24 C
Bangalore
Sunday, December 8, 2019

ಹಿಮಾಲಯದ ಚಿಕಿತ್ಸಕ ಸಂತ ಸ್ವಾಮಿ ರಾಮ

Latest News

ಮದುವೆ ಮನೆಗೆ ತಡವಾಗಿ ಬಂದ ವರ, ಸಿಟ್ಟಿಗೆದ್ದು ಮತ್ತೊಬ್ಬನ ಕೈ ಹಿಡಿದ ವಧು; ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಮದುವೆ ಮುರಿದುಬಿತ್ತು !

ಲಖನೌ: ಬಿಜ್ನೋರ್​ನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ತನ್ನದೇ ಮದುವೆಯಾದರೂ ತಡವಾಗಿ ಛತ್ರಕ್ಕೆ ಆಗಮಿಸಿದ ವರನಿಗೆ ವಧು ನೀಡಿದ ಶಿಕ್ಷೆ ಈಗ ಸಿಕ್ಕಾಪಟೆ ಸುದ್ದಿ ಮಾಡುತ್ತಿದೆ. ವರ ಹಾಗೂ...

ಹಿಂದು ವಿರೋಧಿ, ಭಾರತ ವಿರೋಧಿ ಭಾವನೆಗಳಿಗೆ ಅವಕಾಶವಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್

ಲಂಡನ್: ಬ್ರಿಟನ್​ನಲ್ಲಿ ವರ್ಣಭೇದ ನೀತಿ ಅಥವಾ ಅಂತಹ ಭಾವನೆಗಳಿಗೆ ಅವಕಾಶವಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್ ಹೇಳಿದ್ದಾರೆ. ಲಂಡನ್​ನ ಸ್ವಾಮಿ ನಾರಾಯಣ ಮಂದಿರದಲ್ಲಿ...

ತಿರುಪತಿ ಲಡ್ಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ; ಅವಘಡದಲ್ಲಿ ಹಾನಿಯಾಗಿಲ್ಲ ಎಂದ ದೇಗುಲದ ಅಧಿಕಾರಿ

ತಿರುಪತಿ (ಆಂಧ್ರಪ್ರದೇಶ): ವಿಶ್ವವಿಖ್ಯಾತ ಭಕ್ತಿ ಕೇಂದ್ರ ತಿರುಪತಿ ತಿರುಮಲದ ಲಡ್ಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಅದೃಷ್ಟವಶಾತ್​ ಯಾವುದೇ ಹಾನಿಯಾಗಿಲ್ಲ. ತಿರುಮಲ ಬಾಲಾಜಿ ದೇಗುಲದ ಸಮೀಪದ...

ಆತ್ಮಶುದ್ಧಿಗೆ ಅಹಿಂಸೆ ಪ್ರಮುಖ ಸಾಧನ

ಚಿಕ್ಕಮಗಳೂರು: ಆತ್ಮಶುದ್ಧಿಗೆ ಪ್ರಮುಖ ಸಾಧನವಾಗಿರುವ ಅಹಿಂಸಾ ಮಾರ್ಗ ರಾಜಕೀಯ, ಸಾಮಾಜಿಕ ವಿಕಾಸಕ್ಕೂ ಎಡೆಮಾಡಿಕೊಡುತ್ತದೆ ಎಂದು ಜೈನ್ ತೇರಾಪಂಥ್ ಧರ್ಮ ಸಂಘದ 11ನೇ ಆಚಾರ್ಯ...

ಯಾಂತ್ರಿಕ ಬದುಕಿನಲ್ಲಿ ಸಂವೇದನೆ ಮರೆ

ಕಡೂರು: ಯಾಂತ್ರೀಕೃತ ಬದುಕಿನಲ್ಲಿ ಸಂವೇದನೆ ಕಳೆದುಕೊಂಡು ಮಾನವೀಯತೆ ಮರೆತಿದ್ದೇವೆ ಎಂದು ಪ್ರಾಧ್ಯಾಪಕ ಡಾ. ಮಲ್ಲೇಶ್ ಗೌಡ ವಿಷಾದಿಸಿದರು. ...

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ರಾಮ ಅವರ ಜನ್ಮನಾಮ ಬ್ರಿಜ್ ಕಿಶೋರ್ ಕುಮಾರ್. ಹಿಮಾಲಯ ಪ್ರಾಂತ್ಯದ ಘರ್​ವಾಲ್ ಪ್ರದೇಶದ ಟೋಲಿ ಎಂಬ ಕುಗ್ರಾಮದಲ್ಲಿ 1925ರಲ್ಲಿ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, ಏಳೆಂಟು ವರ್ಷವಿದ್ದಾಗ ಹೆತ್ತವರನ್ನು ಕಳೆದುಕೊಂಡರು. ನಂತರ ‘ಬೆಂಗಾಲಿ ಬಾಬಾ’ ಎಂದು ಪ್ರಸಿದ್ಧರಾಗಿದ್ದ ಮಹಾಗುರುವಿನ ಆಶ್ರಯಕ್ಕೆ ಬಂದರು. ಟಿಬೆಟ್​ನ ಒಳಪ್ರದೇಶವೊಂದರಲ್ಲಿನ ಧ್ಯಾನಸ್ಥ ಮಹಾಯೋಗಿಯಾಗಿದ್ದ ಬೆಂಗಾಲಿ ಬಾಬಾರನ್ನು ‘ಗ್ರಾ್ಯಂಡ್​ವಾಸ್ಟರ್’ ಎಂದು ಕರೆಯುತ್ತಿದ್ದುದುಂಟು. ಯೋಗವಿಜ್ಞಾನ ಮತ್ತು ಆಧ್ಯಾತ್ಮಿಕ ಸಿದ್ಧಸ್ಥಿತಿ ಪಡೆದಿದ್ದ ಇವರಿಗೆ, ಹಿಮಾಲಯ ಪರ್ವತಪ್ರದೇಶವೇ ಮನೆಯಾಗಿತ್ತು. ರಾಮರಿಗೋ ಹಿಮಾಲಯ ಗಿರಿಶಿಖರಗಳೇ ಆಧ್ಯಾತ್ಮಿಕ ತಂದೆ-ತಾಯಿ. 14ರ ಪ್ರಾಯದಲ್ಲಿದ್ದಾಗ ಇವರನ್ನು ಅಪರಿಚಿತ ಸಾಧುವೊಬ್ಬರು ಆಶೀರ್ವದಿಸಿ ಪುರಾತನ ಬರಹವಿದ್ದ ಭೂಜರ್Ìಪತ್ರವನ್ನು ನೀಡಿದರು. ‘ಪ್ರಾಪಂಚಿಕತೆಯಿಂದ ದೂರವಿರು. ಆಧ್ಯಾತ್ಮಿಕಪಥದಲ್ಲಿ ನಿನ್ನ ನಡೆ ಸಾಗಲಿ’ ಎಂದು ಅದರಲ್ಲಿ ಬರೆದಿತ್ತು.

ಸಂಸ್ಕೃತ ಪಂಡಿತರೂ ಉನ್ನತ ಅಧ್ಯಾತ್ಮ ಜೀವಿಯೂ ಆಗಿದ್ದ ರಾಮರ ತಂದೆ, ಸಾಧಾರಣ ಸ್ಥಿತಿವಂತರೂ ಉದಾರಿ ಭೂಮಾಲೀಕರೂ ಆಗಿದ್ದರು. ಆಧ್ಯಾತ್ಮಿಕ ಸಾಧನೆಯಲ್ಲಿ ಸಮಸ್ಯೆ ಎದುರಾದ ಕಾರಣ ಇವರು 6 ತಿಂಗಳು ಹರಿದ್ವಾರದ ಮಾನಸದೇವಿ ಅರಣ್ಯಪ್ರದೇಶದಲ್ಲಿ ಗಾಢಧ್ಯಾನದಲ್ಲಿ ತೊಡಗಿದ್ದರು. ನಂತರ ಬೆಂಗಾಲಿ ಬಾಬಾ ಮಾರ್ಗದರ್ಶನದಲ್ಲಿ ಸಮಸ್ಯೆ ನೀಗಿಸಿಕೊಂಡು ಮನೆಗೆ ಹಿಂತಿರುಗಿದರು. ಗುರುದೇವರ ಆಶೀರ್ವಾದದಂತೆ ಸ್ವಾಮಿ ರಾಮ ಜನಿಸಿದಾಗ, ಅವರ ತಾಯಿಗೆ 43, ತಂದೆಗೆ 60ರ ಪ್ರಾಯ. ಆದಿನ ಬೆಂಗಾಲಿ ಬಾಬಾ ಬಂದು ‘ಈತನನ್ನು ಸಂರಕ್ಷಣೆ ಮಾಡಿ; ಆಮೇಲೆ ಕರೆದೊಯ್ಯುತ್ತೇನೆ’ ಎಂದು ಸೂಚಿಸಿದರು. 3ನೆಯ ವರ್ಷದಲ್ಲಿದ್ದಾಗ ಗುರೂಜಿಯಿಂದ ಮಂತ್ರದೀಕ್ಷೆ ಪಡೆದ ರಾಮ, ಆ ಊರಿನ ಶಾಲೆಯಲ್ಲಿ ಕೆಲಕಾಲ ಅಭ್ಯಾಸ ಮಾಡಿದ್ದುಂಟು. ತಂದೆ-ತಾಯಿ ಕಾಲವಾದ ಮೇಲೆ ಗುರುದೇವರಲ್ಲಿಗೆ ಹೋಗಿ, ಸ್ವಲ್ಪಕಾಲ ಅವರ ಸಾನ್ನಿಧ್ಯದಲ್ಲಿದ್ದು, ಗಂಗೋತ್ರಿಯಲ್ಲಿದ್ದ ಸಾಧಕವರೇಣ್ಯರಲ್ಲಿ ಶಾಸ್ತ್ರಗ್ರಂಥಗಳ ಅಧ್ಯಯನ ಮಾಡಿದರು. ಸದಾ ಸಹಜಸಮಾಧಿಯಲ್ಲೇ ಇರುತ್ತಿದ್ದ ಬೆಂಗಾಲಿ ಬಾಬಾ, ಹಿಮಾಲಯದ ಯೋಗಿಗಳಲ್ಲೇ ಶ್ರೇಷ್ಠರಾಗಿದ್ದರು. ಸಾಧನೆಯ ಹಾದಿಯಲ್ಲಿರುವವರಿಗೆ, ಆತ್ಮಜ್ಞಾನವನ್ನು ಅರಸುತ್ತಿರುವವರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಗುರುಕರುಣೆ: ರಾಮರ ಮಾರ್ಗದರ್ಶಕರಾಗಿದ್ದ ಬೆಂಗಾಲಿ ಬಾಬಾ, ಸ್ವಾರ್ಥತ್ಯಾಗ ಮಾಡಬೇಕೆಂದು ಆಗಾಗ ನಿರ್ದೇಶಿಸುತ್ತಿದ್ದುದುಂಟು. ಒಮ್ಮೆ ವೃದ್ಧಸಂತರೊಬ್ಬರು ಬಂದಾಗ ‘ನಿನ್ನ ಊಟವನ್ನು ಈದಿನ ಕೊಡು’ ಎಂದು ಗುರೂಜಿ ರಾಮರಿಗೆ ಆದೇಶಿಸಿದರು. ‘ನಾನೂ ಹಸಿದಿದ್ದೇನೆ. ನಾಳೆವರೆಗೂ ಊಟ ಸಿಗುವುದಿಲ್ಲ’ ಎಂದು ರಾಮ ಹಠಹಿಡಿದರು. ಆದರೆ ಗುರೂಜಿ ‘ಊಟ ಕೊಡು; ಅದು ನನ್ನಾಜ್ಞೆ’ ಎಂದರು. ವೃದ್ಧಸಂತರು 4 ದಿನದಿಂದ ಊಟವನ್ನೇ ಮಾಡಿರಲಿಲ್ಲವೆಂಬ ವಿಚಾರ ರಾಮರಿಗೆ ತಿಳಿಯಿತು. ಊಟಮಾಡಿದ ವೃದ್ಧರು ‘ದೇವರು ನಿನಗೆ ಒಳ್ಳೆಯದು ಮಾಡಲಿ. ಆಹಾರ ಸಿಗುವವರೆಗೂ ನಿನಗೆ ಹಸಿವೇ ಆಗದಿರಲಿ’ ಎಂದು ಆಶೀರ್ವದಿಸಿದರು. ‘ಸ್ವಾರ್ಥ-ನಿಸ್ವಾರ್ಥ, ಪ್ರೀತಿ-ದ್ವೇಷ ಇವುಗಳ ನಡುವೆ ಇರುವ ತೆಳ್ಳನೆಯ ತೆರೆಯನ್ನು ಸರಿಸಿಕೊಳ್ಳಬೇಕು; ಪ್ರತಿಫಲಾಪೇಕ್ಷೆಯಿಲ್ಲದ ಪರೋಪಕಾರಕ್ಕೆ ಮುಂದಾದರೆ, ಸಂತೃಪ್ತ ಮನೋಭಾವ ಮೂಡುತ್ತದೆ’ ಎಂಬುದನ್ನು ರಾಮರು ಈ ಪ್ರಸಂಗದಿಂದ ಅರಿತರು. ಗುರೂಜಿ ಒಮ್ಮೆ ರಾಮರ ಬಳಿ ಬಂದು ‘ಎದ್ದೇಳು’ ಎಂದರು. ಆದರೆ, ರಾಮರು ಎದ್ದೇಳಲಿಲ್ಲ. ‘ನಾನಿಲ್ಲಿರುವುದು ಗೊತ್ತಿದೆಯಾ?’ ಎಂದು ಕೇಳಿದರು. ‘ಗೊತ್ತಿದೆ’ ಎಂಬ ಉತ್ತರ ರಾಮರಿಂದ. ‘ಹಾಗಾದರೆ ಏಕೆ ಏಳಲಿಲ್ಲ?’ ಎಂದರು ಗುರೂಜಿ. ಈ ಪ್ರಸಂಗಕ್ಕೆ ಕಾರಣ, ವಾಸ್ತವವಾಗಿ ಆಗ ರಾಮರು ಧ್ಯಾನದಲ್ಲಿ ಲೀನನಾದಂತೆ ನಟಿಸುತ್ತಿದ್ದುದು! ಹೀಗೆ, ಶಿಷ್ಯನ ಪ್ರವೃತ್ತಿಯನ್ನೂ ಪ್ರಾಮಾಣಿಕತೆಯನ್ನೂ ಒರೆಹಚ್ಚುತ್ತಿದ್ದರು. ಬಗೆಬಗೆಯ ಕಠಿಣ ಪರೀಕ್ಷೆಗಳಿಗೆ ಈಡುಮಾಡುತ್ತಿದ್ದರು. ಒಂದು ಸ್ಥಳ ತೋರಿಸಿ ‘ಇಲ್ಲಿಯೇ ನಿಂತಿರು’ ಎಂದು ಹೇಳಿ 3 ದಿನ ಅಲ್ಲಿಯೇ ನಿಲ್ಲಿಸಿ, ಆತ್ಮಸಂಯಮ ಮತ್ತು ಆತ್ಮಾವಲಂಬನ ಕಲಿಸಲು ಪರೀಕ್ಷೆಗೆ ಒಳಪಡಿಸುತ್ತಿದ್ದರು! ರಾಮರಿಗೆ 15ನೇ ವಯಸ್ಸಿನಲ್ಲಿ ಗುರೂಜಿ 2ನೇ ಹಂತದ ಮಂತ್ರದೀಕ್ಷೆ ನೀಡಿದರು, ಅತಿಕ್ಲಿಷ್ಟ ವೇದಾಂತ ಸಾಹಿತ್ಯದ ಅಧ್ಯಯನಕ್ಕೆ ಈಡುಮಾಡಿದರು. ಆದರೆ, ಅದು ಸಂಪೂರ್ಣ ಅರ್ಥವಾಗಲಿಲ್ಲ. ಆಗ ಸ್ವಾಮೀಜಿಯೊಬ್ಬರು ‘ಸ್ವಾನುಭಾವ ಇಲ್ಲದಿದ್ದಲ್ಲಿ ವೇದಾಂತಸೂತ್ರಗಳು ಅರ್ಥವಾಗವು’ ಎಂದು ಹೇಳಿ ಅಪರೋಕ್ಷ ಮತ್ತು ಪರೋಕ್ಷಜ್ಞಾನಗಳ ನಡುವಿನ ಅಂತರವನ್ನು ಅನುಭವಪೂರ್ವಕವಾಗಿ ತಿಳಿಯಬೇಕೆಂದು ಮನವರಿಕೆ ಮಾಡಿಕೊಟ್ಟರು. ರಾಮರು ಗುರೂಜಿ ಬಳಿ ಕಲಿಯುತ್ತಿರುವಾಗಲೇ ಅನೇಕ ಸಾಧುಸಂತರ ಜೀವನವಿಧಾನದಿಂದ ಲೌಕಿಕ ಹಾಗೂ ಪಾರಮಾರ್ಥಿಕ ಸತ್ಯವನ್ನು ಅರಿತರು, ಇದಕ್ಕಾಗಿ ಭಾರತದ ವಿವಿಧೆಡೆ ತಿರುಗಾಡಿದರು.

ಸಂತರ ಒಡನಾಟ: ಗುರುಗಳ ನಿರ್ದೇಶನದಂತೆ ರಾಮರು ಅನೇಕ ಸಾಧು-ಸಂತರನ್ನು ಭೇಟಿಯಾದರು. ಬಾಯಿಂದ ಬೆಂಕಿ ಹೊರಡಿಸಬಲ್ಲ ಸ್ವಾಮಿಯೊಬ್ಬರನ್ನು ಒಮ್ಮೆ ಕಂಡು, ಇದೇ ನಿಜಜ್ಞಾನವೆಂದು ತಿಳಿದು ಗುರುಗಳ ಬಳಿ ಆ ವಿಷಯ ತಿಳಿಸಿದಾಗ ಗುರೂಜಿ, ರಾಮರ ಜತೆ ಆತನಲ್ಲಿಗೆ ಬಂದರು. 20 ವರ್ಷಗಳ ಸಾಧನೆ ಮಾಡಿ ಈ ಪರಿಣತಿ ಪಡೆದುದಾಗಿ ಆತ ಹೆಮ್ಮೆಯಿಂದ ತಿಳಿಸಿದಾಗ, ‘ಬೆಂಕಿಕಡ್ಡಿ ಒಂದೇ ಸೆಕೆಂಡಿನಲ್ಲಿ ಬೆಂಕಿ ಬರಿಸುವಾಗ, ಬಾಯಿಂದ ಬೆಂಕಿ ಬರಿಸಲೆಂದೇ 20 ವರ್ಷ ವ್ಯಯಮಾಡಿದ ಮೂರ್ಖತನ’ವನ್ನು ಆತನಿಗೆ ಮನವರಿಕೆ ಮಾಡಿಕೊಟ್ಟರು. ‘ಇಂಥ ಸಿದ್ಧಿಗಳು ಸಾಧನಾಮಾರ್ಗದ ಸೂಚನೆಗಳಷ್ಟೇ; ಆಧ್ಯಾತ್ಮಿಕತೆಗೂ ಈ ಶಕ್ತಿಗಳಿಗೂ ನಂಟಿಲ್ಲ’ ಎಂದು ರಾಮರಿಗೆ ಗುರೂಜಿ ತಿಳಿಸಿದರು. ನೀಮ್ರೋಲಿಬಾಬಾ ಎಂಬ ಪ್ರಸಿದ್ಧ ಮಹಾತ್ಮರು ಹಿಮಾಲಯದ ನೈನಿತಾಲ್​ನಲ್ಲಿದ್ದರು. ಅವರ ಬಳಿಯಿದ್ದಾಗ, ನಿಸ್ವಾರ್ಥತೆ ಅಧ್ಯಾತ್ಮಜೀವಿಯ ಪ್ರಮುಖಲಕ್ಷಣವೆಂಬುದನ್ನು ರಾಮರು ಈ ಪ್ರಸಂಗದಿಂದ ಅರಿತರು- ಶ್ರೀಮಂತನೊಬ್ಬ ಹಣದ ಮೂಟೆಯೊಡನೆ ಇವರನ್ನು ನೋಡಲು ಬಂದ. ನೋಟುಗಳನ್ನು ಹರಡಿ ಅದರ ಮೇಲೆ ಕುಳಿತ ಬಾಬಾ, ‘ಇದು ಮೆತ್ತೆಯಂತೆ ಅನುಕೂಲಕರವಾಗಿಲ್ಲವಲ್ಲ, ಇದನ್ನು ತೆಗೆದುಕೊಂಡು ನಾನೇನು ಮಾಡಲಿ?’ ಎಂದು ಹೇಳಿ ಅವನ್ನು ಶ್ರೀಮಂತನಿಗೆ ಮರಳಿಸಿದರು. ಪ್ರಪಂಚದಲ್ಲಿ ಆನಂದವಾಗಿರಲು ಒಂದಷ್ಟು ಹಣದ ಅಗತ್ಯವಿದೆ ನಿಜ; ಆದರೆ, ಹೆಚ್ಚುಹಣ ಹೊಂದುವುದು ದುರವಸ್ಥೆಯ ಮೂಲವೆಂದು ಶ್ರೀಮಂತನಿಗೆ ಮನವರಿಕೆ ಮಾಡಿಕೊಟ್ಟರು.

ರಾಮರು ಒಮ್ಮೆ ಮಾತಾಜಿಯನ್ನು ಅಸ್ಸಾಮಿನಲ್ಲಿ ಭೇಟಿಯಾದರು. ಆಗವರಿಗೆ 98 ವರ್ಷ, ಕಾಮಾಖ್ಯ ದೇವಳದ ಪಕ್ಕದಲ್ಲಿ ವಾಸಮಾಡುತ್ತಿದ್ದರು. ಪ್ರತಿನಿತ್ಯ ಮುಂಜಾನೆ 3 ಗಂಟೆಗೆ ದೇವಳಕ್ಕೆ ಭೇಟಿನೀಡುತ್ತಿದ್ದರು. ಇದು ರಹಸ್ಯಮಯ ಪೂಜೆಯಾಗಿತ್ತು. ರಾಮರು ಒಮ್ಮೆ ಮಾತಾಜಿ ಗಮನಕ್ಕೆ ಬಾರದಂತೆ ದೇವಳಕ್ಕೆ ಹೋದರು. ಅಂದು ಬೆಳದಿಂಗಳ ರಾತ್ರಿ. ಉರಿಯುವ ಎಣ್ಣೆದೀಪ ಇಟ್ಟುಕೊಂಡು ಮಾತಾಜಿ ಏಕಾಂಗಿಯಾಗಿ ಕುಳಿತಿದ್ದರು. ರಾಮರು ಉತ್ತರದ್ವಾರದ ಹೊರಗಿರುವ ಸುಳಿವನ್ನು ಗ್ರಹಿಸಿ ‘ಒಳಗೆ ಬರಬೇಡ, ನಾನು ದೇವಿ. ಇಲ್ಲಿಂದ ಹೊರಟುಹೋಗು’ ಎಂದರು. ಈ ಮಾತನ್ನು ಕೇಳಿದ ರಾಮರು ಒಳಗೆ ಇಣುಕಿದರು. ಮಾತಾಜಿ ಹೊರಗಡೆ ನುಗ್ಗಿಬಂದರು. ಅವರು ಪೂರ್ಣ ಬೆತ್ತಲಾಗಿದ್ದರು, ಮೂಳೆ ಹಾಗೂ ಚರ್ಮ ಮಿರುಗುತ್ತಿದ್ದವು. ಅವರ ಹೊಳೆವ ಕಣ್ಣು ಕಂಡು ರಾಮರು ಬೆರಗಾದರು. ಆಕೆ ರಾಮರನ್ನು ಬೆತ್ತದಿಂದ ಹೊಡೆದು ಹೊರಗಟ್ಟಿದರು. ಮರುದಿನ ತನ್ನ ಕೊಠಡಿಗೆ ಕರೆದು ಅಡ್ಡಹೆಸರಿನಿಂದ ಉಚ್ಚರಿಸಿ ರಾಮರನ್ನು ಚಕಿತಗೊಳಿಸಿದರು. ನಂತರ ಬಲವಾಗಿ ಸೆಳೆದು ಅಪ್ಪಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ತಲೆಸವರಿ ಆಶೀರ್ವದಿಸಿ ಕಳುಹಿಸಿದರು. ರಾಮರು ಅಲ್ಲಿ ಎರಡೂವರೆ ತಿಂಗಳಿದ್ದು ‘ಜಾಗ್ರತ್-ಸ್ವಪ್ನ-ಸುಷುಪ್ತಿ-ತುರೀಯ’ ಈ ನಾಲ್ಕು ಅವಸ್ಥೆಗಳ ರಹಸ್ಯವನ್ನು ಮಾತಾಜಿಯಿಂದ ಪಡೆದು ಧನ್ಯರಾದರು. ಹೀಗೆ ರಾಮರು ಅನೇಕ ಸಂತ-ಮಹಾಂತರಿಂದ ಬೆಳಕು ಪಡೆದರು. ಅವರು 150 ವಯಸ್ಸಿನ ದೇವಹರಬಾಬಾ, ಹಠಯೋಗದ ತತ್ವಾಲಬಾಬಾ, ಕರ್ಣಪ್ರಯಾಗದ ಗುಹೆಯಲ್ಲಿದ್ದ ಮಹಾನ್ ವಿರಾಗಿ ಪ್ರಭಾತಸ್ವಾಮಿ, ಹಿಮಾಲಯದ ಉತ್ತರಕಾಶಿಯಲ್ಲಿದ್ದ ವಿಷ್ಣು ಮಹಾರಾಜ್, ಗಂಗೋತ್ರಿಯ ಮಹಾಸಾಧು ಕೃಷ್ಣಾಶ್ರಮ, ಮಹಾತಪಸ್ವಿನೀ ಮಾ ಆನಂದಮಯೀ ಮುಂತಾದ ಸಂತರ ಸಂಪರ್ಕದಿಂದ ಆಧ್ಯಾತ್ಮಿಕ ಅನುಭವ ಪಡೆದರು. ರಾಮರು 1949ರಲ್ಲಿ ಕರವೀರಪೀಠದ ಶಂಕರಾಚಾರ್ಯರಾಗಿ ಪೀಠಾಧಿಕಾರ ಸ್ವೀಕರಿಸಬೇಕಾಯಿತು. ಬಾಲಗಂಗಾಧರ ತಿಲಕರ ಆಪ್ತರಾಗಿದ್ದ ಕುರ್ತಕೋಟಿ ಮಹಾಭಾಗವತರು ಆಗ ಕರವೀರಪೀಠದ ಸಂನ್ಯಾಸಿಯಾಗಿದ್ದು, ಪೀಠಕ್ಕೆ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು. ರಾಮರ ಹಿನ್ನೆಲೆ ತಿಳಿದು ಉತ್ತರಾಧಿಕಾರಿಯನ್ನಾಗಿ ಮಾಡಿದಾಗ ರಾಮರ ವಯಸ್ಸು 30! ಆದರೆ ಪೀಠವನ್ನು ಆವರಿಸಿದ್ದ ಪ್ರಾಪಂಚಿಕ ಲೋಭನೆಗಳಿಗೆ ಬೇಸತ್ತು 1951ರಲ್ಲಿ ಪೀಠತ್ಯಾಗ ಮಾಡಿದರು.

1949ರ ಚಳಿಗಾಲದಲ್ಲೊಮ್ಮೆ ರಾಮರು ಅರುಣಾಚಲಕ್ಕೆ ತೆರಳಿದಾಗ ರಮಣಮಹರ್ಷಿಗಳು ಮೌನಾಚರಣೆಯಲ್ಲಿದ್ದರೂ, ರಾಮರಿಗೆ ವಿರಳ ಅನುಭವಗಳಾದವು. ‘ರಮಣರ ಬಳಿ ಹೃದಯಬಿಚ್ಚಿ ಕೂತರೆ ಸಾಕು ಆಂತರ್ಯದ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ; ಒಬ್ಬ ಮಹಾತ್ಮರ ಸಾನ್ನಿಧ್ಯದಲ್ಲಿರುವುದು ಹಾಗೂ ಸವಿಕಲ್ಪ ಸಮಾಧಿಯನ್ನು ಅನುಭವಿಸುವುದು ಎರಡೂ ಒಂದೇ’ ಎನ್ನುವ ಅನುಭವ ಅವರಿಗಾಯಿತು. ರಾಮರು ಅರುಣಾಚಲದಲ್ಲಿದ್ದದ್ದು ಐದೇ ದಿನವಾದರೂ, ಅಲ್ಲಿಯ ಅಧ್ಯಾತ್ಮಕಂಪನಭರಿತ ಪರಿಸರ ಅವರಿಗೆ ಇಷ್ಟವಾಯಿತು. ನಂತರ ಪಾಂಡಿಚೇರಿಗೆ ಭೇಟಿನೀಡಿ ಶ್ರೀಮಾತೆ ಮತ್ತು ಶ್ರೀ ಅರವಿಂದರ ದರ್ಶನ ಮಾಡಿ, ಅಲ್ಲೇ 21 ದಿನಗಳನ್ನು ಕಳೆದರು. ಅರವಿಂದರಿಂದ ‘ಪೂರ್ಣಯೋಗದ ಅದ್ವೈತ’ವನ್ನು ತಿಳಿದುಕೊಂಡರು. ಈ ನಡುವೆ ಅಲಹಾಬಾದ್ ವಿ.ವಿ.ಯ ಡಾ. ಆರ್.ಡಿ. ರಾನಡೆ ಅವರನ್ನು ಹಲವು ಸಲ ಭೇಟಿಯಾಗಿ ವೇದಾಂತದರ್ಶನದ ಅಂತರಂಗವನ್ನು, ಅದಕ್ಕೆ ಸಮಾನವಾದ ಪಾಶ್ಚಾತ್ಯ ತತ್ತ್ವಚಿಂತನೆಯನ್ನು ಪಡೆದರು. ಇದಕ್ಕೂ ಮುನ್ನ, 1940ರಲ್ಲಿ ರಾಮರು ಗಂಗೋತ್ರಿಯ ದಂಡಿಸ್ವಾಮಿ ಶಿವಾನಂದರೊಂದಿಗೆ ಮಸ್ಸೂರಿಗೆ ತೆರಳಿದರು. ದಾರಿಯ ಮಧ್ಯೆ ರಾಜಾಪುರ ಎಂಬ ಹಳ್ಳಿಯಲ್ಲಿ ತಂಗಿದ್ದ ರವೀಂದ್ರನಾಥ ಟ್ಯಾಗೋರರನ್ನು ಭೇಟಿಯಾಗಿ ರ್ಚಚಿಸಿದರು. ಟ್ಯಾಗೋರರು ತಮ್ಮ ಕನಸಿನ ಶಾಂತಿನಿಕೇತನಕ್ಕೆ ಹೋಗಲು ರಾಮರಿಗೆ ಸೂಚಿಸಿದರು. ರಾಮರು ಅಲ್ಲಿ ಕೆಲಕಾಲವಿದ್ದು ಹಿಮಾಲಯಕ್ಕೆ ವಾಪಸಾದರು.

1946ರಲ್ಲಿ ರಾಮರು ಟಿಬೆಟ್​ನಲ್ಲಿದ್ದ ಪರಮಗುರುಗಳ ಭೇಟಿಗೆ ಹೊರಟರು. ಯಾವುದೇ ಪೂರ್ವಸಿದ್ಧತೆಯಿಲ್ಲದೆ ಗುರುಗಳು ಮತ್ತು ಪರಮಗುರುಗಳ ಮೇಲೆ ಭಾರಹಾಕಿ 2 ತಿಂಗಳ ದೀರ್ಘಪ್ರಯಾಣ ಮಾಡಿ ದುರ್ಗಮ ಹಾದಿಗಳನ್ನು ದಾಟಿ ಗಮ್ಯ ತಲುಪಿದರು. ಅಲ್ಲಿ ಪರಮಗುರುಗಳ ಅನುಗ್ರಹಕ್ಕೆ ಒಳಗಾದ ಕುಮಯೂನ್, ಹಿಮಾಲಯ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದ ಹರಿಯಾಖಾನ್ ಬಾಬಾರನ್ನು ದರ್ಶನ ಮಾಡಿದರು, ಲಾಮಾಗಳನ್ನು ಭೇಟಿಮಾಡಿದರು. ಬೌದ್ಧಮಠಗಳನ್ನು ಸುತ್ತಿದರು. ಕೊನೆಗೆ ಪರಮಗುರುಗಳ ಭೇಟಿಯಾಯಿತು. ಅವರು ಅಪರೂಪದ ಸಾಧನಾರಹಸ್ಯಗಳನ್ನು ರಾಮರಿಗೆ ತಿಳಿಸಿಕೊಟ್ಟರು. ರಾಮರ ಬೇಡಿಕೆಯಂತೆ ಪರಕಾಯಪ್ರವೇಶದ ಪ್ರಾಯೋಗಿಕ ವಿಧಾನವನ್ನು ತಿಳಿಸಿಕೊಟ್ಟರು. ನಂತರ ಸೌರವಿಜ್ಞಾನ ಮತ್ತು ತಂತ್ರದ ಕೆಲವು ವಿಧಾನಗಳನ್ನು ಕಲಿಸಿದರು. ಇನ್ನೊಬ್ಬರ ಮನಸ್ಸನ್ನು ಓದುವ ಕ್ರಮಗಳನ್ನು ತಿಳಿಸಿಕೊಟ್ಟರು. ಪರಮಗುರುಗಳ ಸೂಚನೆಯಂತೆ 1947ನೆಯ ಜೂನ್​ನಲ್ಲಿ ರಾಮರು ಭಾರತಕ್ಕೆ ಮರಳಲು ಸನ್ನದ್ಧರಾದರು. ಅವರು ಸಿಕ್ಕಿಂ ರಾಜಧಾನಿ ಗ್ಯಾಂಗ್​ಟಾಕ್ ತಲುಪಿದಾಗ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದಿತ್ತು.

ಅದು 1954ನೇ ಇಸವಿ. ಗುರೂಜಿ ಎಲ್ಲ ಶಿಷ್ಯರನ್ನು ಕರೆದರು. ಸ್ಥಿರಾಸನದಲ್ಲಿ ಕುಳಿತು ಕಣ್ಣುಮುಚ್ಚಿ ಓಂಕಾರ ಪಠಿಸುತ್ತ ದೇಹತ್ಯಾಗ ಮಾಡಿದರು. ನಂತರ ರಾಮರು ಅಮೆರಿಕ, ಯುರೋಪ್, ಜರ್ಮನಿ ಪ್ರವಾಸ ಕೈಗೊಂಡರು. ಅಲ್ಲಿ ಅನೇಕರು ಶಿಷ್ಯರಾದರು, ಸಾಧನಾಮಂದಿರಗಳು ಪ್ರಾರಂಭಗೊಂಡವು. ಕಠ್ಮಂಡು ಪ್ರದೇಶದ ಧೂಲಿಖೇಲ್​ನಲ್ಲಿ ಮೊದಲ ಆಶ್ರಮ ಸ್ಥಾಪನೆಗೊಂಡಿತು. ‘ಹಿಮಾಲಯನ್ ಇನ್​ಸ್ಟಿಟ್ಯೂಟ್ ಆಫ್ ಯೋಗ, ಸೈನ್ಸ್ ಆಂಡ್ ಫಿಲಾಸಫಿ’ ಎಂಬ ಸಂಸ್ಥೆಯನ್ನು 1966ರಲ್ಲಿ ತೆರೆದರು. ಇದರ ಶಾಖೆಗಳು ವಿಶ್ವಾದ್ಯಂತ ಹಬ್ಬಿದವು. 1987ರಲ್ಲಿ ಡೆಹರಾಡೂನ್​ನಲ್ಲಿ ಸಾಮಾನ್ಯ ಜನರಿಗಾಗಿ ‘ಹಿಮಾಲಯನ್ ಇನ್​ಸ್ಟಿಟ್ಯೂಟ್ ಹಾಸ್ಪಿಟಲ್ ಟ್ರಸ್ಟ್’ ಸ್ಥಾಪನೆಗೊಂಡಿತು. ಇವರು ಬರೆದ ಗ್ರಂಥಗಳಲ್ಲಿ ‘ಎನ್​ಲೈಟನ್ಮೆಂಟ್ ವಿಥೌಟ್ ಗಾಡ್’ ಮತ್ತು ‘ಲೀವಿಂಗ್ ವಿಥ್ ದ ಹಿಮಾಲಯನ್ ಮಾಸ್ಟರ್ಸ್’ ಅಪೂರ್ವ ಅನುಭವಕಥನಗಳಾಗಿವೆ.

ಸ್ವಾಮಿ ರಾಮರು ಅದ್ವೈತವೇದಾಂತವನ್ನು ಜಗತ್ತಿನಾದ್ಯಂತ ಪಸರಿಸಿದರು. ಶ್ರೀವಿದ್ಯಾ ಉಪಾಸನೆಯನ್ನು ಸಮರಸಗೊಳಿಸಿ ಆರ್ಷ ಪರಂಪರೆಯ ಉನ್ನತಜ್ಞಾನವನ್ನು ತಿಳಿಸಿಕೊಟ್ಟರು. ಭಾರತೀಯ ತತ್ತ್ವಜ್ಞಾನದ ಗೊತ್ತುಗುರಿಗಳನ್ನು ಪ್ರಚುರಪಡಿಸಿದರು. ಜಗತ್ತಿನಾದ್ಯಂತ ಮಾನವೀಯತೆಯ ಬೆಳವಣಿಗೆಗಾಗಿ ಸುತ್ತಿದರು, ಬಡವರ ದನಿ ಆಲಿಸಿದರು. ತಮ್ಮ ಪುಸ್ತಕಗಳು, ಉಪನ್ಯಾಸಗಳು ಮತ್ತು ಆತ್ಮಿಕ ಮಾರ್ಗದರ್ಶನದಿಂದ ಪ್ರಸಿದ್ಧಿ ಪಡೆದ ಸ್ವಾಮಿ ರಾಮ ಅವರು 1996ರ ನವೆಂಬರ್ 13ರಂದು ದೇಹ ತ್ಯಜಿಸಿದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Stay connected

278,749FansLike
582FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...