ಶಂಕರ ಭಾರತಿ ಗೋಶಾಲೆಗೆ ರೂ.5 ಲಕ್ಷ ಅನುದಾನ

blank

ಬಾಳೆಹೊನ್ನೂರು: ಹುಯಿಗೆರೆಯ ಶಂಕರ ಭಾರತಿ ಗೋಶಾಲೆಗೆ ಹೆಚ್ಚುವರಿ ಕಟ್ಟಡ, ಗೋದಾಮು ನಿರ್ಮಾಣಕ್ಕೆ ಶೃಂಗೇರಿ ಶಾರದಾ ಪೀಠದಿಂದ 5 ಲಕ್ಷ ರೂಪಾಯಿಯನ್ನು ಆಶೀರ್ವಾದ ರೂಪದಲ್ಲಿ ನೀಡಲಾಗಿದೆ ಎಂದು ಗೋಶಾಲೆ ಮುಖ್ಯಸ್ಥರ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.
ಹುಯಿಗೆರೆ ಶಂಕರ ಭಾರತಿ ಗೋಶಾಲೆ ಎರಡೂವರೆ ವರ್ಷದಿಂದ ಗೋವುಗಳ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದು, ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದದಿಂದ ಎರಡು ಸೂರುಗಳನ್ನು ನಿರ್ಮಿಸಿಕೊಡಲಾಗಿದೆ. ಈಗ ಗೋಶಾಲೆಯ ಹೆಚ್ಚುವರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣಕ್ಕಾಗಿ ಮತ್ತೆ ಐದು ಲಕ್ಷ ರೂಪಾಯಿಯನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತಿತೀರ್ಥ ಸ್ವಾಮೀಜಿ ನೀಡಿದ್ದಾರೆ ಎಂದು ಹೇಳಿದರು.
ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಗೋವುಗಳನ್ನು ಸಲಹುತಿದ್ದು, ಸಮಾಜ ನಮ್ಮ ಮೇಲೆ ವಿಶ್ವಾಸವಿಟ್ಟು ಪ್ರೋತ್ಸಾಹ ನೀಡುತ್ತಿದೆ. ಗೋಶಾಲೆಯ ಪ್ರತಿ ಬೆಳವಣಿಗೆಯಲ್ಲಿ ಖುದ್ದು ಶ್ರೀಮಠದ ಹಿರಿಯರಾದ ಕೃಷ್ಣಮೂರ್ತಿ ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿಂದು ಸಮಾಜದ ಸಹಕಾರದೊಂದಿಗೆ ಗೋಮಾತೆಯ ಸಂರಕ್ಷಣೆ ಕೆಲಸ ಮಾಡಲಾಗುತ್ತಿದೆ ಎಂದರು.
ಗೋವು ಕೇವಲ ಭಾವನಾತ್ಮಕ ಧಾರ್ಮಿಕ ನಂಬಿಕೆ ಅಲ್ಲ. ವೈಜ್ಞಾನಿಕವಾಗಿ ಪರಿಸರಕ್ಕೆ ಅತ್ಯಂತ ಅಗತ್ಯವಾದ ಜೀವಿ, ರೈತರ ಬೆನ್ನೆಲುಬು. ಇಂದಿನ ಬಹುತೇಕ ಪರಿಸರ ಸಮಸ್ಯೆಗಳಿಗೆ ಗೋವು ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಸ್ವಾರ್ಥಭಾವ ಬಿಟ್ಟು ಗೋವನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.
ಸಮಾಜದಲ್ಲಿ ಗೋವು ಮಾತೆಯಾಗಬೇಕು ಹೊರತು ಅನಾಥವಾಗಬಾರದು. ಗೋವು ದೇಶದ ಸಂಪತ್ತು ಆಗಬೇಕೆ ಹೊರತು, ವ್ಯಾಪಾರದ ವಸ್ತುವಾಗಬಾರದು. ಶ್ರೀಶಂಕರರು ಹೇಳಿದಂತೆ ಜಗತ್ತಿಗೆಲ್ಲ ಯಾರು ತಾಯಿ ಎಂದರೆ ಗೋವು ಮಾತೆಯಾಗಿ ಪೂಜಿತಳು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…