ರಸ್ತೆಗಾಗಿ ಗಾಪಂ ಕಚೇರಿಗೆ ಮುತ್ತಿಗೆ

ಭರಮಸಾಗರ: ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಹೆಗ್ಗೆರೆ ಗ್ರಾಮದ ಜನತಾ ನಿವೇಶನದ ನಿವಾಸಿಗಳು ಕೊಳಹಾಳು ಗ್ರಾಪಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಜಾ, ಪಪಂ ಸೇರಿದ 40 ಕುಟುಂಬಗಳು ಕಳೆದ 20 ವರ್ಷದಿಂದ ಇಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ರಸ್ತೆ ನಿರ್ಮಿಸದ ಕಾರಣ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕುಡಿವ ನೀರಿನ ಸಮಸ್ಯೆ ನಿವಾರಿಸಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೀರು, ರಸ್ತೆ ಸೇರಿ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿದರು.

ಗ್ರಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದೇವೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಗ್ರಾಪಂ ಸದಸ್ಯ ವಸಂತಕುಮಾರ್, ಸ್ಥಳೀಯ ನಿವಾಸಿಗಳಾದ ಗುಡದೇಶ್, ಉಮೇಶ್, ನಾಗಪ್ಪ, ಮಲ್ಲೇಶಪ್ಪ, ಪಿ.ಬಿ.ಚಂದ್ರಪ್ಪ, ಕುಮಾರಪ್ಪ, ಶಿವಮ್ಮ, ಹನುಮಕ್ಕ, ಲಕ್ಷ್ಮೀ, ಪವಿತ್ರ, ಜಯಮ್ಮ, ಗಂಗಮ್ಮ, ಈರಣ್ಣ, ನೀಲಮ್ಮ, ಶರಣಮ್ಮ, ಗೌರಮ್ಮ, ಸರೋಜಮ್ಮ, ನೇತ್ರಾವತಿ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *