ಹೋರಾಟ ನಿಲ್ಲಿಸುವುದೇ ಇಲ್ಲ

ಭರಮಸಾಗರ: ಮೀಸಲು ಹೆಚ್ಚಳಕ್ಕ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳ ನತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆ ಮಂಗಳವಾರ ರಾತ್ರಿ ಭರಮಸಾಗರಕ್ಕೆ ಆಗಮಿಸಿತು.

ಬುಧವಾರ ಬೆಳಗ್ಗೆ ಪ್ರವಾಸಿ ಮಂದಿರ ಬಳಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ವಾಲ್ಮೀಕಿ ಸಮಾಜದ ಗಣ್ಯರು, ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಶಾಸಕ ಎಂ.ಚಂದ್ರಪ್ಪ ಕೂಡ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆ ಬಳಿಕ ಪಾದಯಾತ್ರೆಯನ್ನು ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ಸ್ವಾಮೀಜಿ, ಪಾದಯಾತ್ರೆಗೆ ಜನಪ್ರತಿನಿಧಿಗಳು, ಶಾಸಕರು ಕೈಜೋಡಿಸುತ್ತಿದ್ದಾರೆ ಮೀಸಲು ಹೆಚ್ಚಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಜಿಪಂ ಸದಸ್ಯ ಡಿ.ವಿ.ಶರಣಪ್ಪ, ಮುಖಂಡರಾದ ಕೊಳಹಾಳು ಶರಣಪ್ಪ, ಚೌಲೀಹಳ್ಳಿ ನಾಗೇಂದ್ರಪ್ಪ, ಎಚ್.ಎನ್.ತಿಪ್ಪೇಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *