ಭರಮಸಾಗರದಲ್ಲಿ ಹಬ್ಬ ಆಚರಣೆ

ಭರಮಸಾಗರ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶುಕ್ರವಾರ ಪ್ರಥಮ ಆಷಾಢ ಏಕಾದಶಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಂಜಾನೆ ಮನೆ ಮತ್ತು ಗೋಶಾಲೆಗಳನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿಠಲನ ಭಕ್ತರು ದೇವಾಲಯಗಳಿಗೆ ಹೋಗಿ ಭಜನೆ ಸೇವೆ ಮಾಡಿದರು.

ಪೂರ್ಣ ದಿನ ಉಪವಾಸ ವ್ರತ ಆಚರಿಸಿ ರಾತ್ರಿ ಜಾಗರಣೆ ಮಾಡುವರು, ಸಂಪ್ರದಾಯದಂತೆ ದೇವರಿಗೆ ಹಲಸಿನ ಹಣ್ಣನ್ನು ನೈವೇದ್ಯವಾಗಿ ಅರ್ಪಿಸಿದ ಬಳಿಕ ಇತರರಿಗೆ ದಾನ ಮಾಡಿದರು. ರೈತರು ಮೊದಲ ಏಕಾದಶಿಯನ್ನು ವಿಶೇಷ ಆಚರಿಸಿದರು.