Bhatkal VHP Strike: 31 ಸಮಾಜದ ಸಾವಿರಾರು ಜನ ಭಾಗಿ

Bhatkal VHP Strike

Bhatkal VHP Strike :  ಸಮುದ್ರ ಹರಿದು ಬಂದ ಹಾಗೆ ಭಟ್ಕಳ ಹಿಂದು ಸಮಾಜ ಒಂದಾಗಿ ಬಂದಿರುವದನ್ನು ನೋಡಿದರೆ ಇದೊಂದು ಸ್ಪಷ್ಟ ಸಂದೇಶ ಬಾಂಗ್ಲಾ ದೇಶಕ್ಕೆ ತಲುಪಲಿದೆ ಎಂದು ಗುರುಪುರ ಮಂಗಳೂರಿನ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ನುಡಿದರು.

ಅವರು ಶುಕ್ರವಾರ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ, ಭಟ್ಕಳದ ಸಮಸ್ತ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಬ್ರಹತ್ ಪ್ರತಿಬಟನಾ ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಸೀನಾ ಬೆಗಮ್ ಭಾರತಕ್ಕೆ ಬಂದಕೂಡಲೆ ಯೂನುಸ್ ಎನ್ನುವ ಅಸಮರ್ಥ ನಾಯಕ ಬಾಂಗ್ಲಾ ದೇಶದ ಚುಕ್ಕಾಣಿ ಹಿಡಿದ. ಭಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕಿದ್ದ ಆತ ಕೋಮು ಧ್ವೇಷಕ್ಕೆ ಪ್ರಚೋದನೆ ನೀಡಿ ನರಮೇಧಕ್ಕೆ ಚಾಲನೆ ನೀಡಿದ್ದಾನೆ.

ಜಗತ್ತಿನಾದ್ಯಂತ ಶಾಂತಿ ಮಂತ್ರವನ್ನು ಪಠಿಸುವ ಇಸ್ಕಾನ್ ಸಂಸ್ಥೆ ಬಾಂಗ್ಲಾದಲ್ಲೂ ಕಾರ್ಯ ನಡೆಸುತ್ತಿದೆ. ಜಾತಿ, ಮತ, ಪಂಥ ಬೇದವನ್ನು ಮರೆತು ಎಲ್ಲರಿಗೂ ಅನ್ನ ನೀಡಿದ ಸಂಸ್ಥೆಯ ಚಿನ್ಮಯಿ ಕೃಷ್ಣದಾಸನನ್ನು ಬಂಧಿಸಿದ್ದಾರೆ. ಬಾಂಗ್ಲಾದಲ್ಲಿ ಹಿಂದು ಹೆಣ್ಣು ಮಕ್ಕಳ ಅತ್ಯಾಚಾರ ದೌರ್ಜನ್ಯ ಮೀತಿ ಮೀರುತ್ತಿದೆ. ಕೋಮು ಪ್ರಚೋದನೆ ನೀಡಿ ಅಫೀಮಿನಂತೆ ದೌರ್ಜನ್ಯ ಎಸಗುವ ನಿಮಗೆ ಸದಯದಲ್ಲೆ ಒಂದು ಗತಿ ಕಾದಿದೆ ಎಂದು ಎಚ್ಚರಿಸಿದರು.
ಇಷ್ಟರವರೆಗೆ ಶಾಂತಿಯಿಂದ ಇದ್ದ ಹಿಂದೂ ಸಮಾಜ ಇನ್ನು ಮುಂದೆ ಇದನ್ನೆಲ್ಲ ಸಹಿಸಲು ಸಾದ್ಯವಿಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂ ಸಮಾಜ ಇಂದು ಒಗ್ಗೂಡಿ ಈ ಮೂಲಕ ಬಾಂಗ್ಲಾದ ಹಿಂದುಗಳಿಗೆ ಸದ್ರಡತೆಯನ್ನು ನೀಡಬೇಕು. ಆ ಮೂಲಕ ಅಲ್ಲಿ ಹಿಂದುಗಳು ಗಟ್ಟಿ ನಿಲ್ಲಬೇಕು ಎನ್ನುವ ನಿಲುವು ಹೊಂದಿದ್ದೆವೆ ಎಂದರು. Bhatkal VHP Strike

ನಮ್ಮ ಮನಸ್ಸಿನ ವೇದನೆ, ಅಸಹನೆಯನ್ನು ಎಲ್ಲಾ ಕಟ್ಟಿಕೊಂಡು ಶಾಂತಿಯನ್ನು ಭೋದಿಸುತ್ತಿದ್ದೇವೆ. ಹಿಂದುಗಳು ಅಲ್ಪಸಂಖ್ಯಾತರಾದ ಕಡೆಯಲ್ಲಾ ಇಂತಹುದೆ ಸಮಸ್ಯೆಗಳು ನಿರ್ಮಾಣವಾಗುತ್ತಿವೆ. ನಾಳೆ ಭಟ್ಕಳದಲ್ಲೂ ಹಿಂದುಗಳು ಎಚ್ಚರಿಕೆಯಿಂದು ಇರಬೇಕು. ಸಂಘಟನೆ, ಸಂಪತ್ತು ಸಂತಾನವನ್ನು ಕಾಯ್ದುಕೊಳ್ಳಿ, ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವಂತ ಅತಿ ಮುಖ್ಯವಾದ ಸನ್ನಿವೇಶ ಇಂದು ನಿರ್ಮಾಣವಾಗಿದೆ.

ಹಿಂದು ಸಮಾಜ ಸಂಘಟಿತವಾಗಿ, ಸದೃಡವಾಗಿದ್ದರೆ ಯಾರಿಗೂ ತೊಂದರೆ ಇಲ್ಲ. ನಾವು ಯಾರಿಗೂ ಕಿರುಕುಳ ಕೊಡುವ ಮನಸ್ಥಿತಿ ಹೊಂದಿಲ್ಲ. ಶಾಂತಿ ಮಂತ್ರವನ್ನು ನಾವು ಮಾತ್ರ ಪಠಿಸಿದರೆ ಸಾಲದು ಇನ್ನೊಂದು ಸಮಾಜವು ಅದಕ್ಕೆ ಕೈ ಜೋಡಿಸಬೇಕು.

ಇಂದು ವಕ್ಫ್‌  ಎನ್ನುವದು ವಕ್ಕರಿಸಿಕೊಂಡು ಬರುತ್ತಿದೆ. ಅದರ ಕುರಿತು ಯಾರು ಮಾತನಾಡುತ್ತಿಲ್ಲ. ಇಲ್ಲಿ ನಮ್ಮ ನೆಲೆಯೆ ಭದ್ರವಿಲ್ಲ. ಆದರೆ ಭಾರತದಲ್ಲಿ ಸಮಗ್ರ ಪ್ರಧಾನಿ ಇರುವದರಿಂದ ನಮಗೆ ಭಯವಿಲ್ಲ. ಎಂದು ಅವರು ಹೇಳಿದರು. Bhatkal VHP Strike

 

Bhatkal VHP Strike ಇನ್ನೊರ್ವ ಅತಿಥಿ

ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಪ್ರಮುಖ ಕಾರ್ಕಳದ ಶ್ರೀಕಾಂತ ಶೆಟ್ಟಿ ಮಾತನಾಡಿ ಕೇಸರಿ ಹಾರಾಡುತ್ತಿರುವದು ಗಾಳಿಯಿಂದ ಅಂತ ತಿಳಿದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಸಹಸ್ರಾರು ಹಿಂದೂ ಕಾರ್ಯಕರ್ತರು ಬಲಿದಾನದ ಸಂದರ್ಬದಲ್ಲಿ ಅವರ ಚೆಲ್ಲಿದ ನೆತ್ತರಿನಿಂದ ಇದು ಹಾರಾಡುತ್ತಿದೆ. ಬಾಂಗ್ಲಾ ದೇಶವನ್ನು ಒಂದು ಸಮಯದಲ್ಲಿ ಕನ್ನಡಿಗರು ಆಳ್ವಿಕೆ ಮಾಡಿದ್ದಾರೆ. ಇಂದು ಕೂಡ ಕನ್ನಡಿಗರಾದ ನಾವು ಒಗ್ಗಟ್ಟಾಗಿ ಬಾಂಗ್ಲಾ ದೇಶಕ್ಕೆ ಸಂದೇಶ ರವಾನಿಸಬೇಕಿದೆ ಎಂದು ಅವರು ಹೇಳಿದರು.

ಹಿಂದೂ ಮುಖಂಡ ಗೋವಿಂದ ಖಾರ್ವಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಭಟ್ಕಳದ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಕಾರ್ಯಕ್ರಮದ ಸಹಸಂಚಾಲಕ ಜಯಂತ ಬೆಣಂದೂರು, ನಾಗೇಶ ನಾಯ್ಕ ಹೆಬಳೆ ಮಾತನಾಡಿದರು.

ದಿವ್ಯಾ ದಿನೇಶ ನಾಯ್ಕ, ಉಮೇಶ ಮುಂಡಳ್ಳಿ, ಪ್ರಾರ್ಥಿಸಿದರೆ ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, 31 ಸಮಾಜದ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

ಇದನ್ನೂ ಓದಿ: https://www.vijayavani.net/all-problems-can-be-solved-by-studying-the-gita

https://www.facebook.com/share/p/1BSLnNxn7k/

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …