ಮನೆ ಮನೆಗೆ ತೆರಳಿ ಪ್ರಚಾರ

ರಬಕವಿ/ಬನಹಟ್ಟಿ:ತೆರದಾಳ ಮತಕ್ಷೇತ್ರದ ಬನಹಟ್ಟಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಜಿಲ್ಲಾಧ್ಯಕ್ಷ ಸಿದ್ದು ಸವದಿ ಶುಕ್ರವಾರ ಅಂಬಾಭವಾನಿ ದೇವಿ ದರ್ಶನ ಪಡೆದು ಪ್ರಚಾರಕ್ಕೆ ಚಾಲನೆ ನೀಡಿದರು.

ಗದ್ದಿಗೌಡರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಬಿರುಸಿನ ಪ್ರಚಾರ ಪ್ರಾರಂಭವಾಗಿದೆ. ಸಿದ್ದು ಸವದಿ ನೇತೃತ್ವದಲ್ಲಿ ತೆರದಾಳ ಮತಕ್ಷೇತ್ರದ ಬನಹಟ್ಟಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಸಿದ್ದು ಸವದಿ ಅವರ ಅಭಿವೃದ್ಧಿ ಕಾರ್ಯಗಳು, ಜನರ ಜತೆಗಿನ ಉತ್ತಮ ಒಡನಾಟ, ಸೌಜನ್ಯದ ವರ್ತನೆ ಹಾಗೂ ಕಾರ್ಯಕರ್ತರ ಶಕ್ತಿಯಿಂದ ಈ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಭೀಮಸಿ ಮಗದುಮ್, ನಗರಸಭೆ ಸದಸ್ಯ ಶಿವಾನಂದ ಬುದ್ನಿ, ಅಶೋಕ ರಾವಳ, ಕುಮಾರ ಕದಂ, ಹಿರಾಚಂದ ಕಾಸರ, ಶಿವಾನಂದ ಕಾಗಿ, ಕುಮಾರ ಕದಂ, ಶೇಖರ ಹಕಲದಡ್ಡಿ, ಈಶ್ವರ ಪಾಟೀಲ, ರತ್ನಾ ಕೊಳಕಿ, ಪರಪ್ಪ ಜಿಡ್ಡಿಮನಿ, ಮಾನಿಂಗ ಅವರಾದಿ ಇತರರಿದ್ದರು.