25.8 C
Bangalore
Friday, December 13, 2019

ಮಹಾನುಭಾವಿ ಶ್ರೀ ಕಡಕೋಳ ಮಡಿವಾಳಪ್ಪ

Latest News

ನಾಡಿನ ಹಿತ ಕಾಪಾಡುವಲ್ಲಿ ಮಠಗಳು ಶ್ರಮಿಸುತ್ತಿವೆ

ಶಹಾಪುರ: ಅನಾದಿ ಕಾಲದಿಂದಲೂ ನಾಡಿನ ಹಿತ ಕಾಪಾಡುವಲ್ಲಿ ಮಠಮಾನ್ಯಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಶುಕ್ರವಾರ ನಗರದ ಕುಂಬಾರಗೇರಿ...

ಕಾಲುವೆ ಒಡೆದು ರೈತರ ಜಮೀನಿನಲ್ಲಿ ನೀರು !

ಯಾದಗಿರಿ: ಸನ್ನತಿ ಏತ ನೀರಾವರಿ ಯೋಜನೆಯಡಿ ಕೆಬಿಜೆಎನ್ಎಲ್ನಿಂದ ನಿಮರ್ಿಸಲಾಗಿದ್ದ ಕಾಲುವೆ ಒಡೆದು ರೈತರ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಘಟನೆ ತಾಲೂಕಿನ...

ಜಟಿಲತೆ ಪ್ರಶ್ನೆಗಳಲ್ಲಿಲ್ಲ, ವಿದ್ಯಾರ್ಥಿಗಳ ಮನದಲ್ಲಿದೆ

ತಾಳಿಕೋಟೆ: ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಅದು ವಿದ್ಯಾರ್ಥಿಗಳಲ್ಲಿರುವ ಕೌಶಲ ಹಾಗೂ ಪ್ರತಿಭೆ ಹೊರಹಾಕಲಿರುವ ಸಾಧನ ಎಂದು ಬೆಂಗಳೂರಿನ ಶೈಕ್ಷಣಿಕ ತಜ್ಞ ಹಾಗೂ...

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಗಸ್ತ್ಯ ಅಂತಾರಾಷ್ಟೀಯ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ...

ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಪ್ರತಿಭಟನೆ

ಇಂಡಿ: ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಜಮೀತತಲ್ಮಾ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ...

ಹೈದರಾಬಾದ್ ಕರ್ನಾಟಕದ ಆಧ್ಯಾತ್ಮಿಕ ಸಂತರಲ್ಲಿ ಕಡಕೋಳ ಮಡಿವಾಳಪ್ಪನವರ ಹೆಸರು ಚಿರಸ್ಥಾಯಿಯಾದುದು. ನಿಜಗುಣ ಶಿವಯೋಗಿಗಳ ನಂತರ ತತ್ತ್ವಪದ ಸಾಹಿತ್ಯಕ್ಕೆ ಹೊಸ ಆಶಯ ಮತ್ತು ಆವಿಷ್ಕಾರವನ್ನು ನೀಡಿದ ಕೀರ್ತಿ ಇವರದು. 12ನೇ ಶತಮಾನದ ಬಸವಾದಿ ಶರಣರ ಕ್ರಾಂತಿ ಮತ್ತು ಸ್ವರವಚನ ಸಾಹಿತ್ಯ ಇವೆರಡೂ ಸಮ್ಮಿಳಿತಗೊಂಡ ವ್ಯಕ್ತಿತ್ವ ಇವರದಾಗಿತ್ತು. ಶಿಶುನಾಳ ಶರೀಫರಂತೆ ವಿಶಿಷ್ಟ ಆಧ್ಯಾತ್ಮಿಕ ವ್ಯಕ್ತಿತ್ವ ಪಡೆದಿದ್ದ ರಸಸಿದಟಛಿರು ಇವರು.

ಮಡಿವಾಳಪ್ಪನವರು ಸುಮಾರು 1780ರಿಂದ 1855ರವರೆಗೆ ಜೀವಿಸಿದ್ದರೆಂಬುದು ವಿದ್ವಾಂಸರ ಅಭಿಪ್ರಾಯ.

ಬಾಲಕ ಮಡಿವಾಳಪ್ಪ ಸಾಧಾರಣ ಮಕ್ಕಳಂತಿರದೆ, ಅಸಾಧಾರಣ ಪ್ರತಿಭಾಶಾಲಿಯಾಗಿದ್ದ. ಮಲ್ಲಿಕಾರ್ಜುನಪ್ಪ ಗೌಡ ಎಂಬುವರ ವಿಶೇಷ ಕಾಳಜಿಯಿಂದಾಗಿ ಗೊಬ್ಬೂರಿನ ಸದಾಶಿವಸ್ವಾಮಿಗಳಲ್ಲಿ ಮಡಿವಾಳಪ್ಪನ ವಿದ್ಯಾಭ್ಯಾಸವಾಯಿತು. ತಾರುಣ್ಯಕ್ಕೆ ಬಂದಾಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಗುಡ್ಡದ ಗುರುಬಸವ ದೇವರಲ್ಲಿಗೆ ಹೋದರು. ಅಲ್ಲಿಯ ಶಿವಾನುಭವ ಗೋಷ್ಠಿ, ಭಜನೆಗಳಲ್ಲಿ ಮಡಿವಾಳಪ್ಪ ವ್ಯಕ್ತಿತ್ವ ರೂಪಿಸಿಕೊಂಡರು. ಜಂಗಮಮಠಗಳಲ್ಲಿ ಒಂದಾಗಿದ್ದ ಬಿದನೂರು ಮಠಕ್ಕೆ ಮಡಿವಾಳಪ್ಪರನ್ನು ಸ್ವಾಮಿಯಾಗಿ ಮಾಡಬೇಕೆಂದು ಮಲ್ಲಿಕಾರ್ಜುನಪ್ಪ ಗೌಡ ಅಪೇಕ್ಷಿಸಿದರು. ವೀರಶೈವ ಮಠಕ್ಕೆ ಅಧಿಕಾರಿಯಾಗಬೇಕಾದರೆ ಜಂಗಮದೀಕ್ಷೆ ಅನಿವಾರ್ಯವಾಗಿದ್ದರಿಂದ ಗುಡ್ಡದ ಗುರುಬಸವದೇವರಿಂದ ದೀಕ್ಷೆ ಕೊಡಿಸಲು ಮುಂದಾದರು. ಆದರೆ ಜನ್ಮ ಹಿನ್ನೆಲೆ ಕಾರಣಕ್ಕಾಗಿ ದೀಕ್ಷೆ ಕೊಡಬಾರದೆಂದು ಅಲ್ಲಿಯ ಜಂಗಮರು ತಕರಾರು ತೆಗೆದರು. ಮಲ್ಲಿಕಾರ್ಜುನಪ್ಪ ಛಲ ಬಿಡಲಿಲ್ಲ. ಆಕಾಲಕ್ಕೆ ಅವರು ಪ್ರಗತಿಪರ ಸಂತ ಎಂದೇ ಹೆಸರಾಗಿದ್ದರು. ಅರಳುಗುಂಡಗಿ ಶರಣಬಸಪ್ಪನ ಬಳಿ ಮಡಿವಾಳಪ್ಪರನ್ನು ಕರೆದೊಯ್ದರು. ಅಲ್ಲಿ ಮಡಿವಾಳಪ್ಪನವರು ‘ತಿಪ್ಪೆಯಲ್ಲಿ ಬೆಳೆದ ಬಿಲ್ವಪತ್ರೆ ಲಿಂಗಪೂಜೆಗೆ ಅರ್ಹವಾಗುವುದೇ?’ ಎಂದು ಪ್ರಶ್ನಿಸಿದ್ದಕ್ಕೆ ಶರಣಬಸಪ್ಪ ‘ಪತ್ರೆ ಎಲ್ಲೇ ಬೆಳೆದರೂ ಲಿಂಗಕ್ಕೆ ಅರ್ಪಿತ’ ಎಂದುತ್ತರಿಸಿದರು. ಆಗ ಮಡಿವಾಳಪ್ಪ ಜಂಗಮದೀಕ್ಷೆ ನೀಡಿ ಹರಸುವಂತೆ ಕೋರಿದರು. ತನ್ನ ಮನೆತನದ ಗುರು

ಮರುಳಾರಾಧ್ಯರಿಂದ ದೀಕ್ಷೆ ಕೊಡಿಸಲು ಶರಣಬಸಪ್ಪ ಮುಂದಾದರು. ಇದಕ್ಕೆ ಊರಿನ ಕೆಲ ಕುಹಕಿಗಳು ವಿರೋಧಿಸಿದರು. ಬೇಸರಗೊಂಡ ಮಡಿವಾಳಪ್ಪ

ದೀಕ್ಷಾಪ್ರಸಂಗದಿಂದ ದೂರಸರಿದು ದೇಶಾಂತರ ಹೊರಟು ಶ್ರೀಶೈಲದವರೆಗೆ ಪಾದರಸದಂತೆ ತಿರುಗಾಡಿದರು. ಆರೂಢ, ನಾಥ, ಸಿದಟಛಿ ಮುಂತಾದ ತಳಪರಂಪರೆಗಳೊಂದಿಗೆ ಅನುಸಂಧಾನ ಮಾಡಿದರು. ದಣಿವರಿಯದ ಅನ್ವೇಷಕ ಮಡಿವಾಳಪ್ಪ ವಿಜಾಪುರ ಜಿಲ್ಲೆಯ ಕೋರವಾರದ ಮುರುಘೕಂದ್ರಸ್ವಾಮಿಗಳಲ್ಲಿ ಶಿವಾದ್ವೈತಸಿದಾಟಛಿಂತ, ಶ್ರೀಶೈಲದ ಸಾಧುಗಳಲ್ಲಿ ಯೌಗಿಕ ಸಾಧನೆ, ನಾಥಪಂಥದ ಸಾಧಕರಲ್ಲಿ ತಂತ್ರವಿದ್ಯೆ ಹೀಗೆ ಹಲವು ಅನುಭಾವಿ ಮಾರ್ಗಗಳನ್ನು ಹೊಕ್ಕಿಬಂದರು. ಮಡಿವಾಳಪ್ಪ ಅರಳುಗುಂಡಿಗೆ ಮಹಾಮನೆಯಲ್ಲಿ ಕುಳಿತು ಸಮಸ್ತರಿಗೂ ಪರಮಾರ್ಥದ ನೆಲೆ ತೋರಿಸಿದರು.

ಇದು ಕರ್ಮಠರಿಗೆ ಸಹ್ಯವಾಗಲಿಲ್ಲ. ಇವರ ಪ್ರಭಾವ ದಿನದಿನಕ್ಕೆ ಬೆಳೆಯುತ್ತ ಹೋಯಿತು. ಆ ಊರಿನ ಮಲ್ಲಣ್ಣಗೌಡನಿಗೆ ಭಾಗಮ್ಮ ಎಂಬ ತಂಗಿಯಿದ್ದಳು. ಆಕೆಗೆ ಕುಷ್ಠರೋಗವಿತ್ತು. ಆಗಿನ ಸಂಪ್ರದಾಯದಂತೆ ಊರ ಹೊರಗಿನ ಹೊಲದ ಗುಡಿಸಿಲಿನಲ್ಲಿ ಆಕೆಯನ್ನು ಇಟ್ಟಿದ್ದರು. ಪಕ್ಕದ ಪಾಳುಗುಡಿಯಲ್ಲಿ ಮಡಿವಾಳಪ್ಪನವರ ವಾಸ್ತವ್ಯವಿತ್ತು. ಈ ನಡುವೆ ಭಾಗಮ್ಮ ಮಡಿವಾಳಪ್ಪರಿಂದ ದೀಕ್ಷೆ ಪಡೆದು ಶಿಷ್ಯಳಾದಳು. ಸಿದಟಛಿವೈದ್ಯ ಪದಟಛಿತಿಯಲ್ಲಿ ನಿಷ್ಣಾತನಾಗಿದ್ದ ಮಡಿವಾಳಪ್ಪ ಭಾಗಮ್ಮನ ರೋಗವನ್ನು ಗುಣಪಡಿಸಿದರು. ಆಕೆ ಮಾಡಿದ ಅಡುಗೆ ಉಂಡು ಜನಗೌರವಕ್ಕೂ ಪಾತ್ರರಾದರು. ಈ ಪ್ರಸಂಗ ಅವರ ಮೇಲೆ ಆಪಾದನೆಗೂ ಕಾರಣವಾಗಿ ಕೊಲೆಯತ್ನವೂ ನಡೆಯಿತು. ಮುಂದೆ, ಶಿಷ್ಯರ ಒತ್ತಾಸೆಯಂತೆ ಜಂಬೇರಾಳ ಎಂಬ ಹಳ್ಳಿಯ ಗುಡಿಯಲ್ಲಿ ಮಡಿವಾಳಪ್ಪ ಆಶ್ರಯ ಪಡೆದರು. ಅಲ್ಲಿಂದ, ಮಡಿವಾಳಪ್ಪ ಜೇವರ್ಗಿ ತಾಲೂಕಿನ ಕಡಕೋಳಕ್ಕೆ ಬಂದು ನೆಲೆಯೂರಿದರು. ಕಡಕೋಳದ ಹಿರೇಬಸಪ್ಪದೊರೆ ಮತ್ತು ಗೌಡ ಅವರಿಗೆ ಆಶ್ರಯವಿತ್ತರು. ಬೇಡರು, ಕಬ್ಬಲಿಗರು, ದಲಿತರು, ಮುಸ್ಲಿಮರ ಪ್ರೀತಿಗೆ ಮಡಿವಾಳಪ್ಪ ಒಳಗಾದರು. ಕಡಕೋಳವನ್ನೇ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಪರಮ ಅನುಭಾವಿ ಎನಿಸಿಕೊಂಡರು.

ತತ್ತ್ವಪದ ಸಾಹಿತ್ಯ: ಖೈನೂರು ಕೃಷ್ಣಪ್ಪ, ತೆಲಗಬಾಳದ ರೇವಪ್ಪ, ಕಡ್ಲೆವಾಡ ಸಿದಟಛಿಪ್ಪ, ಚೆನ್ನೂರು ಜಲಾಲಸಾಹೇಬ, ಅರಳಗುಂಡಿಗೆ ಭಾಗಮ್ಮ, ಬಸಲಿಂಗಮ್ಮ, ಮಲ್ಲಣಗೌಡ ಮುಂತಾದವರು ಮಡಿವಾಳಪ್ಪನವರ ಶಿಷ್ಯಬಳಗದವರಲ್ಲಿ ಪ್ರಮುಖರು. ಕಡಕೋಳ ಮಠವು ತತ್ತ್ವಪದಗಳ ಟಂಕಸಾಲೆಯೇ ಆಯಿತು. ಮಡಿವಾಳಪ್ಪ ತತ್ತ್ವಪದಗಳನ್ನು ಹಾಡುತ್ತ ಶಿಷ್ಯರಿಂದಲೂ ಬರೆಸುತ್ತಿದ್ದರು. ವಿವಿಧ ಜಾತಿ-ಮತ-ಪಂಥಗಳ ಶಿಷ್ಯರು ಸಮಾಜೋದಾಟಛಿರಕ್ಕಾಗಿ ಗುರುವಿನೊಂದಿಗೆ ಕೈಜೋಡಿಸಿದರು. ಮಡಿವಾಳಪ್ಪನವರ ತತ್ತ್ವಪದಗಳು ಸತ್ವ ಮತ್ತು ಪರಿಣಾಮದ ದೃಷ್ಟಿಯಿಂದ ಎಲ್ಲರ ಗಮನ ಸೆಳೆದವು, ಬದುಕಿನ ಬವಣೆ ತಿಳಿಸುವುದರೊಂದಿಗೆ ಅನ್ವೇಷಕ ಪ್ರವೃತ್ತಿಯನ್ನು ಸಾರಿದವು. ‘ಏನೇನು ಹಗರಣ ಮಾಡುವರೀ ಜನರು ಇದಕಾರಂಜುವರು | ಮಾನ ಅಪಮಾನ ಖೂನ ಅರಿಯದವರು ಮಾನಗೇಡಿ ಮಾನವರು’, ‘ದಾವದೊ ಕುಲದಾವದೊ ಕುಲದ ವಿವರವ ತಿಳಿದು ಹೇಳಲೊ ಮೂಢ’, ‘ಮಾನಗೇಡಿ ಮಂದಿಹಟ್ಟಿ ಮತ್ಯಾಕೆಡಿಸ್ಯಾರು| ಉಡಾಳ ಮಂದಿ ಊರೊಳಗಾ ಹಿಡಿಯಲ್ದಹೋದರೊ ….ಪುಢಾರಿ ಮಂದಿ ಹೋಗಿ ದರೂಡೀ ಮಾಡ್ಯಾರೋ’ ಎಂಬಂತಹ ತತ್ತ್ವಪದಗಳಲ್ಲಿನ ಲೋಕಪ್ರಜ್ಞೆ ಮತ್ತು ಆನುಭಾವಿಕ ಔನ್ನತ್ಯವನ್ನು ಜನ ಸ್ವಾಗತಿಸಿದರು. ‘ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ’, ‘ನಿರ್ಮಲವಾದ ಮನವೇ ಕರ್ಪರದಾರತಿ’ ಎಂಬಂಥ ತತ್ತ್ವಪದಗಳು ಅವರ ಆನುಭಾವಿಕ ನಡೆಯನ್ನು ತಿಳಿಸಿದವು. ತಮ್ಮ ವಚನಗಳಲ್ಲಿ ‘ನಿರುಪಮನಿರಾಳ ಮಹಾಂತಯೋಗಿ’ ಎಂದು ಅಂಕಿತವನ್ನೂ, ತತ್ತ್ವಪದಗಳಲ್ಲಿ ‘ಮಹಾಂತ’ ಎಂಬ ಗುರುನಾಮವನ್ನೂ ಮಡಿವಾಳಪ್ಪ ಬಳಸಿದ್ದಾರೆ. ಇವರ ವಚನಗಳಲ್ಲಿ ಯೋಗಮಾರ್ಗದ ಮೂಲಕ ಕುಂಡಲಿನೀ ಅನುಭವದ ವಿವರಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಅಷ್ಟಾವರಣ, ಷಟ್​ಸ್ಥಲಗಳ ವಿವರಣೆಯೂ ಬರುವುದುಂಟು. ಇವರು ಆಚರಣೆಗಳಲ್ಲಿ ಆರೂಢಿಯಾದರೆ, ಒಮ್ಮೊಮ್ಮೆ ಅವಧೂತ ಮಾರ್ಗಿಯಾಗಿ ಕಾಣಿಸಿಕೊಳ್ಳುತ್ತಿದ್ದುದೂ ಉಂಟು. ಮಡಿವಾಳಪ್ಪ ಮಂತ್ರ, ತಂತ್ರ, ಶಾಕ್ತ, ಸಿದಟಛಿ, ನಾಥ, ಅವಧೂತ, ಆರೂಢ, ಹಠಯೋಗ, ಲಯಯೋಗ, ಶಿವಯೋಗ, ಪುರಾಣ, ಶಿವಾಗಮದಂಥ ಜ್ಞಾನಶಾಖೆಗಳನ್ನು ಹೊಕ್ಕು ಬಳಕೆ ಮಾಡಿಕೊಂಡಿದ್ದರು. ಇವರ ತತ್ತ್ವಪದಗಳಲ್ಲಿ ಇದಕ್ಕೆ ಸಾಕ್ಷ್ಯವುಂಟು.

ಕೆಲವು ಪ್ರಸಂಗಗಳು: ಮಡಿವಾಳಪ್ಪನವರ ತತ್ತ್ವಪದಗಳಲ್ಲಿ ಜೀವನದ ಹಲವು ಘಟನೆಗಳು ಹೆಣಿಗೆಗೊಂಡಿದ್ದು, ಕೆಲವು ಸಾಲುಗಳು ಮಾರ್ವಿುಕವಾಗಿವೆ. ಈ ಪೈಕಿ, ‘ಮಾಯೆ ಯಾವುದು ಹೇಳೊ ಶಾಸಿಣಉೕ’ ಎಂಬ ತತ್ತ್ವಪದದ ಸಾಲಿಗೆ ಸಂದರ್ಭಸೂಚಿ ಒಂದುಂಟು. ಕಡಕೋಳದಲ್ಲಿದ್ದ ಮಡಿವಾಳಪ್ಪ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇರುತ್ತಿದ್ದರೂ, ದೊಡ್ಡ ಅನುಭಾವಿ ಎಂದು ಖ್ಯಾತರಾಗಿದ್ದರು. ಸಮೀಪದ ಗಂವ್ಹಾರದಲ್ಲಿ ಬಸವಲಿಂಗಶಾಸಿಣಉ ಎಂಬ ಜಿಜ್ಞಾಸುವೊಬ್ಬನಿದ್ದ. ಆತ ಮಡಿವಾಳಪ್ಪರ ಭೇಟಿಗೆ ಬಂದ. ಅಧ್ಯಾತ್ಮವಿದ್ಯೆಯಲ್ಲಿ ಪರಿಣತನೆಂದು ಛಾಪುಮೂಡಿಸಿಕೊಂಡಿದ್ದ ಶಾಸಿಣಉಗೆ ಮಡಿವಾಳಪ್ಪರ ಬಗೆಗೆ ತೀವ್ರ ಕುತೂಹಲವಿತ್ತು. ಮಠಕ್ಕೆ ಬಂದ ಆತ, ಸೇವಕನಂತಿದ್ದ ವ್ಯಕ್ತಿಯೊಬ್ಬನನ್ನು ‘ನಿಮ್ಮ ಮುತ್ಯಾ ಎಲ್ಲಿಹಾನಪ್ಪ’ ಎಂದು ಕೇಳಿದ್ದಕ್ಕೆ, ಆತ ಅವರು ಹೊರಗಡೆ ಹೋಗಿದ್ದಾರೆಂದೂ ಬರುವುದು ತಡವಾಗುತ್ತದೆಂದೂ ತಿಳಿಸಿ ಪೂಜೆ-ಪ್ರಸಾದಕ್ಕೆ ವ್ಯವಸ್ಥೆ ಮಾಡಿದ. ದಿನಪೂರ್ತಿ ಸೇವೆ ಮಾಡಿಸಿಕೊಂಡರೂ ಅವರೇ ಮಡಿವಾಳಪ್ಪನೆಂದು ಶಾಸಿಣಉ ಗುರುತಿಸದಾದ. ಅಷ್ಟರಲ್ಲಿ ಪಕ್ಕದೂರಿನ ಭಕ್ತರು ಬಂದು ‘ಮುತ್ಯಾ ಮಡಿವಾಳಪ್ಪ ಬೇಸದಿಯಾ’ ಎಂದು ಮಾತನಾಡಿಸಿದಾಗ, ಈವರೆಗೂ ಸೇವೆಮಾಡಿದಾತನೇ ಮಡಿವಾಳಪ್ಪನೆಂದು ಶಾಸ್ತ್ರಿಗೆ ಅರಿವಾಗಿ, ಅವರು ಪರಮಶಿವಯೋಗಿ ಎಂಬ ಕಲ್ಪನೆ ಜಾರಿಹೋಯಿತು. ಪೂಜೆ ಪುನಸ್ಕಾರಗಳಿಲ್ಲದ ಇವರೆಂಥ ಯೋಗಿ ಎಂದನಿಸಿತು. ಮೂರು ಹೊತ್ತು ದನಕಾಯುವ, ಸಗಣಿ ಬಳಿಯುವ, ಕುರುಳು ತಟ್ಟುವ ಮಡಿವಾಳಪ್ಪರನ್ನು ಕರೆದು ‘ನಿನಗಾ ಸಂಸಾರದ ಮಾಯೆಯೇ ಹೋಗಿಲ್ಲಲ್ಲೊ ನೀ ಯಾತರ ಶಿವಯೋಗಿನೋ’ ಎಂದು ಮೂದಲಿಸಿದ. ಆಗ ಮಡಿವಾಳಪ್ಪ ‘ಕಾಯ ದಂಡಿಸಿ ಕಾಯಕ ಮಾಡುವುದನ್ನು ಮಾಯೆ’ ಎಂದ ಶಾಸಿಣಉಯ ಮಾತಿಗೆ ‘ಮಾಯೆ ಯಾವುದು? ಹೇಳೋ ಶಾಸಿಣಉ’ ಎಂದು ಪ್ರಶ್ನಿಸಿ ಆತನ ಅಹಂಕಾರವನ್ನು ದಮನಿಸಿದರು. ಚೆನ್ನೂರಿನ ಜಲಾಲಸಾಹೇಬ ದೊಡ್ಡ ಸೂಫಿಸಂತನೆಂದು ಹೆಸರಾಗಿದ್ದ.

ವಯಸ್ಸಿನಲ್ಲಿ ಮಡಿವಾಳಪ್ಪ ಅವರಿಗಿಂತ ಹಿರಿಯನಾಗಿದ್ದ ಆತ ಮಡಿವಾಳಪ್ಪರ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ಕಡಕೋಳಕ್ಕೆ ಹೊರಟ. ಮಠಕ್ಕೆ ಬಂದಾಗ, ಮಡಿವಾಳಪ್ಪ ಸಗಣಿಯಿಂದ ಬೆರಣಿ ತಟ್ಟುತ್ತಿದ್ದುದನ್ನು ಕಂಡ ಜಲಾಲಸಾಹೇಬನಿಗೆ ‘ಇವನೆಂಥ ಶಿವಯೋಗಿ, ದಟ್ಟಿಧೋತರ, ಬಕ್ಕತಲೆ, ಮೈತುಂಬ ಹೆಂಡಿ ವಾಸನೆ’ ಎನಿಸಿ ಆಶಾಭಂಗವಾಯಿತು. ಆಕಾಲಕ್ಕೆ ಉತ್ತಮ ತತ್ತ್ವಪದಕಾರನೆಂದು ಹೆಸರಾಗಿದ್ದ ಜಲಾಲಸಾಹೇಬ, ‘ಜಂಗಮನಾಗಬೇಕಾದರೆ ಮನ ಲಿಂಗ ಮಾಡಿಕೊಂಡಿರಬೇಕು’

ಎಂದು ಹಾಡಿದ. ‘ಫಕೀರನಾಗಬೇಕಾದರೆ ಮನದ ವಿಕಾರವನ್ನೆಲ್ಲ ತೊರೆದಿರಬೇಕೋ’ ಎಂದು ಮಡಿವಾಳಪ್ಪ ತತ್ತ್ವಪದದ ಮೂಲಕವೇ ಉತ್ತರಿಸಿದರು.

ವಿಜಾಪುರ ಜಿಲ್ಲೆಯ ಚಾಂದಕವಟಗಿ ಹಳ್ಳಿಯ ಜಮೀನ್ದಾರ ದ್ಯಾವಪ್ಪ ಗೌಡ ಬಲು ರ್ದಪಿಷ್ಟ. ರೈತಾಪಿ ಜನರ ಮಧ್ಯೆ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಆ ಊರಿನಲ್ಲಿ ಮಡಿವಾಳಪ್ಪನವರ ಶಿಷ್ಯರಿದ್ದರು. ಗುರುವೆಂದರೆ ಅವರಿಗೆ ಅಪಾರ ಅಭಿಮಾನ. ಶಿಷ್ಯರ ಆಗ್ರಹದ ಮೇರೆಗೆ ಮಡಿವಾಳಪ್ಪ ಚಾಂದಕವಟಗಿಗೆ ಹೋದಾಗ ಅಭಿಮಾನಿಗಳು ಅವರ ಗುಣಗಾನದಲ್ಲಿ ನಿರತರಾಗಿದ್ದು ದ್ಯಾವಪ್ಪಗೌಡನಿಗೆ ಇರಿಸು-ಮುರಿಸಾಗಿ ಮಡಿವಾಳಪ್ಪರನ್ನು ಅವಮಾನಿಸಬೇಕೆಂಬ ದುರ್ಬುದಿಟಛಿ ಮೂಡಿತು. ಆತ ತನ್ನ ವ್ಯವಹಾರದ ಪಾರುಪತ್ತೆಗಾರರನ್ನು ಕರೆದು ಮಡಿವಾಳಪ್ಪರನ್ನು ಭಿನ್ನಹಕ್ಕೆ ಕರೆತರಲು ಸೂಚಿಸಿದ. ಆ ಪಾರುಪತ್ತೆಗಾರ ಮಡಿವಾಳಪ್ಪನವರ ಬಳಿಬಂದು ಗೌಡನ ಅಭಿಪ್ರಾಯವನ್ನು ತಿಳಿಸಿ, ಶಿಷ್ಯಸಮೇತ ಭಿನ್ನಹಕ್ಕೆ ಬರಲು ಆಮಂತ್ರಿಸಿದ. ಅಚ್ಚರಿಗೊಂಡ ಶಿಷ್ಯರು ಇದರ ಹಿಂದೆ ಬೇರೇನೋ ಮಸಲತ್ತಿರಬೇಕೆಂದು ಭಾವಿಸಿದರು. ಭಿನ್ನಹಕ್ಕೆ ಹೋಗಬಾರದೆಂದು ಗುರುವನ್ನು ಕೋರಿದರು. ಆದರೆ ಪಾರುಪತ್ತೆಗಾರ ಪರಿಪರಿಯಾಗಿ ಬಿನ್ನವಿಸಿಕೊಂಡು ಭಿನ್ನಹಕ್ಕೆ ಬರಲು ಒಪ್ಪಿಸಿದ. ಮಣಿದ ಮಡಿವಾಳಪ್ಪ ಗೌಡನ ಮನೆಗೆ ಹೋದರೂ, ನೋಡಿಯೂ ನೋಡದಂತೆ ಗೌಡ ವ್ಯವಹಾರದಲ್ಲಿ ನಿರತನಾಗಿದ್ದುದು ಶಿಷ್ಯರಿಗೆ ಘಾಸಿ ತಂದಿತು. ಆಗ ಮಡಿವಾಳಪ್ಪ ಶಿಷ್ಯರನ್ನು ಸಂತೈಸುತ್ತ ‘ಭಿನ್ನ ಮಾಡಿ ಮರೆತ’ ಎಂಬ ತತ್ತ್ವಪದ ಹಾಡಿ ಕ್ಷಮಾಗುಣ ಮೆರೆದರು.

ಮಡಿವಾಳಪ್ಪನವರ ಶಿಷ್ಯಬಳಗದಲ್ಲಿದ್ದ ಖೈನೂರು ಕೃಷ್ಣಪ್ಪ ಮತ್ತು ತೆಲಗಬಾಳದ ರೇವಪ್ಪ ತತ್ತ್ವಪದ ರಚಿಸುವರೆಂದು ಜನಜನಿತವಾಗಿತ್ತು. ಆದರೆ, ಕಡ್ಲೆವಾಡದ ಸಿದಟಛಿಪ್ಪನೂ ಆಗಾಗ್ಗೆ ತತ್ತ್ವಪದ ಬರೆಯುತ್ತಿದ್ದುದುಂಟು. ಇದು ಮಡಿವಾಳಪ್ಪ ಅವರಿಗೆ ತಿಳಿದಿರಲಿಲ್ಲ. ಒಮ್ಮೆ ಖೈನೂರು ಕೃಷ್ಣಪ್ಪ ‘ಅನಕ್ಷರಿ ಸಿದಟಛಿಪ್ಪ ಕೂಡ ತತ್ತ್ವಪದ

ಬರೆಯುತ್ತಾನೆ’ ಎಂದು ಗುರುವಿಗೆ ತಿಳಿಸಿದ. ಸಂಭ್ರಮಿಸಿದ ಮಡಿವಾಳಪ್ಪ, ಸಿದಟಛಿಪ್ಪನನ್ನು ಕರೆದು ತತ್ತ್ವಪದ ಹಾಡುವಂತೆ ಸೂಚಿಸಿದರು. ಸಂಕೋಚದ ಸಿದಟಛಿಪ್ಪ

ತನಗೇನೂ ತಿಳಿಯದೆಂದು ನುಣುಚಿಕೊಂಡ. ಆಗ ಮಡಿವಾಳಪ್ಪ, ಒಂದು ವಾರದೊಳಗೆ ಅನನ್ಯ ಶರಣಾಗತಿ ಕುರಿತು ಪದವೊಂದನ್ನು ರಚಿಸಿಕೊಂಡು ಬರುವಂತೆ ಸಿದಟಛಿಪ್ಪನಿಗೆ ಆಜ್ಞಾಪಿಸಿದರು. ನಿಗದಿತ ದಿನ ಇಬ್ಬರೂ ಬಂದರು. ತತ್ತ್ವಪದ ಸಾದರಪಡಿಸುವಂತೆ ಮಡಿವಾಳಪ್ಪ ಕೃಷ್ಣಪ್ಪನಿಗೆ ಸೂಚಿಸಿದಾಗ ‘ನಾ ಕಡಕೋಳದ

ಗುಲಾಮ| ನನ್ನ ಹೆಸರ ತೆಗೆಯಬ್ಯಾಡರಿ ಇನ್ನೊಮ’ ಎಂದು ತತ್ತ್ವಪದ ಹೊಮ್ಮಿತು.

ನಂತರ ಸಿದಟಛಿಪ್ಪ ಭಾವುಕನಾಗಿ ಸಂಕೋಚದಿಂದ ‘ನಾ ಏನು ಬಲ್ಲೇನಪ್ಪ ನಿಮ್ಮ ಕೂಸ| ಅಂದಿಗಿಂದಿಗಿ ನಿಮ್ಮ ದಾಸ’ ಎಂದು ಮತ್ತೊಂದು ತತ್ತ್ವಪದವನ್ನು ಹಾಡಿದ. ಮಡಿವಾಳಪ್ಪ ಎರಡೂ ತತ್ತ್ವಪದಗಳನ್ನು ಚಿತ್ತವಿಟ್ಟು ಕೇಳಿದರು. ಸಿದಟಛಿಪ್ಪನ ರಚನೆಯಲ್ಲಿ ಎಳ್ಳಷ್ಟೂ ಅಹಂಕಾರ ಇರದಿರುವುದನ್ನು ಗಮನಿಸಿದರು. ಈ ಘಟನೆಯ ನೆನಪಿಗಾಗಿ ಸಿದಟಛಿಪ್ಪನ ಹೆಸರನ್ನು ಅಂಕಿತದಲ್ಲಿಟ್ಟು ಶಿಷ್ಯನ ಹೆಸರನ್ನು ಅಜರಾಮಗೊಳಿಸಿದರು.

ಹೀಗೆ, ನೂರಾರು ಶಿಷ್ಯರಿಗೆ ಪಾರಮಾರ್ಥಿಕ ದಾರಿ ತೋರಿದ ಮಡಿವಾಳಪ್ಪನವರು, ಪಾರಮಾರ್ಥಿಕ ಮತ್ತು ಲೌಕಿಕವೆರಡನ್ನೂ ಸಮನ್ವಯಗೊಳಿಸಿದ ಮಹಾಸಂತ, ವ್ಯಕ್ತಿಗತ ನೆಲೆಯಿಂದ ಸಮಷ್ಟಿ ಚಿಂತನೆಯೆಡೆಗೆ ಲಂಘಿಸಿ ತತ್ತ್ವಪದಗಳಿಗೆ ಹೊಸರೂಪ ತಂದುಕೊಟ್ಟ ಅಪೂರ್ವ ಅನುಭಾವಿ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....