21 C
Bengaluru
Wednesday, January 22, 2020

ಮಹಾತಪಸ್ವಿನೀ ಶ್ರೀ ಆನಂದಮಯೀ ಮಾ

Latest News

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸ್​ ವಿಚಾರಣೆ ವೇಳೆ ಆರೋಪಿ ಆದಿತ್ಯರಾವ್ ಹೇಳಿದ್ದೇನು?​

ಬೆಂಗಳೂರು: ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದಾಗಿ ಆರೋಪಿ ಆದಿತ್ಯರಾವ್​ ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ವಿಐಪಿ ಗೆಸ್ಟ್ ಹೌಸ್​ನಲ್ಲಿ...

ನೇಪಾಳದ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದ 8 ಕೇರಳ ಪ್ರವಾಸಿಗರ ಸಾವಿಗೆ ಕಾರಣವೇನು?: ಕುಟುಂಬದವರಿಗೆ ಮೃತದೇಹ ಹಸ್ತಾಂತರ

ಕಾಠ್ಮಂಡು: ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​...

ಬಂಗಾಳದ ಮಾತೆ ಶ್ರೀಶಾರದಾದೇವಿ, ಪಾಂಡಿಚೆರಿಯ ಶ್ರೀಮಾತಾ ಹಾಗೂ ಅಕ್ಕ ನಿವೇದಿತಾ, ಇವರ ಸಾಲಿನಲ್ಲಿ ಹೆಸರಿಸಲೇಬೇಕಾದ ಮತ್ತೊಂದು ಹೆಸರು ಬಂಗಾಳದ ಶ್ರೀ ಮಾತಾ ಆನಂದಮಯೀ ಮಾ. ಇವರು ಶಾರದಾದೇವಿಯವರಂತೆ ಗೃಹತಪಸ್ವಿನಿಯೂ ಹೌದು, ಶ್ರೀಮಾತಾರಂತೆ ಜ್ಞಾನತಪಸ್ವಿನಿಯೂ ಹೌದು, ನಿವೇದಿತಾಳಂತೆ ಸಾಮಾಜಿಕ ತಪಸ್ವಿನಿಯೂ ಹೌದು. ಸೇವೆ, ತಪಸ್ಸು ಮತ್ತು ವೈರಾಗ್ಯಭೂಷಿತೆಯಾದ ಇವರು 86 ವರ್ಷ ಪೂರ್ಣತಪಸ್ವಿನಿಯಾಗಿ ಭಾರತದಾದ್ಯಂತ ಬೆಳಗಿದರು. ಉತ್ತರಭಾರತದ ಎಲ್ಲ ಆಧುನಿಕ ಸಂತರ ಗೌರವಕ್ಕೆ ಪಾತ್ರರಾದ ಆನಂದಮಯೀ ಮಾ ಅಲೌಕಿಕ ನಗುವಿನಿಂದಲೇ ಸಮಸ್ತರನ್ನು ಆಕರ್ಷಿಸಿದರು.

ಜನನ-ಬಾಲ್ಯ: ಇವರು ಪೂರ್ವಬಂಗಾಳದ (ಈಗಿನ ಬಾಂಗ್ಲಾದೇಶದ) ಬ್ರಹ್ಮನ್​ಬರಿಯ ಜಿಲ್ಲೆಯ ಖೆವರ ಎಂಬ ಗ್ರಾಮದಲ್ಲಿ, 1896ರ ಏಪ್ರಿಲ್ 30ರಂದು ವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಬಿಪಿನ್​ಬಿಹಾರಿ ಭಟ್ಟಾಚಾರ್ಯ, ತಾಯಿ ಮೋಕ್ಷದಾ ಸುಂದರೀದೇವಿ. ಆನಂದಮಯಿ ಬಾಲ್ಯದ ಹೆಸರು ನಿರ್ಮಲ ಸುಂದರೀದೇವಿ. ಮನೆಯಲ್ಲಿ ನಡೆಯುತ್ತಿದ್ದ ವೈಷ್ಣವ ಸಂಕೀರ್ತನೆಗಳನ್ನು ಕೇಳುತ್ತಲೇ ಬೆಳೆದ ಆನಂದಮಯಿ, ಖೆವರ ಗ್ರಾಮದ ಶಾಲೆಯೊಂದರಲ್ಲಿ 2 ವರ್ಷ ಕಾಲ ಶಿಕ್ಷಣವನ್ನು ಪೂರೈಸಿದರು. ಅಸಾಧಾರಣ ಗ್ರಹಣಸಾಮರ್ಥ್ಯವಿದ್ದ ಆಕೆ ಓರಗೆಯ ಗೆಳತಿಯರಿಗಿಂತ ಭಿನ್ನಳಾಗಿದ್ದಳು, ಆಟ-ಪಾಠಗಳಲ್ಲೂ ಮುಂದಿದ್ದಳು. ಆದರೆ, ಆಕೆಗೆ ಲೋಕದ ಚಟುವಟಿಕೆಗಳಿಗಿಂತ ಅಲೌಕಿಕ ಒಡನಾಟವೇ ಸದಾ ಇಷ್ಟವಾಗುತ್ತಿತ್ತು.

ಆನಂದಮಯಿ 13ರ ಪ್ರಾಯದವಳಾಗಿದ್ದಾಗ, ವಿಕ್ರಮಪುರದ ರಮಣಿ ಮೋಹನ್ ಚಕ್ರಬರ್ತಿ ಎಂಬಾತನೊಂದಿಗೆ ಆಗಿನ ಸಂಪ್ರದಾಯದಂತೆ 1908ರಲ್ಲಿ ಬಾಲ್ಯವಿವಾಹ ನೆರವೇರಿತು. ಮುಂದೆ ಈತ ಭೋಲ್​ನಾಥ್ ಎಂಬ ಹೆಸರಿನಿಂದ ಆನಂದಮಯಿಯ ಶಿಷ್ಯನಾದ. ಈ ದಂಪತಿ ಮದುವೆಯಾದ 5 ವರ್ಷಗಳ ಕಾಲ ಭಾವನ ಮನೆಯಲ್ಲೇ ಇದ್ದರು. ಆನಂದಮಯಿ ಅಲ್ಲಿ ಮನೆಗೆಲಸ ಮಾಡುತ್ತ ಉಳಿದ ವೇಳೆ ಧ್ಯಾನಸ್ಥಿತಿಯಲ್ಲಿ ಇರುತ್ತಿದ್ದುದೇ ಹೆಚ್ಚು. ಇವರ ಮನೆಯ ಸಮೀಪದಲ್ಲಿದ್ದ ಹರಕುಮಾರ್ ಎಂಬಾತ, ಆನಂದಮಯಿ ಸದಾ ಅಲೌಕಿಕ ಧ್ಯಾನಸ್ಥಿತಿಯಲ್ಲಿ ಇರುತ್ತಿದ್ದುದನ್ನು ಮೊದಲಿಗೆ ಗುರುತಿಸಿದ ಹಾಗೂ ಸುತ್ತಮುತ್ತಲಿನ ಎಲ್ಲರಿಗೂ ಅದನ್ನು ತಿಳಿಸಿದ, ಆಕೆಯನ್ನು ‘ಮಾ’ ಎಂದು ಕರೆಯಲಾರಂಭಿಸಿದ. ನಂತರ ಮಿಕ್ಕ ಜನರೂ ‘ಮಾ’ ಎಂದೇ ಕರೆಯಲಾರಂಭಿಸಿದರು. ದಂಪತಿ 5 ವರ್ಷ ಕಾಲ ವಿಕ್ರಮಪುರದಲ್ಲಿದ್ದಾಗ ಬೆಳಗ್ಗೆ ಮತ್ತು ಸಂಜೆ ಸಂಕೀರ್ತನೆಗಳಲ್ಲಿ ತೊಡಗುತ್ತಿದ್ದರು.

ಆನಂದಮಯಿಗೆ ಆಗ 17ರ ಪ್ರಾಯ. ಅಷ್ಟಗ್ರಾಮ ಎಂಬ ಪಟ್ಟಣದಲ್ಲಿ ಗಂಡ ಕೆಲಸಮಾಡುತ್ತಿದ್ದ. ಅಲ್ಲಿ ನೆಲೆಸಿದ್ದ ದಂಪತಿ 1918ರಲ್ಲಿ ಬಜಿತ್​ಪುರ ಎಂಬಲ್ಲಿಗೆ ಬಂದು 1924ರವರೆಗೆ ಅಲ್ಲೇ ಇದ್ದರು. ಹೆಂಡತಿಯ ಆಧ್ಯಾತ್ಮಿಕ ಸಾಧನೆ ಗಮನಿಸಿದ ಪತಿ ಆಕೆಯ ಶಿಷ್ಯನಾದ. ಅವರಿಬ್ಬರಲ್ಲಿ ಲೌಕಿಕಭಾವದ ಗಂಡ-ಹೆಂಡತಿ ಎಂಬ ಪ್ರಜ್ಞೆ ಕಳಚಿಹೋಯಿತು. 1922ರ ಆಗಸ್ಟ್​ನ ಹುಣ್ಣಿಮೆಯ ಮಧ್ಯರಾತ್ರಿಯಲ್ಲಿ ಆಕೆಯ ಆಧ್ಯಾತ್ಮಿಕ ಸಾಧನೆ ಔನ್ನತ್ಯ ತಲುಪಿತು. ಆಕೆ ಹರಿನಾಮ ಸಂಕೀರ್ತನದಲ್ಲಿ ಮುಳುಗಿಹೋದಳು. ಮುಖ ದಿವ್ಯತೆಯಿಂದ ಬೆಳಗಿತು, ಕಣ್ಣುಗಳಲ್ಲಿ ಅಲೌಕಿಕತೆ ಮನೆಮಾಡಿತು. ಜನರು ಆಕೆಯ ಅಲೌಕಿಕ ಆನಂದಕ್ಕೆ ಪರವಶರಾದರು. ಪ್ರಾಚೀನ ಹಿಂದೂ ಸಂಪ್ರದಾಯದಂತೆ ಶ್ರೀಕೃಷ್ಣನ ಆರಾಧನೆಯಲ್ಲಿ ಆನಂದಮಯಿ ತೊಡಗಿಕೊಂಡರು. ಈ ನಡುವೆ ಹರಿದ್ವಾರದ ದಿವ್ಯಜೀವನ ಸಂಘದ ಸ್ವಾಮಿ ಶಿವಾನಂದ ಸರಸ್ವತಿಯವರಿಂದ ಆಧ್ಯಾತ್ಮಿಕ ಅನುಗ್ರಹಕ್ಕೆ ಪಾತ್ರರಾದರು. ಅವರು ಒಮ್ಮೆ ಆನಂದಮಯಿ ಕುರಿತು ಹೇಳುವಾಗ ‘ಭಾರತೀಯ ಮಣ್ಣಿನ ಸಂಪೂರ್ಣ ವಿಕಸಿತ ಆಧ್ಯಾತ್ಮಿಕ ಪುಷ್ಪ’ ಎಂದು ಕರೆದದ್ದುಂಟು. ಮುಂದೆ ಪರಮಹಂಸ ಯೋಗಾನಂದರಿಂದ ‘ಆನಂದಮಯಿ’ ಎಂದು ಕರೆಸಿಕೊಂಡರು.

1924ರಲ್ಲಿ ಡಾಕಾದ ಶಾನಬಾಗ್ ಎಂಬ ಸ್ಥಳಕ್ಕೆ ದಂಪತಿ ಬಂದರು. ಡಾಕಾದ ನವಾಬನ ಸುಂದರ ಉದ್ಯಾನದ ಮೇಲ್ವಿಚಾರಕನಾಗಿ ಪತಿ ಕೆಲಸಕ್ಕೆ ಸೇರಿಕೊಂಡ. ಈ ನಡುವೆ ಆನಂದಮಯಿ ಸಾಮುದಾಯಿಕ ಕೀರ್ತನೆಗಳನ್ನು ಪ್ರಾರಂಭಿಸಿದರು. ಜ್ಯೋತಿಷ್​ಚಂದ್ರ ರೇ ಎಂಬಾತ ಇವರ ಮೊದಲ ಶಿಷ್ಯನಾದ. ಈತ ಮುಂದೆ ಬೈಜಿ ಎಂಬ ಹೆಸರಿನಿಂದ ಪ್ರಥಿತನಾದ. ಜ್ಯೋತಿಷ್​ಚಂದ್ರ 1929ರಲ್ಲಿ ಆನಂದಮಯಿಗಾಗಿ ಮೊದಲ ಆಶ್ರಮವನ್ನು ರಮಣ ಎಂಬಲ್ಲಿ ಸ್ಥಾಪಿಸಿಕೊಟ್ಟನು. ಸದಾ ಆತ್ಮಧ್ಯಾನದಲ್ಲಿ ಇರುತ್ತಿದ್ದ ಆನಂದಮಯಿ, ದೇಹದ ಪರಿವೆಯಿಲ್ಲದೆ, ಆನಂದದಲ್ಲಿಯೇ ಮಗ್ನರಾಗುತ್ತಿದ್ದುದುಂಟು. ಅವರ ಆಧ್ಯಾತ್ಮಿಕ ಔನ್ನತ್ಯ ಕಂಡ ಮಹಾಮಹೋಪಾಧ್ಯಾಯ ಗೋಪಿನಾಥ ಕವಿರಾಜರು ‘ಅನಕ್ಷರಸ್ಥ ಚಿಕ್ಕಮಗು’ ಎಂದು ಕೊಂಡಾಡಿದ್ದುಂಟು. ತ್ರಿಗುಣಸೇನ್ ಎಂಬುವವರು ಇವರನ್ನು ‘ಅನಾಘ್ರಾಣಿತ ಪುಷ್ಪ’ ಎಂದು ಕರೆದರು. ‘ನೃತ್ಯವು ಜನತೆ ಮತ್ತು ದೈವದ ನಡುವಣ ರೂಪಕ ಸಂಬಂಧ’ ಎಂಬುದಾಗಿ ನೃತ್ಯದ ಕುರಿತಾಗಿ ಆನಂದಮಯಿ ನೀಡಿದ ವ್ಯಾಖ್ಯಾನಕ್ಕೆ ಭಾರತದ ಪ್ರಸಿದ್ಧ ನೃತ್ಯಕಲಾವಿದ ಉದಯಶಂಕರ್ ಮಾರುಹೋಗಿದ್ದರು. ಆಧುನಿಕ ಭಾರತದ ಮಹಾಸಂತರಾದ ಉದಿಯಬಾಬಾ ಮತ್ತು ಪರಮಹಂಸ ಯೋಗಾನಂದರ ಸಮಕಾಲಿಕರಾಗಿದ್ದರು ಆನಂದಮಯಿ.

ಆಧ್ಯಾತ್ಮಿಕ ಆಂದೋಲನ: ಭಾರತದಾದ್ಯಂತ ಆಧ್ಯಾತ್ಮಿಕ ಆಂದೋಲನ ನಡೆಸಿದ ಆನಂದಮಯಿ, ದೈವ ಮತ್ತು ಭಕ್ತರ ನಡುವಣ ಪರದೆಯನ್ನು ನಿವಾರಿಸಿದರು. ಸಹಸ್ರಾರು ಶಿಷ್ಯರನ್ನು ಹೊಂದಿದ್ದ ಅವರು ಸತ್ಸಂಗಕ್ಕೆ ಎಂದೂ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ಅವರ ಬಂಗಾಳಿ ಪ್ರವಚನಗಳನ್ನು ಶಿಷ್ಯೆಯರು ಬರೆದುಕೊಳ್ಳುತ್ತಿದ್ದುದುಂಟು. ಸತ್ಸಂಗದ ಸಮಯದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಅವರು ತಮಗೆ ಹೊಳೆದಂತೆ ಬಂಗಾಳಿಯಲ್ಲಿಯೇ ಉತ್ತರ ನೀಡುತ್ತಿದ್ದರು. ಆನಂದಮಯಿಯವರ ಬಂಗಾಳಿ ಪ್ರವಚನಗಳನ್ನು ಶಿಷ್ಯೆ ಕಮಲಾ ಭಟ್ಟಾಚಾರ್ಜಿ ಇಂಗ್ಲಿಷಿಗೆ ಅನುವಾದಿಸಿ ನೀಡುತ್ತಿದ್ದರು. ‘ದೈವದ ಕರೆಯು ಪ್ರತಿಯೊಬ್ಬ ಜೀವಿಯ ಪೂಣೋದಯಕ್ಕೆ ಹಾದಿ’ ಎಂದು ಆಗಾಗ್ಗೆ ಪ್ರಾಸಂಗಿಕವಾಗಿ ಹೇಳುತ್ತಿದ್ದುದುಂಟು. ಆನಂದಮಯಿ ಎಂದೂ ಸಲಹೆಗಳನ್ನು ನೀಡುತ್ತಿರಲಿಲ್ಲ, ತಮ್ಮ ದೈವಿಕ ಭಾವನೆಗಳನ್ನಷ್ಟೇ ವ್ಯಕ್ತಪಡಿಸುತ್ತಿದ್ದರು. ಅವರು ಎಲ್ಲ ಬಗೆಯ ಆಧ್ಯಾತ್ಮಿಕ ವಾದಗಳನ್ನು ನಿರಾಕರಿಸುತ್ತಿದ್ದುದು ಮಾತ್ರವಲ್ಲದೆ, ಪ್ರತಿಯೊಬ್ಬರೂ ತಮ್ಮ ಅನುಭೂತಿಯಿಂದಲೇ ಆಧ್ಯಾತ್ಮಿಕ ನೆಲೆಗಳನ್ನು ಕಂಡುಕೊಳ್ಳಬೇಕು ಎನ್ನುತ್ತಿದ್ದರು. ಅವರು ಎಂದೂ ತಮ್ಮನ್ನು ‘ಗುರು’ ಎಂದು ಗುರುತಿಸಿಕೊಳ್ಳಲಿಲ್ಲ. ಎಲ್ಲ ಬಗೆಯ ಆಧ್ಯಾತ್ಮಿಕ ಮಾರ್ಗಗಳು ದೈವದ ಅನ್ವೇಷಣೆಗೆ ಕಾರಣ ಎನ್ನುತ್ತಿದ್ದರು. ಎಲ್ಲ ಆಧ್ಯಾತ್ಮಿಕ ಜೀವಿಗಳನ್ನು ತಮ್ಮತ್ತ ಸೆಳೆದುಕೊಂಡಿದ್ದರು. ವೈಷ್ಣವ, ಶೈವ, ತಾಂತ್ರಿಕ ಸಾಧಕರಲ್ಲದೆ, ಇಸ್ಲಾಂ, ಕ್ರೈಸ್ತ ಮತ್ತು ಜೊರಾಷ್ಟ್ರಿಯನ್ ಧಾರ್ವಿುಕ ಸಾಧಕರೂ ಇವರ ಸತ್ಸಂಗಗಳಲ್ಲಿ ಭಾಗವಹಿಸುತ್ತಿದ್ದರು. ಎಲ್ಲ ಬಗೆಯ ಆಧ್ಯಾತ್ಮಿಕ ಪಥಗಳನ್ನು ಆನಂದಮಯಿ ಒಂದೇ ಬಗೆಯಾಗಿ ಕಾಣುತ್ತಿದ್ದರು, ಬಹುತ್ವದಲ್ಲಿ ಏಕತ್ವವನ್ನು ಕಂಡುಕೊಂಡಿದ್ದರು. ಖೆರವ ಗ್ರಾಮದ ಮುಸ್ಲಿಮರು ಅವರನ್ನು ‘ನಮ್ಮೆಲ್ಲರ ತಾಯಿ’ ಎಂದೇ ಕರೆಯುತ್ತಿದ್ದರು. ಆಧ್ಯಾತ್ಮಿಕ ಸಾಧನೆಗೆ ಲಿಂಗಭೇದವಿಲ್ಲವೆಂದು ಘೊಷಿಸಿದ್ದ ಆನಂದಮಯಿ, ಸತ್ಸಂಗದ ಸಮಯದಲ್ಲಿ ಹಾಸ್ಯ, ಹಾಡು ಮತ್ತು ಆಧ್ಯಾತ್ಮಿಕ ಉಪದೇಶಗಳನ್ನು ಹಿತಮಿತವಾಗಿ ಬೆರೆಸಿ ಮಾತನಾಡುತ್ತಿದ್ದರು.

ಒಮ್ಮೆ ಶಿಷ್ಯನೊಬ್ಬನ ಆಗ್ರಹಕ್ಕೆ ಮಣಿದು, ಆನಂದಮಯಿ ಜೆಮ್ೆಡ್​ಪುರದ ಅವನ ಮನೆಗೆ ಹೋಗಿದ್ದರು. ಮರಣಾವಸ್ಥೆಯಲ್ಲಿದ್ದ ಅವನ ಹಣೆಯನ್ನು ಅವರು ರ್ಸ³ಸಿದೊಡನೆ ಆತನ ಮರಣಸಂಕಟ ನಿಂತು, ಕಾಯಿಲೆ ನಿವಾರಣೆಯಾಯಿತು. ಆತ ಆರೋಗ್ಯವಂತನಾದ. ಇಂಥ ಹಲವು ಘಟನೆಗಳು ಆನಂದಮಯಿ ಜೀವನದಲ್ಲಿ ನಡೆದುಹೋದವು.

ಆನಂದಮಯಿ ಬಂಗಾಳಿಯಲ್ಲಿ ಆಗಾಗ್ಗೆ ಸಣ್ಣ ಲೇಖನಗಳನ್ನು ಬರೆದದ್ದುಂಟು. ಪರಮಹಂಸ ಯೋಗಾನಂದರ ಸೋದರಸೊಸೆ ಅಮಿಯಾ ಬೋಸ್ ಅವನ್ನು ಓದಿ ಪ್ರಭಾವಿತರಾಗಿದ್ದರು. ಆಕೆ ಒಮ್ಮೆ ಪರಮಹಂಸ ಯೋಗಾನಂದರಿಗೆ ‘ನಿರ್ಮಲಾದೇವಿಯನ್ನು ನೋಡದೆ ಅಮೆರಿಕೆಗೆ ನೀನು ಹೋಗಕೂಡದು. ಆಕೆಯ ಮಹಿಮೆ ಅತಿಶಯವಾದದ್ದು’ ಎಂದಾಗ, ‘ಆ ಸಂತಳನ್ನು ನೋಡಬೇಕೆಂದು ನನಗೂ ಆಸೆ. ದೈವಸಾಕ್ಷಾತ್ಕಾರದ ಹಾದಿಯಲ್ಲಿ ಆಕೆ ತುಂಬಾ ಮುಂದುವರಿದಿದ್ದಾಳೆ. ಆಕೆಯ ಲೇಖನವನ್ನು ಓದಿದ್ದೇನೆ’ ಎಂದರು. ಕೆಲ ದಿನಗಳ ನಂತರ ಆನಂದಮಯಿ ಕಲ್ಕತ್ತೆಯ ಭವಾನಿಪುರದ ಶಿಷ್ಯನೊಬ್ಬನ ಮನೆಯಲ್ಲಿದ್ದಾರೆಂಬುದು ಯೋಗಾನಂದರಿಗೆ ತಿಳಿದು ಅವರು ಛಾಯಾಗ್ರಾಹಕನೊಡನೆ ಅಲ್ಲಿಗೆ ತೆರಳಿದರು. ಆನಂದಮಯಿ ಇದ್ದ ಮನೆಯನ್ನು ಸಮೀಪಿಸುತ್ತಿದ್ದಂತೆ ರಸ್ತೆಯಲ್ಲಿ ಅಪೂರ್ವ ದೃಶ್ಯವನ್ನು ಕಂಡರು. ತೆರೆದ ಕಾರಿನಲ್ಲಿ ನಿಂತಿದ್ದ ಆನಂದಮಯಿ ಸುತ್ತಮುತ್ತ ಇದ್ದ ನೂರಾರು ಶಿಷ್ಯರನ್ನು ಆಶೀರ್ವದಿಸುತ್ತಿದ್ದರು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯೋಗಾನಂದರನ್ನು ಕಂಡ ಆಕೆ ತಕ್ಷಣವೇ ಕಾರಿನಿಂದಿಳಿದು ಧಾವಿಸಿಬಂದು, ಬಂಗಾಳಿಯಲ್ಲಿ ‘ತಂದೆ ನೀನು ಬಂದೆಯಾ’ ಎನ್ನುತ್ತ ತೋಳಿನಿಂದ ಯೋಗಾನಂದರ ಕುತ್ತಿಗೆಯನ್ನು ಬಳಸಿ ಅವರ ಭುಜದ ಮೇಲೆ ತಲೆಯಿಟ್ಟರು. ಶಿಷ್ಯರ ದೃಷ್ಟಿ ಈ ಆತ್ಮೀಯತೆಯ ಮೂಕದೃಶ್ಯದಲ್ಲೇ ನೆಟ್ಟಿತು. ಆನಂದಮಯಿ ಆಗ ಉಚ್ಚಸ್ತರದ ಸಮಾಧಿಯಲ್ಲಿದ್ದರು. ಆ ಸ್ತರದಲ್ಲೇ ನೆಲೆನಿಂತು ಆನಂದದಿಂದಲೇ ಯೋಗಾನಂದರನ್ನು ಸ್ವಾಗತಿಸಿದ್ದರು. ನಂತರ ಆನಂದಮಯಿ ತಮ್ಮ ಕಾರಿನ ಹಿಂಬದಿಯ ಆಸನದಲ್ಲಿ ಯೋಗಾನಂದರನ್ನು ಕೂರಿಸಿಕೊಂಡು ‘ತಂದೆ ಈ ಜನ್ಮದಲ್ಲಿ ಮೊದಲ ಬಾರಿಗೆ ನಿಮ್ಮನ್ನು ನೋಡುತ್ತಿದ್ದೇನೆ’ ಎಂದು ಹೇಳಿ ತುಂಬುನಗೆ ಸೂಸಿದರು, ಸ್ವಲ್ಪಹೊತ್ತಿಗೆಲ್ಲ ನಿಶ್ಚಲ ಸಮಾಧಿಸ್ಥಿತಿಗೆ ಏರಿದರು. ಅವರ ಕಣ್ಣುಗಳು ಸ್ವರ್ಗದತ್ತ ತಿರುಗಿದವು, ದೃಷ್ಟಿ ಸ್ಥಿಮಿತವಾಗಿ ಅನತಿದೂರದ ಆಂತರಂಗಿಕ ಸ್ವರ್ಗದಲ್ಲಿ ನೆಟ್ಟುಹೋದವು. ಆಕೆಯ ಪ್ರಶಾಂತ ಮುಖ ಅನಿರ್ವಚನೀಯ ಆನಂದದಿಂದ ಬೆಳಗುತ್ತಿತ್ತು. ಆನಂದಮಯಿ ಸಂಪೂರ್ಣ ಸಮಾಧಿಯಲ್ಲಿಯೇ ಇದ್ದರು.

ಆನಂದಮಯಿ ಭಾರತದ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದರಷ್ಟೆ. ಆಕೆಗೆ ಅನೇಕ ಭಾಗಗಳಲ್ಲಿ ನೂರಾರು ಶಿಷ್ಯರು ಇರುತ್ತಿದ್ದರು. ಆಕೆಗೆ ಜಾತಿಭೇದವಿರಲಿಲ್ಲ. ಅವರ ಸೌಕರ್ಯಗಳನ್ನು ಗಮನಿಸುವುದಕ್ಕಾಗಿ ಒಂದು ತಂಡವೇ ಜತೆಯಲ್ಲಿರುತ್ತಿತ್ತು. ಆದರೆ ಆನಂದಮಯಿಗೆ ದೇಹದ ಬಗ್ಗೆ ಲಕ್ಷ್ಯವೇ ಇರುತ್ತಿರಲಿಲ್ಲ. ಆಹಾರ ಕೊಡದಿದ್ದರೆ ಏನೂ ತಿನ್ನುತ್ತಿರಲಿಲ್ಲ. ದಿನಗಟ್ಟಲೆ ಉಸಿರನ್ನೇ ಆಡದೆ, ಕಣ್ಣನ್ನು ಮಿಟುಕಿಸದೆ ಸಮಾಧಿಸ್ಥಿತಿಯಲ್ಲೇ ಉಳಿದುಬಿಡುತ್ತಿದ್ದರು. ರಾಂಚಿ ವಿದ್ಯಾಲಯದವರು ಒಮ್ಮೆ ಆನಂದಮಯಿ ಅವರನ್ನು ಆಹ್ವಾನಿಸಿದ್ದರು. ಸ್ವಾಗತಕ್ಕಾಗಿ ಸಂಭ್ರಮದ ಏರ್ಪಾಡು ನಡೆದಿತ್ತು. ಎಲ್ಲೆಲ್ಲೂ ಸಂಕೀರ್ತನೆಗಳು ಸಡಗರದಿಂದ ನಡೆಯುತ್ತಿದ್ದವು. ಆನಂದಮಯಿ ಮಂದಹಾಸ ಸೂಸುತ್ತ, ಬಿಸಿಲಿನಲ್ಲಿ ಮಿಂದ ಆ ವಿದ್ಯಾಲಯದ ಬಯಲಿನಲ್ಲಿ ನಡೆದರು. ನಂತರ ಮಕ್ಕಳನ್ನು ಕುರಿತು ಮಾತನಾಡಿ ಸಂಕೀರ್ತನೆಯಲ್ಲಿ ಮುಳುಗಿದರು. ಇಡೀ ವಿದ್ಯಾಲಯವೇ ಆಧ್ಯಾತ್ಮಿಕಪ್ರಭೆಯಿಂದ ತುಂಬಿತುಳುಕುತ್ತಿತ್ತು.

ಸಮರ್ಪಣ ಭಾವ: ಆನಂದಮಯಿ ಒಮ್ಮೆ ಯೋಗಾನಂದರ ಜತೆ ಮಾತನಾಡುತ್ತಿರುವಾಗ ತಮ್ಮ ಬದುಕಿನ ನಿಲುವನ್ನು ತೋರಿಸಿಕೊಂಡದ್ದು ಹೀಗೆ- ‘ತಂದೆ ಹೇಳುವುದಕ್ಕೆ ಏನೂ ಇಲ್ಲ. ಈ ಕ್ಷಣಭಂಗುರ ದೇಹದೊಡನೆ ನನ್ನ ಪ್ರಜ್ಞೆ ಎಂದೂ ತಾದಾತ್ಮ್ಯ ಹೊಂದಿಲ್ಲ. ಈ ಭೂಮಿಗೆ ಬರುವ ಮೊದಲು ‘ನಾನು ಅದೇ ಆಗಿದ್ದೆ’. ಸಣ್ಣ ಹುಡುಗಿಯಾಗಿದ್ದಾಗಲೂ ‘ನಾನು ಅದೇ ಆಗಿದ್ದೆ’. ಬೆಳೆದಾಗಲೂ ‘ನಾನು ಅದೇ ಆಗಿದ್ದೆ’. ಯಾವ ಕುಟುಂಬದಲ್ಲಿ ಹುಟ್ಟಿದೆನೊ ಆ ಕುಟುಂಬದವರು ಈ ದೇಹಕ್ಕೆ ಮದುವೆ ಗೊತ್ತುಮಾಡಿದಾಗಲೂ ‘ನಾನು ಅದೇ ಆಗಿದ್ದೆ’. ಈಗ ನಿಮ್ಮ ಮುಂದೆಯೂ ‘ಅದೇ ಆಗಿದ್ದೇನೆ’. ಮುಂದೆ ಯಾವಾಗಲೂ ಅನಂತತೆಯ ಈ ರಂಗದಲ್ಲಿ ನನ್ನ ಸುತ್ತಲೂ ಸೃಷ್ಟಿಯ ನರ್ತನ ಬದಲಾದರೂ ‘ನಾನು ಅದೇ ಆಗಿರುವೆ….’.

ಅವರು ಎಂದೂ ಲೌಕಿಕದ ಜಂಜಾಟಕ್ಕೆ ಸಿಲುಕಿದವರಲ್ಲ, ತಮಗೂ ಲೋಕಕ್ಕೂ ಸಂಬಂಧವಿಲ್ಲದಂತೆ ಬದುಕಿದವರು. ದೇಹ ಒಂದು ಉಪಕರಣವಷ್ಟೇ ಎಂದು ಭಾವಿಸಿಕೊಂಡವರು. ಬದಲಾವಣೆ ದೇಹಕ್ಕೆ, ಆತ್ಮಕ್ಕಲ್ಲ. ಅದು ಅವಿನಾಶಿಯಾದದ್ದು ಎಂದು ತಿಳಿದಿದ್ದವರು. ‘ನಾನು ಅದೇ ಆಗಿದ್ದೆ’ ಎಂಬ ಅವರ ಮಾತು ದೇಹದೊಡನೆ ಸಂಬಂಧವಿಲ್ಲದಿರುವುದನ್ನು ಪರೋಕ್ಷವಾಗಿ ಧ್ವನಿಸುತ್ತದೆ. ಸದಾ ಆತ್ಮಾರಾಮದಲ್ಲಿಯೇ ಇರುತ್ತಿದ್ದ ಆನಂದಮಯಿ, ಆತ್ಮದ ಆನಂದ ಉಳಿದ ಲೋಕದ ಸಂಬಂಧಗಳಿಗಿಂತ ಮಿಗಿಲಾದುದೆಂದು ತಿಳಿದಿದ್ದರು. ಆಧ್ಯಾತ್ಮಿಕ ಬದುಕಿನುದ್ದಕ್ಕೂ ಹೃತ್ಪೂರ್ವಕವಾಗಿ, ಆತ್ಮಪೂರ್ವಕವಾಗಿ, ಮನಃಪೂರ್ವಕವಾಗಿ ಭಗವಂತನನ್ನು ಪ್ರೀತಿಸಿದರು. ತುಚ್ಛವಾದ ಬಂಧನಗಳನ್ನು ಕಳಚಿಹಾಕಿ, ಆ ಮಹಾಪ್ರಭುವಿಗೆ ಅದ್ವಿತೀಯ ನಿಷ್ಠೆಯನ್ನು ಅರ್ಪಿಸಿಬಿಟ್ಟಿದ್ದರು. ಗುಂಪಿನಲ್ಲಿರುವಾಗ, ರೈಲಿನಲ್ಲಿ ಪ್ರಯಾಣಿಸುವಾಗ, ಭೋಜನ ಮಾಡುತ್ತಿರುವಾಗ, ಮೌನವಾಗಿರುವಾಗ ಅವರ ದೃಷ್ಟಿ ದೇವರನ್ನಲ್ಲದೆ ಬೇರೇನನ್ನೂ ಕಾಣುತ್ತಿರಲಿಲ್ಲ.

ಹೀಗೆ ಆನಂದಮಯಿ ಭಾರತಾದ್ಯಂತ ಆಧ್ಯಾತ್ಮಿಕ ಪ್ರಭೆಯನ್ನು ಜನರಲ್ಲಿ ಬಿತ್ತಿದರು. ಮಹಿಳೆಯರಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ನೆಲೆಗೊಳಿಸಿದರು. ಬಂಗಾಳದ ವೈಷ್ಣವಸಂಕೀರ್ತನೆಗಳನ್ನು ದೇಶದ ತುಂಬೆಲ್ಲ ಹರಡಿದರು. 86 ಸಂವತ್ಸರಗಳ ನಿಡುಗಾಲದುದ್ದಕ್ಕೂ ಆಧ್ಯಾತ್ಮಿಕ ಔನ್ನತ್ಯವನ್ನು ಸೂಸುತ್ತ ಉತ್ತರಾಖಂಡ ರಾಜ್ಯದ ಡೆಹರಾಡೂನಿನ ಕಿಶನ್​ಪುರ್ ಎಂಬಲ್ಲಿ 1982ರ ಆಗಸ್ಟ್ 27ರಂದು ವಿಷ್ಣುಪದವನ್ನು ಸೇರಿಕೊಂಡರು. ಹರಿದ್ವಾರದ ಕಂಖಾಲ್ ಆಶ್ರಮದಲ್ಲಿ ಕಳೇಬರವನ್ನು ಸಮಾಧಿ ಮಾಡಲಾಯಿತು. ಶ್ರೀ ಆನಂದಮಯಿ ಚಾರಿಟಬಲ್ ಸೊಸೈಟಿಯು ‘ಆನಂದವಾರ್ತೆ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಕೊಲ್ಕತದಿಂದ ಹೊರತರುತ್ತಿದೆ. ಹರಿದ್ವಾರದಲ್ಲಿ ಶ್ರೀಆನಂದಮಯೀ ಸಂಘವು ಪ್ರತಿವರ್ಷ ‘ಸಂಯಮ ಮಹಾವ್ರತ’ವೆಂಬ ಸತ್ಸಂಗವನ್ನು ನಡೆಸುತ್ತಿದೆ. ಅಲ್ಲಿ ಧ್ಯಾನ, ಚಿಂತನೆ ಮತ್ತು ಧಾರ್ವಿುಕ ಸಂವಾದಗಳು ನಡೆಯುತ್ತಿವೆ. ಆನಂದಮಯಿ ಮಾ ಹಾಡುತ್ತಿದ್ದ ವೈಷ್ಣವಸಂಕೀರ್ತನಗಳನ್ನು ಈಗಲೂ ಭಕ್ತರು ಅದೇ ಧಾಟಿಯಲ್ಲಿ ಹಾಡುತ್ತಿದ್ದಾರೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...