More

    ಬೆಂಕಿ ಅವಘಡ ತಡೆ ಜಾಗೃತಿ

    ಭರಮಸಾಗರ: ಎನ್ನೆಸ್ಸೆಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಯುತ್ ರೆಡ್ ಕ್ರಾಸ್ ಯೂನಿಟ್ ಜಿಲ್ಲಾ ಘಟಕದಿಂದ ಪ್ರಥಮ ಚಿಕಿತ್ಸೆ ಹಾಗೂ ಪ್ರಕೃತಿ ವಿಕೋಪ ಕುರಿತು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

    ಶಿಬಿರ ಉದ್ಘಾಟಿಸಿದ ಪ್ರಾಂಶುಪಾಲ ಡಾ.ಆರ್.ಮಹೇಶ್, ಅಪಘಾತಗಳು ಸಂಭವಿಸಿದಾಗ ಯಾವ ರೀತಿಯ ಚಿಕಿತ್ಸೆ ನೀಡಬಹುದು ಮತ್ತು ಈ ಸಂದರ್ಭದಲ್ಲಿ ಯುವಕರ ಪಾತ್ರ ಏನು ಎಂಬುದರ ಬಗ್ಗೆ ವಿವರಿಸಿದರು.

    ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಎಸ್.ವೀರೇಶ್ ಮಾತನಾಡಿ, ಅಪಘಾತ, ಬೆಂಕಿ ಅವಘಡ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು.

    ಉಡುಪಿಯ ಡಾ.ಕೀರ್ತಿ ಎಚ್.ಪಾಲನ್, ಪ್ರಥಮ ಚಿಕಿತ್ಸೆ ಹಾಗೂ ಪ್ರಕೃತಿ ವಿಕೋಪದ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

    ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ರಾಜ್ಯ ಸದಸ್ಯರಾದ ಗಾಯತ್ರಿ ಶಿವರಾಂ, ಪ್ರಾಧ್ಯಾಪಕರಾದ ಕೆ.ಎಸ್.ಸೌಮ್ಯಾ, ಪ್ರವೀಣ್, ಲೋಕೇಶ್ ನಾಯ್ಕ, ಕೆ.ಎಂ.ಸ್ಮಿತಾ, ಸಂಗಮೇಶ್ವರ್, ಪುನೀತ್, ವೀರೇಂದ್ರ, ಚಿದಾನಂದ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts