ಮಂಡ್ಯ: ರಾಜ್ಯದಲ್ಲಿ ತಲೆದೋರಿರುವ ವಕ್ಫ್ ಬೋರ್ಡ್ ವಿವಾದ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಸದಸ್ಯರ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತದ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು ಒತ್ತಾಯಿಸಿದರು.
ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಮಂಡ್ಯ ಜಿಲ್ಲೆಯ ನಾಗಮಂಗಲ, ಬೆಳ್ಳೂರು ಭಾಗಗಳಲ್ಲಿ ಹಾಗೂ ಇನ್ನೂ ಹಲವಾರು ಜಿಲ್ಲೆಗಳ ರೈತರ ಜಮೀನುಗಳ ಆರ್‌ಟಿಸಿಯ ಕಾಲಂ ನಂ.11ರಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಯಾಗಿರುವ ಬಗ್ಗೆ ರಾಜ್ಯಾದ್ಯಂತ ರೈತರು ಆತಂಕಗೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿನ್ನೆಲೆಯಲ್ಲಿ ತುರ್ತು ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ತಕ್ಷಣ ಜಿಲ್ಲಾಧಿಕಾರಿಗೆ ಸಂಬಂಧಿಸಿದ ಇಲಾಖೆಗೆ ಯಾವುದೇ ರೈತನ ಆಸ್ತಿಗಳ ಮೇಲೆ ತೊಂದರೆಯಾಗದಂತೆ ಸಂದೇಶ ರವಾನಿಸಬೇಕು. ಸರ್ಕಾರ ವಕ್ಫ್ ಮಂಡಳಿಗೆ ಹೆಚ್ಚು ಅಧಿಕಾರ ನೀಡಿ ಒಂದು ಸಮುದಾಯವನ್ನು ಬಲಪಡಿಸುತ್ತಿದೆ. ಮಂಡಳಿ ಯಾವುದೇ ಆಸ್ತಿಯನ್ನು ತನ್ನದೆಂದು ಘೋಷಿಸುವುದಾದರೆ ಭಾರತ ಆಳವಡಿಸಿಕೊಂಡಿರುವ ಸಂವಿಧಾನ, ನ್ಯಾಯಾಂಗಕ್ಕೆ ಬೆಲೆಯಲ್ಲಿ ಎಂದು ಪ್ರಶ್ನಿಸಿದರು.
ಸಮಸ್ಯೆ ಉಂಟಾದರೆ ನ್ಯಾಯಾಂಗಕ್ಕೆ ಹೋಗುವುದು ಸಹಜ. ಆದರೆ ವಕ್ಫ್ ಮಂಡಳಿ ನೋಟೀಸ್ ಹೇಗೆ ನೀಡಿತು. ರೈತರು ನ್ಯಾಯಾಲಯ ಬಿಟ್ಟು ವಕ್ಫ್ ಮಂಡಳಿಗೆ ಹೋಗಿ ನ್ಯಾಯ ನಿರೀಕ್ಷಿಸಲು ಸಾಧ್ಯವೇ?. ಈ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಭಾರತೀಯ ಕಿಸಾನ್ ಸಂಘ ರೈತಪರ, ಕನ್ನಡಪರ ಸಂಘಟನೆಗಳೊಂದಿಗೆ ಪ್ರಬಲವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಹಾಡ್ಯ ರಮೇಶ್, ಪುಟ್ಟಮ್ಮ, ಇಂದ್ರಮ್ಮ, ವೆಂಕಟೇಶ್, ರಾಘವೇಂದ್ರ, ಜಯರಾಂ, ಹನಿಯಂಬಾಡಿ ಬಸವರಾಜು, ದಿವ್ಯಾ, ರುದ್ರಪ್ಪ ಇತರರಿದ್ದರು.
ಶೀಘ್ರವೇ ವಕ್ಫ್ ವಿವಾದ ಬಗೆಹರಿಸಲಿ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರಾಂತದ ಅಧ್ಯಕ್ಷ ಬಿ.ಪಿ.ಅಪ್ಪಾಜಿ ಒತ್ತಾಯ
You Might Also Like
ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್ ವಿಧಾನ | Health Tips
10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…
ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars
Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…
ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್ ಮಾಡೋದೆ ಇಲ್ಲ | Health Tips
ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…