More

  ಕಲಿಕೆ ನಿರಂತರವಾಗಿದ್ದಾಗ ಯಶಸ್ಸು

  ಶೃಂಗೇರಿ: ಗುರುವಿನಿಂದ ಪಡೆಯುವ ಶಿಕ್ಷಣ ಶಿಷ್ಯನಿಗೆ ದೊರಕುವ ಅರ್ಥಪೂರ್ಣವಾದ ವರವಾಗಿದೆ. ಅದು ಶಾಶ್ವತವಾದ ವಿದ್ಯೆ ಎಂದು ಶ್ರೀ ಶಾರದಾ ಪೀಠದ ಋತ್ವಿಜರಾದ ವಿದ್ವಾನ್ ಶಿವಕುಮಾರ ಶರ್ಮ ಹೇಳಿದರು.
  ಮೆಣಸೆ ಗ್ರಾಪಂನ ಮಸಿಗೆ ಗ್ರಾಮದ ಕೆರೆಮನೆ ದಿನೇಶ್ ಅವರ ಮನೆಯಲ್ಲಿ ಶ್ರೀ ಶಾರದಾ ಶಾಸೀಯ ಸಂಗೀತ ಸಭಾ ಮತ್ತು ಭಾರತೀ ಸಂಗೀತ ಶಾಲೆ ಶನಿವಾರ ಏರ್ಪಡಿಸಿದ್ದ ಸಂಗೀತ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
  ಶಿಕ್ಷಣ ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಮೀಸಲಾಗಿರದೆ ಜೀವನವಿಡೀ ನಾವು ಕಲಿಯುತ್ತಲೇ ಇರಬೇಕು. ಸಂಗೀತ ಎಂಬುದು ಮಹಾಸಾಗರ ಇದರಲ್ಲಿ ಹಲವು ರೀತಿಯ ವಿಷಯವಿದೆ. ಕಲಿಕೆ ನಿರಂತರವಾಗಿದ್ದಾಗ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
  ಶ್ರೀ ಶಾರದಾ ಶಾಸೀಯ ಸಂಗೀತ ಸಭಾ ಪದಾಧಿಕಾರಿ ಪನ್ನಗ ಶರ್ಮ ಮಾತನಾಡಿ, ಕಳೆದ 12 ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ವಸತಿಸಹಿತ ಸಂಗೀತ ಶಿಬಿರ ಏರ್ಪಡಿಸಲಾಗುತ್ತಿದೆ. ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಕಲಿಕೆಗೆ ಇದು ಉತ್ತಮ ಅವಕಾಶವಾಗಿದೆ ಎಂದರು.
  ಸಂಗೀತ ಶಿಬಿರದ ನಂತರ ವಿದ್ವಾನ್ ಆರ್.ಕೆ.ಶ್ರೀರಾಮಕುಮಾರ್, ಅಮೃತಮುರಳಿ ಮತ್ತು ಬಿ.ಶಿವರಾಮನ್ ಅವರಿಂದ ಶಾಸೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸಂಗೀತ ಕಲಿಕೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದವನ್ನು ಗುರುಭವನದಲ್ಲಿ ಪಡೆದರು.
  ಕಾರ್ಯಕ್ರಮದಲ್ಲಿ ಸಂಗೀತ ಸಭಾದ ನೈಬೀ ಪ್ರಭಾಕರ್, ಸಾವಿತ್ರಿ ಪ್ರಭಾಕರ್, ಪಾವನಿ ನಾಗಸಿಂಹ, ಕೆರೆಮನೆ ದಿನೇಶ್, ವೀಣಾ ದಿನೇಶ್ ಇದ್ದರು.

  See also  ತುಂಗಾ ನದಿಗೆ ಕಲ್ಪೋಕ್ತ ಪೂಜೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts