ಕಲಬುರಗಿ: ಸೇಡಂ ತಾಲೂಕಿನ ಬೀರನಹಳ್ಳಿ ಕ್ರಾಸ್ ಬಳಿಯ ಪ್ರಕೃತಿ ನಗರದಲ್ಲಿ ಜ.೨೯ರಿಂದ ಫೆ.ರವರೆಗೆ ೯ ದಿನ ನಡೆಯುವ ೭ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಸಂಸ್ಕೃತಿ, ಕಾಯಕ, ಪ್ರಕೃತಿ, ವಿಜ್ಞಾನ ಸಮಗ್ರ ವಿಷಯಗಳ ಸಮ್ಮಿಲನದ ಪ್ರದರ್ಶಿನಿಯೊಂದಿಗೆ ದೇಶ ವಿದೇಶದ ಸಾಧಕರ ಸಮಾಗಮವಾಗಲಿದೆ ಎಂದು ಉತ್ಸವದ ಪ್ರಧಾನ ಸಂಯೋಜಕ ಬಸವರಾಜ ಪಾಟೀಲï ಸೇಡಂ ಹೇಳಿದರು.
೨೪೦ ಎಕರೆ ವಿಶಾಲ ಮೈದಾನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಯಕಲೋಕ, ವಿe್ಞÁನ ಲೋಕ , ಕಲಾಲೋಕ , ಸೇವಾ ಲೋಕ ಸೇರಿ ಒಂಬತ್ತು ಲೋಕ ತಲೆ ಎತ್ತಲಿದ್ದು, ತಲಾ ೮೦೦ ಮೀಟರ್ ಉದ್ದಕ್ಕೂ ವೇದಿಕೆಗಳು, ಮಳಿಗೆಗಳು, ವಸತಿ ಟೆಂಟ್, ವಸ್ತುಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ತಲೆ ಎತ್ತಲಿವೆ. ೬೦ ಎಕರೆಯಲ್ಲಿ ವಾಹನ ನಿಲುಗಡೆಗೆ ಮೀಸಲಿಟ್ಟಿದ್ದು, ೨೪ ಎಕರೆಯಲ್ಲಿ ಅನುಮಂಟಪ ಮುಖ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ೬೫ ಸಾವಿರ ಜನರ ಸಾಮರ್ಥ್ಯವಿದೆ. ಮುಖ್ಯ ಅತಿಥಿಗಳ ಉಪನ್ಯಾಸ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
೨೦೦೦ ಜನರ ಸಾಮರ್ಥ್ಯದ ಯಾನಾಗುಂದಿ ಮಾತೆ ಮಾಣಿಕೇಶ್ವರಿ ಮಂಟಪದಲ್ಲಿ ಪ್ರೇರಣಾದಾಯಕ, ಜಾಗೃತಿ ಉಪನ್ಯಾಸಗಳು ಹಾಗೂ ಚಿಂತನಾ ಸಭೆ ನಡೆಯಲಿವೆ. ಸಿದ್ದರಾಮ ಜಂಬಲದಿನ್ನಿ ಮಂಟಪದಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಜನಲೋಕ ಮತ್ತು ಸೇವಾ ಲೋಕದ ತಲಾ ೧೦೦ ಮಳಿಗೆಗಳು, ಕಾಯಕ ಲೋಕದ ೧೫೦ ಮಳಿಗೆಗಳು ಬಲಬದಿಯಲ್ಲಿ ನಿರ್ಮಿಸಲಾಗುತ್ತಿದೆ. ತುರ್ತು ಚಿಕಿತ್ಸೆಗೆ ೧೮ ಹಾಸಿಗೆಗಳ ಆಸ್ಪತ್ರೆ ಇರಲಿದೆ. ೨ ಎಕರೆಯಲ್ಲಿ ದೃಶ್ಯಕಲಾ ಲೋಕ ತಲೆ ಎತ್ತಲಿದ್ದು, ಕಲೆಗಳ ಪ್ರದರ್ಶನ, ಕಾರ್ಯಾಗಾರ, ಸ್ಥಳದ¯್ಲೆÃ ಚಿತ್ರ ಬಿಡಿಸುವ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಯಲಿವೆ ಎಂದರು.
ಬೀರನಹಳ್ಳಿ ರಸ್ತೆಯ ಎಡ ಬದಿಯ ನೂರಾರು ಎಕರೆ ಪ್ರದೇಶದ ಪೈಕಿ ೮ ಎಕರೆಯಲ್ಲಿ ವಿe್ಞÁನ ಲೋಕ ನಿರ್ಮಿಸಲಾಗುತ್ತಿದೆ. ಶಾಲಾ ಮಕ್ಕಳ ಸೃಜನ ಶೀಲತೆ ಹಾಗೂ e್ಞÁನಾರ್ಜನೆಗಾಗಿ ವಿe್ಞÁನಕ್ಕೆ ಸಂಬAಧಿಸಿದ ವಸ್ತು ಪ್ರದರ್ಶನ ಏರ್ಪಡಿಸುತ್ತಿದ್ದು, ಇಸ್ರೋ ಸಹ ಕೈ ಪ್ರದರ್ಶನದ ಭಾಗವಾಗಿರಲಿದೆ. ೮೬೪ ಪ್ರದರ್ಶನ ಮಳಿಗೆಗಳೂ ಇರಲಿವೆ. ಸ್ವಯಂ ಸೇವಕರ ಕ್ಯಾಂಪ್, ೨ ಎಕರೆಯಲ್ಲಿ ಕರ್ನಾಟಕ ಬಹು ಆಹಾರ ಪದ್ಧತಿ ಮತ್ತು ಶಾಪಿಂಗ್ ಮಳಿಗೆ ಇರಲಿವೆ. ೬,೦೦೦ ಜನರ ವಸತಿಗೆ ತಾತ್ಕಾಲಿಕ ಟೌನ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಉತ್ಸವಕ್ಕೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಕಲಬುರಗಿ, ಸೇಡಂ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲು ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿ ಬಸ್‌ಗೆ ಮನವಿ ಮಾಡಲಾಗಿದೆ. ಬೆಳಗ್ಗೆ ೮ರಿಂದ ೧೦ರವರೆಗೆ ಸಾರಿಗೆ ವ್ಯವಸ್ಥೆ ಇರಲಿದೆ. ಬೆಳಗ್ಗೆ ೮ರಿಂದ ಸಂಜೆ ೧೦ರವರೆಗೆ ಪ್ರಸಾದ ವ್ಯವಸ್ಥೆ ಇರಲಿದೆ. ಉತ್ಸವ ದಾಖಲೆಯಾಗಿ ಉಳಿಸಲು ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕ ರಚಿಸಿ, ಮುದ್ರಿಸಿ ಮಾರಾಟ ಮಾಡಲು ಉz್ದÉÃಶಿಸಲಾಗಿದೆ ಎಂದರು.
೧೧ ಎಕರೆಯಲ್ಲಿ ಕೃಷಿ ಲೋಕ ಅನಾವರಣವಾಗಲಿದೆ. ೬೨ ಬಗೆಯ ತರಕಾರಿ, ೧೨ ವಿಧದ ಪುಷ್ಪಗಳು, ರೇಷ್ಮೆ, ಈರುಳ್ಳಿ, ಮಾವು, ಪೇರು, ಕಬ್ಬು, ಸೆಣಬು, ಬಟಾಣೆ, ಹಣ್ಣಿನ ಗಿಡಗಳ ಪ್ರದರ್ಶನಕ್ಕೆ ಬೆಳೆಸಲಾಗಿದ್ದು, ಕುರಿ ಕೋಳಿ, ಜಾನುವಾರು ಪ್ರದರ್ಶನ, ಕೃಷಿ ಪ್ರದರ್ಶನ ನಡೆಯಲಿದೆ ಎಂದು ಕೃಷಿ ಲೋಕದ ಶಾಂತರೆಡ್ಡಿ ತಿಳಿಸಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿP್ಷÀಣ ಸಮಿತಿಯ ಕಾರ್ಯದರ್ಶಿ ಅನುರಾಧಾ ಪಾಟೀಲï, ಮಾಧ್ಯಮ ಸಂಚಾಲಕರಾದ ಡಾ.ಸದಾನಂದ ಪೆರ್ಲ, ಪ್ರಭಾಕರ ಜೋಶಿ, ಉಮೇಶ ಶೆಟ್ಟಿ ಉಪಸ್ಥಿತರಿದ್ದರು.
ಸಾಧಕರು, ಸೇವಕರಿಗೆ ಸನ್ಮಾನ: ೯೫೦೦ ಸ್ವಯಂಸೇವಕರು ಕಾರ್ಯನಿರ್ವಹಿಸಲಿz್ದÁರೆ. ೫೧ ಅನಿವಾಸಿ ಭಾರತೀಯರಿಗೆ, ೫೧ ಪದ್ಮಶ್ರೀ ಪುರಸ್ಕೃತರಿಗೆ, ದೇಶದ ೫೧ವಿಶಿಷ್ಟ ಸಾಧಕರಿಗೆ, ೫೧ ಯುವ ಸಾಧಕರಿಗೆ, ಕಲ್ಯಾಣ ಕರ್ನಾಟಕದ ೫೧ ಗಣ್ಯರಿಗೆ, ಕೊತ್ತಲ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ೫೧ ಸಾಧಕರಿಗೆ, ಸೇಡಂ ತಾಲೂಕಿನ ಸ್ಥಳೀಯ ೧೫ ಹಳ್ಳಿಗಳ ವಿವಿಧ ಕ್ಷೇತ್ರದ ೧೫ ಸಾಧಕರಿಗೆ ಬೇರೆ ಬೇರೆ ದಿನಗಳಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ಹಾರಕೂಡ ಶ್ರೀ ಉತ್ಸವದ ವಿಶೇಷ ಅತಿಥಿ: ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಭಾರತೀಯ ಸಂಸ್ಕೃತಿ ಉತ್ಸವದ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿz್ದÁರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಸಂಗೀತ ಕಾಯಕ ವಿವಿಧ ಕಲೆ ಮುಂತಾದವುಗಳಿಗೆ ಧರ್ಮ ಧಾರ್ಮಿಕ ಕಾರ್ಯಕ್ರಮಗಳ ಜತೆ ಸಂರP್ಷÀಣೆ ಮತ್ತು ಪ್ರೋತ್ಸಾಹಿಸುತ್ತಿರುವ ಶ್ರೀಗಳನ್ನು ಸ್ವರ್ಣ ಜಯಂತಿ ನೆನಪಿನಲ್ಲಿ ವಿಶೇಷ ಅತಿಥಿ ಎಂದು ಪರಿಗಣಿಸಿದ್ದು, ಒಂಬತ್ತು ದಿನದ ಮುಖ್ಯ ವೇದಿಕೆಯ ಎಲ್ಲ ಕಾರ್ಯಕ್ರಮದಲ್ಲಿ ಪೂಜ್ಯರು ವಿಶೇಷ ಅತಿಥಿಯಾಗಿ ಇರಲಿದ್ದಾರೆ ಎಂದು ಬಸವರಾಜ ಪಾಟೀಲï ಸೇಡಂ ಹೇಳಿದರು.
ನಿಂದಕರಿಗೆ ಮನೆ ನಿರ್ಮಾಣ…: ‘ನಿಂದಕ ನಿಜ ರಾಕೋ’ಎಂಬ ಕಬೀರರ ಮಾತಿನಂತೆ ನಿಂದಕರಿಗೆ ಎದುರಿನಲ್ಲೇ ಮನೆ ಕಟ್ಟಿಕೊಡಬೇಕು. ಆ ಮೂಲಕ ತಪ್ಪಿನ ಅರಿವಾಗಿ ಜಾಗೃತಿ ಸಾಧ್ಯವಾಗುತ್ತದೆ. ದೇಶಕ್ಕೆ ಒಳಿತಾಗುವ ಯಾವುದೇ ಕಾರ್ಯಕ್ರಮ ಆಡಲಿ. ಟೀಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ. ಆಮಂತ್ರಣದಲ್ಲಿ ಮುದ್ರಿಸಿದ ಎಲ್ಲ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಸೇಡಂ ಶಾಸಕರು ನೆರವಾಗಿದ್ದಾರೆ ಎಂದು ಬಸವರಾಜ ಪಾಟೀಲï ಸೇಡಂ ಹೇಳಿದರು.