಿದರು. ತಲೆಯ ರುಮಾಲು ಹರಿದು ಅದರಲ್ಲಿ ವಜ್ರ-ವೈಡೂರ್ಯಗಳನ್ನು ಗಂಟುಕಟ್ಟಿ ಕುದುರೆಯ ಕಡಿವಾಣಕ್ಕೆ ನೇತುಹಾಕಿ, ಅದರ ತಲೆ ನೇವರಿಸಿ ಬೀಳ್ಕೊಟ್ಟರು. ಕೌಪೀನ ಧರಿಸಿ ಹರಿದ್ವಾರದ ಕಡೆಗೆ ಪಯಣಿಸಿದರು. ಗಂಗಾನದಿಯು ‘ಸಪ್ತಸರೋವರ’ ಎಂಬಲ್ಲಿ ಏಳು ಧಾರೆಗಳಾಗಿ ಹರಿಯುತ್ತಿತ್ತು. ಅಲ್ಲಿ ಗುಡಿಸಲು ಕಟ್ಟಿಕೊಂಡು ಕಂದಮೂಲ ತಿನ್ನುತ್ತ ವೈರಾಗ್ಯದಿಂದ ಏಕಾಂತವಾಸದಲ್ಲಿ ತೊಡಗಿದರು. ಹೀಗಿರುವಾಗ, ಯೋಗಿಯೂ ಜ್ಞಾನಿಯೂ ಆದ ಗುರುವಿನ ದರ್ಶನವಾಯಿತು. ಅವರಿಂದ ಹಠಯೋಗದ ಎಲ್ಲ ಕ್ರಿಯೆಗಳನ್ನು ಕಲಿತು ‘ವಿಷ್ಣುದಾಸ್’ ಆಗಿ ಪರಿವರ್ತಿತರಾದರು. ಗುರುವಿನಿಂದ ಪ್ರಾಣಾಯಾಮ ಕಲಿತು ದೀರ್ಘಕಾಲ ಸಮಾಧಿಸ್ಥಿತಿಯಲ್ಲಿರುವ ರಹಸ್ಯವನ್ನರಿತರು, ಯೋಗವಿದ್ಯೆ-ಬ್ರಹ್ಮವಿದ್ಯೆಗಳನ್ನು ಕಲಿತರು. ನಂತರ ಗಂಗಾನದಿಯ ಮಗ್ಗುಲಲ್ಲೇ ಸಂಚರಿಸುತ್ತ ಬದರಿಕಾಶ್ರಮಕ್ಕೆ ಬಂದು ಅಲ್ಲಿದ್ದ ಗುಹೆಯೊಂದರಲ್ಲಿ 6 ವರ್ಷ ಸಮಾಧಿಸ್ಥಿತರಾದರು. ನಂತರ ಹೃಷೀಕೇಶಕ್ಕೆ ಬಂದು ಲಕ್ಷ್ಮಣಝುೂಲಾ ಸಮೀಪದಲ್ಲಿ ಪರ್ಣಕುಟೀರ ಕಟ್ಟಿಕೊಂಡು ಕೆಲಕಾಲವಿದ್ದರು. ತರುವಾಯ ‘ಗೋಮುಖ’ ಎಂಬಲ್ಲಿಗೆ ನಡೆದುಹೋಗಿ ಸ್ವರ್ಗಾರೋಹಣ ಬೆಟ್ಟವನ್ನು ದಾಟಿದರು. ಅಲ್ಲಿ ಕೃಪಾಲ್ ಸಿಂಗ್ ಎಂಬ ಪಂಜಾಬಿ ಸಾಧುವಿನ ಪರಿಚಯವಾಯಿತು. ಅವರೊಡನೆ ಹಿಮಾಲಯ ಪ್ರಾಂತ್ಯದ ನಾನಾ ಕ್ಷೇತ್ರಗಳಲ್ಲಿ ಸಂಚರಿಸಿದರು, ಮಹಾಪುರುಷರ ದರ್ಶನ ಪಡೆದರು. ಎಂಟು ಅಡಿ ಎತ್ತರ ಅದಕ್ಕೆ ತಕ್ಕ ಗಾತ್ರವಿದ್ದ ಬಲಶಾಲಿ ಯೋಗಿಯೊಬ್ಬರನ್ನು ಕಂಡರು. ಅವರ ಕಂಗಳಲ್ಲಿ ದಿವ್ಯತೇಜಸ್ಸಿತ್ತು. ಎದೆ-ಸೊಂಟದ ಸುತ್ತ ಭೂರ್ಜಪತ್ರದ ಎಲೆಯೇ ವಸ್ತ್ರವಾಗಿತ್ತು. ಅವರು ಇವರಿಬ್ಬರನ್ನೂ ಗುಹೆಯೊಳಗೆ ಕರೆತಂದು ಹಾಲು-ಹಣ್ಣು ನೀಡಿ ಉಪಚರಿಸಿದರು, ಸಂಸ್ಕೃತದಲ್ಲಿ ಮಾತನಾಡಿ ತಮ್ಮ ಪೂರ್ವವೃತ್ತಾಂತ ತಿಳಿಸಿದರು. ನಂತರ ಆಧ್ಯಾತ್ಮಿಕ ಅನುಭವಗಳನ್ನು ತಿಳಿಸಿ ಬ್ರಹ್ಮವಿದ್ಯೆಯನ್ನು ಉಪದೇಶಿಸಿದರು. ತಪಸ್ವೀಜಿ ಅಲ್ಲಿಂದ ನೇಪಾಳಕ್ಕೆ ಬಂದು ಶಿವನ ದರ್ಶನ ಪಡೆದು, ನಂತರ ಅಸ್ಸಾಂನ ಪರಶುರಾಮಕುಂಡಕ್ಕೆ ಬಂದು ಧ್ಯಾನಮಗ್ನರಾದರು. ಆಗ ಅವರ ವಯಸ್ಸು 95. ಕಣ್ಣು ಮಂಜಾಗಿದ್ದವು, ಕಿವಿ ಸ್ವಲ್ಪ ಕಿವುಡಾಗಿತ್ತು, ಬೆನ್ನು ಬಾಗಿತ್ತು. ಬಾಯಲ್ಲಿ ಹಲ್ಲಿರಲಿಲ್ಲ.

ಪರಿವ್ರಾಜಕ ಬದುಕಿನಲ್ಲಿ ತಪಸ್ವೀಜಿ ಅನೇಕ ದೇಶಗಳನ್ನು ಸುತ್ತಿದರು. ಇರಾವತಿ ನದಿಯ ಮಗ್ಗುಲಲ್ಲಿ ನಡೆಯುವಾಗ ಗುಹೆಯೊಂದನ್ನು ಕಂಡು ಅಲ್ಲಿ ವಿಶ್ರಮಿಸಲು ಸಂಕಲ್ಪಿಸಿದರು. ಸ್ವಲ್ಪಹೊತ್ತಿಗೆ ದಿಗಂಬರ ಸಾಧುವೊಬ್ಬ ಒಳಗೆ ಪ್ರವೇಶಿಸಿದ. ಆತನ ಕಣ್ಣುಗಳು ಪಂಜಿನಂತೆ ಉರಿಯುತ್ತಿದ್ದವು. ಆತ ತಂತ್ರಯೋಗದ ಸಿದ್ಧಿ ಪಡೆದಿದ್ದ. ನಂತರ ಹಲವೆಡೆ ತಪಸ್ಸು ಮಾಡುತ್ತ ಶ್ರೀಕೃಷ್ಣನ ಆಜ್ಞೆಯಂತೆ ವ್ರಜಭೂಮಿಗೆ ಪಯಾಣಿಸಿದರು. ಕಾಶಿ, ಬೋಧಗಯಾ, ನೈಮಿಷಾರಣ್ಯ ಕ್ಷೇತ್ರಗಳನ್ನು ತಪಶ್ಚರ್ಯುಯಲ್ಲಿ ಕಳೆದು ಯಮುನಾ ತೀರಕ್ಕೆ ಬಂದು, ಕದಂಬವೃಕ್ಷದಡಿ ಹರಿಧ್ಯಾನದಲ್ಲಿ ಮಗ್ನರಾದರು. ಶ್ರೀಕೃಷ್ಣನ ಅಂತರ್ವಾಣಿಯಂತೆ ಕೋಟಬನ್ ವನದಲ್ಲಿ ನೆಲೆಸಿದರು. ಸಾವಿರಾರು ಕದಂಬವೃಕ್ಷಗಳಿದ್ದ ಆ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ನವಿಲುಗಳಿದ್ದವು, ಶೀತಲಕುಂಡ್ ಎಂಬ ಕಲ್ಯಾಣಿಯಲ್ಲಿ ಸ್ಪಟಿಕಶುಭ್ರ ನೀರಿತ್ತು. ವನದಲ್ಲಿದ್ದ ಮಣ್ಣಿನ ಮಂಟಪ ಅವರ ನೆಲೆಯಾಯಿತು. ಅಲ್ಲಿ 4 ತಿಂಗಳು ‘ಪಂಚಾಗ್ನಿ’ ತಪಸ್ಸು ಮಾಡಿದ ನಂತರ ಚಳಿಗಾಲದ 4 ತಿಂಗಳಲ್ಲಿ ‘ಜಲಧಾರ’ ತಪಸ್ಸು ಮಾಡಿದರು. ಹೀಗೆ, 12 ವರ್ಷ ದೀರ್ಘಕಾಲದ ತಪಶ್ಚರ್ಯುಯಲ್ಲಿಯೇ ಕಳೆದರು.

ಅವರು ರಾಮೇಶ್ವರ ತೀರ್ಥಯಾತ್ರೆ ಮುಗಿಸಿ ಬೆಂಗಳೂರಿಗೆ ಬಂದು ಭಕ್ತರ ಮನೆಗಳಲ್ಲಿ ಉಳಿದು, ಮೈಸೂರಿಗೆ ಪ್ರಯಾಣಿಸಿದರು. ಚಾಮುಂಡೇಶ್ವರಿ ದರ್ಶನ ಮಾಡಿ, ನಂಜನಗೂಡು ಕ್ಷೇತ್ರಯಾತ್ರೆ ಮುಗಿಸಿ, ಮದರಾಸಿಗೆ ಹೊರಟು ಅಲ್ಲಿಂದ ವಿಷ್ಣುಧಾಮ ಆಶ್ರಮಕ್ಕೆ ಹೋದರು. ಈ ನಡುವೆ ಅನೇಕರಿಗೆ ಸಂನ್ಯಾಸದೀಕ್ಷೆ ನೀಡಿದರು. 1953ರಲ್ಲಿ ಬೆಂಗಳೂರಿನ ನಂದಿಬೆಟ್ಟದ ಸಮೀಪ ಶ್ರೀವಿಷ್ಣು ಆಶ್ರಮ ಸ್ಥಾಪಿಸಿ, ಕೆಲಕಾಲ ಅಲ್ಲಿದ್ದು ಕೋಟಬನ್​ನ ವಿಷ್ಣುಧಾಮ ಆಶ್ರಮಕ್ಕೆ ಹಿಂದಿರುಗಿದರು.

ಕಾಯಕಲ್ಪದ ಸಿದ್ಧಿ: ಪರಶುರಾಮ ಕುಂಡದ ಬಳಿ ತಪಸ್ವೀಜಿ ಕೆಲಕಾಲ ಇದ್ದುದು ಸರಿಯಷ್ಟೆ. ಅಲ್ಲಿನ ಗುಡ್ಡವೊಂದು ಇವರ ಗಮನ ಸೆಳೆಯಿತು. ಅಲ್ಲಿ ನಿರ್ವಿಘ್ನವಾಗಿ ತಪಸ್ಸು ಮಾಡಬಹುದೆನಿಸಿ ತೆರಳಿದಾಗ ಅಲ್ಲೊಂದು ಗುಡಿಸಲು ಕಂಡಿತು. ಅಲ್ಲಿದ್ದ ಋಷಿಯ ಪರಿಚಯವಾಯಿತು. ಆತನಲ್ಲಿ ಪ್ರಾಸಂಗಿಕವಾಗಿ, ‘ನನ್ನ ಶರೀರ ಕೃಶವಾಗಿದೆ; ಯೋಗಬಲದಿಂದ ಇದನ್ನು ತ್ಯಾಗಮಾಡಲು ಸಂಕಲ್ಪಿಸಿದ್ದೇನೆ’ ಎಂದರು. ಆಗ ಆತ ‘ಶರೀರತ್ಯಾಗ ಬೇಡ; ಕಾಯಕಲ್ಪ ರಹಸ್ಯವಿದ್ಯೆಯನ್ನು ಉಪದೇಶಿಸುತ್ತೇನೆ. ಅದರ ಫಲವಾಗಿ ನಿಮ್ಮ ಶರೀರ ತರುಣಾವಸ್ಥೆಗೆ ಬರುತ್ತದೆ’ ಎಂದರು. ಆ ವಿದ್ಯೆಯ ಪ್ರಯೋಗದಿಂದ 40 ದಿನಗಳಲ್ಲಿ ಶರೀರದ ಪ್ರತಿಯೊಂದು ಭಾಗವೂ ಪ್ರಾಣಶಕ್ತಿ ಚಲನದಿಂದ ಚೈತನ್ಯಭರಿತವಾಯಿತು. ನಂತರ ಆ ಋಷಿಯಿಂದ ಕಾಯಕಲ್ಪದ ತತ್ತ್ವ ಮತ್ತು ಚಿಕಿತ್ಸಾವಿಧಿಯ ಅನುಗ್ರಹವಾಯಿತು. ತಪಸ್ವೀಜಿ ಕೋಟಬನ್ ವನದಲ್ಲಿ ನೆಲೆಯೂರಿದ್ದಾಗ ಅವರಿಗೆ 150 ವರ್ಷಗಳಾಗಿದ್ದವು. ಆಗ 2ನೇ ಬಾರಿ ಕಾಯಕಲ್ಪ ಚಿಕಿತ್ಸೆ ಮಾಡಿಕೊಂಡರು. ಪರಶುರಾಮಕುಂಡದ ಋಷಿಗಳ ಉಪದೇಶದಿಂದ ಕಲ್ಪಚಿಕಿತ್ಸೆಯ ರಹಸ್ಯವೆಲ್ಲ ತಿಳಿದಿತ್ತು. ಒಂದು ವರ್ಷಪೂರ್ತಿ ಕಲ್ಪಚಿಕಿತ್ಸೆಯ ಔಷಧ ಸೇವಿಸಬೇಕೆಂದು ಸಂಕಲ್ಪಿಸಿದರು. ಆ ವೇಳೆಗೆ ಸರಿಯಾಗಿ ಲಾಲ್​ದಾಸ್, ಹರಿದಾಸ್ ಎಂಬ ತರುಣರು ಶಿಷ್ಯರಾಗಿ ಸೇರಿಕೊಂಡರು. 365 ದಿನಗಳವರೆಗೆ ಔಷಧ ಸೇವಿಸುತ್ತ ಶ್ರೀಕೃಷ್ಣನ ಧ್ಯಾನದಲ್ಲಿ ಕಳೆದರು. ಒಂದು ಸಂವತ್ಸರ ಮುಕ್ತಾಯವಾದ ದಿನ ಹೊರಬಂದು ಭಕ್ತರಿಗೆ ದರ್ಶನ ಕೊಟ್ಟರು. ಅವರ ಶರೀರ ತಾರುಣ್ಯದಿಂದ ನಳನಳಿಸುತ್ತಿತ್ತು. 1935ರಲ್ಲಿ ಪಂಡಿತ ಮದನಮೋಹನ ಮಾಳವೀಯ, ಪಂಡಿತ್ ಹರದತ್ತಶಾಸ್ತ್ರಿ ಇವರಿಂದ ಕಲ್ಪಚಿಕಿತ್ಸೆ ಪಡೆದರು.

ಮಹಾತ್ಮರ ಸಂದರ್ಶನ: ತಪಸ್ವೀಜಿ ಜೀವಿತ ಕಾಲದಲ್ಲಿ ಸಂದರ್ಶಿಸಿದ ಮಹಾತ್ಮರಲ್ಲಿ ಶ್ರೀರಾಮಕೃಷ್ಣ ಪರಮಹಂಸ ಪ್ರಮುಖರು. ಕಲ್ಕತ್ತಾದ ದಕ್ಷಿಣೇಶ್ವರಕ್ಕೆ ಬಂದ ತಪಸ್ವೀಜಿ, ಶ್ರೀರಾಮಕೃಷ್ಣ ಪರಮಹಂಸರ ದರ್ಶನ ಮಾಡಿ ಸಂಭಾಷಿಸಿದರು. ರಾಮಕೃಷ್ಣರು ‘ನಾನು ಪೂಜಿಸುವ ಕಾಳಿಕಾದೇವಿಯು ಸೃಷ್ಟಿ, ಸ್ಥಿತಿ, ಪ್ರಳಯಕಾರಣಳಾದ ಭಗವತಿ ಆಗಿದ್ದಾಳೆ’ ಎಂದರು. ಆಗ ತಪಸ್ವೀಜಿ ‘ಕಾಳಿದೇವಿಯ ರೂಪವು ಭಗವಂತನ ಮಾಯಾಶಕ್ತಿಯ ಅನೇಕ ರೂಪಗಳಲ್ಲಿ ಒಂದಾಗಿದೆ’ ಎಂದು ಉತ್ತರಿಸಿದರು. ಈ ಮಾತಿಗೆ ಪರಮಹಂಸರು ಹರ್ಷಗೊಂಡರು. ಈ ನಡುವೆ ಬಾಬಾ ಪೂರ್ಣದಾಸ್ ಅವರೊಡನೆ ಗೌರೀಶಂಕರಕ್ಕೆ ಹೋಗಿ ಶಿವನದರ್ಶನ ಮಾಡಿದರು. ಅಲ್ಲಿನ ಗುಹೆಯಲ್ಲಿ ಅಘೊರಿ ಸಾಧುವೊಬ್ಬ 500 ವರ್ಷಗಳಿಂದ ವಾಸಿಸುತ್ತಿದ್ದುದನ್ನು ತಿಳಿದು ಅಚ್ಚರಿಗೊಂಡರು. ನಂತರ ಹಲವು ಕ್ಷೇತ್ರಗಳನ್ನು ಸಂದರ್ಶಿಸಿ ಶ್ರೀವಿಷ್ಣುಆಶ್ರಮಕ್ಕೆ ಬಂದರು. 1941ರ ಏಪ್ರಿಲ್​ನಲ್ಲಿ ಶೃಂಗೇರಿಯಿಂದ ಶ್ರೀಕೃಷ್ಣಾನಂದಭಾರತಿ ಎಂಬ ಸಾಧುಗಳು ತಪಸ್ವೀಜಿಯನ್ನು ನೋಡಲು ಬಂದವರು, ‘ಇಂತಹ ತೇಜಸ್ವಿಯೋಗಿಯನ್ನು ಎಲ್ಲಿಯೂ ನೋಡಿರಲಿಲ್ಲ’ ಎಂದು ಉದ್ಗರಿಸಿದರು. ತಪಸ್ವೀಜಿ ಅವರಿಗೆ ಆತ್ಮದ ರಹಸ್ಯವನ್ನು ಉಪದೇಶಿಸಿದರು.

1951ರ ಆಗಸ್ಟ್​ನಲ್ಲಿ ಬೆಂಗಳೂರಿನ ದಿಬ್ಬಗಿರಿ ಬೆಟ್ಟದ ಶ್ರೀವಿಷ್ಣುಆಶ್ರಮದಲ್ಲಿ ಕೆಲಕಾಲ ತಪಶ್ಚರ್ಯುಯಲ್ಲಿದ್ದರು. ಆಂಧ್ರಪ್ರದೇಶದ ಬುಲುಸು ಸಾಂಬಮೂರ್ತಿ ಮತ್ತು ಮಾಜಿ ಮಂತ್ರಿ ಸಿದ್ಧಲಿಂಗಯ್ಯ ಮಹರ್ಷಿಗಳ ಸೇವೆಮಾಡಿ ಅನುಗ್ರಹಿತರಾದರು. ಸಾಂಬಮೂರ್ತಿಯವರ ಆಗ್ರಹದ ಮೇರೆಗೆ ಕಾಕಿನಾಡ ಪಟ್ಟಣಕ್ಕೆ ಬಂದರು ತಪಸ್ವೀಜಿ. ಅಲ್ಲಿ 2 ತಿಂಗಳಲ್ಲೇ ಆಶ್ರಮವೊಂದು ನಿರ್ವಣಗೊಂಡು ‘ಯೋಗಾಶ್ರಮ’ವೆಂದು ಪ್ರಸಿದ್ಧವಾಯಿತು. ತಪಸ್ವೀಜಿ ಕಾಕಿನಾಡದಲ್ಲಿರುವಾಗ ದ್ರಾಕ್ಷಾರಾಂ ಎಂಬ ಗ್ರಾಮದ ಸಮೀಪ ಬಾಲಯೋಗಿ ಒಬ್ಬರು ಇರುವುದು ತಿಳಿದು, ನೋಡಲೆಂದು ಹೋದರು. ಗದ್ದೆಯ ಮಧ್ಯದಲ್ಲಿನ ಸಣ್ಣ ಕೊಠಡಿಯಲ್ಲಿ ಆ ಯೋಗಿ ಸಮಾಧಿಸ್ಥರಾಗಿದ್ದರು. ತಪಸ್ವೀಜಿ ತಲೆಬಗ್ಗಿಸಿ ವಿನೀತರಾಗಿ ನಮಿಸಿದರು. ಆ ಬಾಲಯೋಗಿಗಳ ದೃಷ್ಟಿ ಭ್ರೂಮಧ್ಯದಲ್ಲಿ ನೆಲೆಸಿತ್ತು, ಮುಖದಲ್ಲಿ ಪರಮಶಾಂತಿಯಿತ್ತು. ಶರೀರ ಬಂಗಾರದ ಬಣ್ಣದಲ್ಲಿತ್ತು. ಅಲ್ಲಿ 20 ನಿಮಿಷವಿದ್ದು ಯೋಗಾಶ್ರಮಕ್ಕೆ ಬಂದರು. ಕೆಲದಿನಗಳ ನಂತರ ಭಕ್ತನೊಬ್ಬ ತಪಸ್ವೀಜಿ ಅವರನ್ನು ಬಾಲಶಿವಯೋಗಿಗಳ ಬಳಿಗೆ ಕರೆತಂದ. ಆಗ ಅವರು ಜಾಗ್ರತಾವಸ್ಥೆಯಲ್ಲಿ ಹಸನ್ಮುಖದಿಂದ ಕುಳಿತಿದ್ದರು. ತಪಸ್ವೀಜಿ ಅವರಿಗೆ ಪ್ರಣಾಮ ಮಾಡಿ ಸ್ವಾಗತಿಸಿ ತಾವು ಕುಳಿತಿದ್ದ ಮಂಚದ ಮೇಲೆ ಕುಳಿತುಕೊಳ್ಳುವಂತೆ ಪ್ರಾರ್ಥಿಸಿದರು. ನಂತರ ಬಾಲಶಿವಯೋಗಿಗಳು ‘ತಮ್ಮ ದರ್ಶನದಿಂದ ಸಂತೋಷವಾಯಿತು’ ಎಂದು ಮಧುರವಾಗಿ ನುಡಿದರು. ಅವರ ಬಳಿಯಿದ್ದ ಶೇಷಗಿರಿರಾಯರು ಭಾಷಾಂತರಿಸಿ ತಪಸ್ವೀಜಿಗೆ ತಿಳಿಸಿದರು. ಇಬ್ಬರ ನಡುವೆ ಕೆಲಕಾಲ ಮೌನಸಂಭಾಷಣೆ ನಡೆಯಿತು. ನಂತರ ಎಲ್ಲರೂ ಹೊರಬಂದರು. ಬಾಲಶಿವಯೋಗಿಗಳು ಭ್ರೂಮಧ್ಯದಲ್ಲಿ ದೃಷ್ಟಿಯನ್ನಿಟ್ಟು ಸಮಾಧಿಸ್ಥರಾದರು.

ಕೊನೆಯ ದಿನಗಳು: 1953ರಲ್ಲಿ ಮೈಸೂರು ಮಹಾರಾಜರಿಗೆ ದರ್ಶನಕೊಟ್ಟು ಕೆಲಕಾಲ ವಿಷ್ಣು ಆಶ್ರಮದಲ್ಲಿದ್ದು ಭಕ್ತರಿಗೆ ಅನುಗ್ರಹಸಂದೇಶ ನೀಡಿ ಶ್ರೀವಿಷ್ಣುಧಾಮ ಆಶ್ರಮಕ್ಕೆ ಹೋಗಿ ನೆಲೆನಿಂತರು. 1955ರಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಎರಡು ತೊಡೆಗಳ ನಡುವೆ ಮಾಂಸಖಂಡಗಳು ಏಕಾಏಕಿ ಉಬ್ಬಿದವು. ಶಿಷ್ಯರು ಗಾಬರಿಗೊಂಡರು. ‘ಇದೆಲ್ಲ ಪ್ರಕೃತಿಯ ವಿಕಾರ. ಶರೀರದಲ್ಲಾಗುವ ವ್ಯತ್ಯಾಸಗಳೆಲ್ಲ ಪ್ರಕೃತಿಯ ಕಾರ್ಯವೇ ಆಗಿದೆ’ ಎಂದು ಮೌನವಾದರು. ಅವರ ಭಕ್ತರಲ್ಲಿ ಒಬ್ಬರಾದ ಬಿಹಾರಿಲಾಲ್ ವಶಿಷ್ಠ ವೈದ್ಯಕೀಯ ಪರಿಶೀಲನೆಗೆಂದು ಮಹರ್ಷಿಗಳನ್ನು ಝಾನ್ಸಿಪಟ್ಟಣಕ್ಕೆ ಕರೆತಂದರು. ವೈದ್ಯರ ಸಲಹೆಯಂತೆ ತೊಡೆಯಲ್ಲಿ ಬೆಳೆದಿದ್ದ ಮಾಂಸಖಂಡಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಕೆಲದಿನಗಳ ನಂತರ ಸುಂದರಲಾಲ್ ಎಂಬ ಸತ್ಪುರುಷರು ಮಹರ್ಷಿಗಳನ್ನು ತಮ್ಮ ಬಂಗಲೆಗೆ ಕರೆತಂದರು. ಸ್ವಾಮಿ ನಾರಾಯಣದಾಸರು, ಸ್ವಾಮಿ ಸಚ್ಚಿದಾನಂದರು ಗುರುದೇವರ ಶುಶ್ರೂಷೆ ಮಾಡುತ್ತಿದ್ದರು. 2-3 ತಿಂಗಳಾದರೂ ಗಾಯ ಮಾಯಲಿಲ್ಲ. ದೇಹ ದಿನೇದಿನೆ ಕೃಶವಾಗುತ್ತ 1955ರ ಅಕ್ಟೋಬರ್ ವೇಳೆಗೆ ಅತೀವ ದುರ್ಬಲವಾಯಿತು. ಅಕ್ಟೋಬರ್ 12ರ ಹೊತ್ತಿಗೆ ಇನ್ನಷ್ಟು ವಿಷಮವಾಯಿತು. ಅವರನ್ನು ನೋಡಿಕೊಳ್ಳುತ್ತಿದ್ದ ಡಾ.ದಾಮ್ಲೆ ‘ಸ್ವಾಮೀಜಿ ಈ ದಿನ ಹೇಗಿರುವಿರಿ?’ ಎಂದು ಪ್ರಶ್ನಿಸಿದ್ದಕ್ಕೆ ಮಹರ್ಷಿಗಳು ಮುಗುಳ್ನಗುತ್ತ ‘ಹಮ್ ಆನಂದ್​ಸೇ ರಹತೇ ಹೈ’ ಎಂದುತ್ತರಿಸಿದರು.

ಮಧ್ಯಾಹ್ನ ದಾಟಿತು. ಶಾಂತವಾಗಿ ಮಲಗಿದ್ದ ಮಹರ್ಷಿಗಳು ಕಣ್ಣುತೆರೆದು ಸುತ್ತಲೂ ನಿಂತಿದ್ದ ಭಕ್ತರನ್ನು ನೋಡಿ ಒಂದು ಬೆರಳನ್ನು ಮಾತ್ರ ತೋರಿಸಿ, ‘ಇಹಲೋಕದ ಲೀಲೆ ಇನ್ನು ಒಂದು ಗಂಟೆ ಮಾತ್ರವೇ’ ಎಂದು ಸಾಂಕೇತಿಕವಾಗಿ ತಿಳಿಸಿದರು. ಸಂಜೆ ಐದರ ಸಮಯ. ಮಂಚದ ಮೇಲೆ ಮಲಗಿದ್ದ ಮಹರ್ಷಿಗಳನ್ನು ಅವರ ಸೂಚನೆಯಂತೆ ನೆಲದ ಮೇಲೆ ಮಲಗಿಸಲಾಯಿತು. ಎಲ್ಲರೂ ರಾಮನಾಮ ಜಪಿಸತೊಡಗಿದರು. ಉಸಿರನ್ನು ಊರ್ಧ್ವಮುಖವಾಗಿ ಎಳೆದುಕೊಂಡ ಮಹರ್ಷಿಗಳು ನಂತರ ಕೈಗಳನ್ನು ನಡುವಿನ ಉಭಯಪಾರ್ಶ್ವಗಳ ಮೇಲೆ ಇಟ್ಟುಕೊಂಡರು. ತರುವಾಯ ಎದೆಯ ಪಕ್ಕೆಗಳಲ್ಲಿಟ್ಟು ಬಲವಾಗಿ ಅಂಗೈಗಳಿಂದ ಒತ್ತಿದರು. ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಸ್ಥಿರಗೊಳಿಸಿದರು. ದೇಹವನ್ನು ನೆಟ್ಟಗೆ ಮಾಡಿಕೊಂಡು ಸ್ಥಿರಕಾಯರಾದರು. ನಂತರ ಪದ್ಮಾಸನಸ್ಥರಾಗಿ ಓಂಕಾರವನ್ನು ಉಚ್ಚರಿಸಿದರು. ಶ್ವಾಸವು ಪ್ರಣವದಲ್ಲಿ ಲೀನವಾಯಿತು.

ಹೀಗೆ, ತಪಸ್ವೀಜಿ ಮಹಾರಾಜರು 185 ವರ್ಷ ಜೀವಿಸಿದ್ದು ಯೌಗಿಕಪ್ರಭೆಯನ್ನು ವಿಶ್ವಕ್ಕೆ ಹರಡಿ 1955ರ ಅಕ್ಟೋಬರ್ 12ರ ಸಂಜೆ 5ಕ್ಕೆ ಮಹಾಸಮಾಧಿ ಹೊಂದಿದರು. ದೆಹಲಿ-ಆಗ್ರಾ ನಡುವಿನ ಕೋಶಿ ಎಂಬಲ್ಲಿ ಅವರ ಸಮಾಧಿಯನ್ನು ಮಾಡಲಾಯಿತು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....