ಭರಮಸಾಗರದಲ್ಲಿ ಧ್ವಜಾರೋಹಣ

ಭರಮಸಾಗರ: ಇಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಆರ್ಯ ವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಆಚರಿಸಲಾಯಿತು.

ಪುರೋಹಿತ ಶ್ರೀಪಾದ ಭಟ್ ನೇತೃತ್ವದಲ್ಲಿ ಧ್ವಜಾರೋಹಣ, ಮಾತೃ ಪೂಜೆ, ಕಳಸ ಪೂಜೆ, ಜ್ಯೋತಿದರ್ಶನ, ಸುಮಂಗಲಿಯರಿಂದ ಕುಂಕುಮಾರ್ಚನೆ, ತಂಬಿಟ್ಟಿನ ಆರತಿ, ಮಹಾ ಮಂಗಳಾರತಿ ಜರುಗಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಂಘದಿಂದ ವಾಸವಿ ವೇಷಭೂಷಣ ಸ್ಪರ್ಧೆ, ಧಾರ್ಮಿಕ ಅಂತ್ಯಾಕ್ಷರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ, ಕನ್ನಿಕಾ ಪರಮೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿದರು. ಸಮಾಳ, ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು.

ಸಮಾಜದ ವರ್ತಕರು ಅಂಗಡಿ ರಜೆ ಮಾಡಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.