ಪೆಟ್ರೋಲ್​ ಬೆಲೆ ಏರಿಕೆಯಾಗಬೇಕು ಎಂದ ಆಪ್ ಕಾರ್ಯಕರ್ತನಿಗೆ ಕಪಾಳ ಮೋಕ್ಷ

ಬೆಳಗಾವಿ: ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಳವಾಗುತ್ತಿದೆ ಎಂದು ದೇಶಾದ್ಯಂತ ಭಾರತ್​ ಬಂದ್​ಗೆ ಕರೆ ಕೊಟ್ಟು ಪ್ರತಿಭಟನೆ ನಡೆಸುತ್ತಿರುವಾಗ, ಬಾಯಿ ತಪ್ಪಿ ಪೆಟ್ರೋಲ್​ ಬೆಲೆ ಏರಿಕೆಯಾಗಬೇಕು ಎಂದ ಆಮ್​ ಆದ್ಮಿ ಪಕ್ಷದ ​ ಕಾರ್ಯಕರ್ತನಿಗೆ, ಪಕ್ಷದ ಮುಖಂಡ ಕಪಾಳ ಮೋಕ್ಷ ಮಾಡಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಬಳಿ ಘಟನೆ ನಡೆದಿದ್ದು, ಆಪ್​ ಮುಖಂಡ ಸದಾನಂದ ಬಾಮನೆ ಕಾರ್ಯಕರ್ತನ ಮೇಲೆ ಕೈ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಆಪ್​ ಮುಖಂಡ ಪೆಟ್ರೋಲ್ ಬೆಲೆ ಎಂದು ಕೂಗಿದರೆ ಇತರ ಕಾರ್ಯಕರ್ತರು ಇಳಿಯಲೇಬೇಕು ಎನ್ನಬೇಕಿತ್ತು. ಆದರೆ, ಕಾರ್ಯಕರ್ತ ಇಳಿಯಲೇಬೇಕು ಎನ್ನುವುದರ ಬದಲು ಏರಲೇ ಬೇಕು ಎಂದಿದ್ದಕ್ಕೆ ಆಪ್​ ಮುಖಂಡ ಈ ರೀತಿ ವರ್ತಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. (ದಿಗ್ವಿಜಯ ನ್ಯೂಸ್​)