ಹುಲ್ಲೇಹಾಳು ಗ್ರಾಮದಲ್ಲಿ ಶಾಂತಿ ಸಭೆ

ಭರಮಸಾಗರ: ಎಲ್ಲರೂ ಸೌಹಾರ್ದಯುತವಾಗಿ ಬಾಳಿದರೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ನಂದಗಾವಿ ಹೇಳಿದರು.

ಹೋಬಳಿಯ ಹುಲ್ಲೇಹಾಳು ಗ್ರಾಮದಲ್ಲಿ ಈಚೆಗೆ ಕ್ಷುಲ್ಲಕ ಕಾರಣದಿಂದ ಆಗಿದ್ದ ಜಗಳ ಜಾತಿ ನಿಂದನೆ ಕೇಸ್ ಹಂತ ತಲುಪಿ ಹಳ್ಳೀಲಿ ಅಶಾಂತಿ ಉಂಟಾಗಿದ್ದ ಹಿನ್ನೆಲೆ ಶುಕ್ರವಾರ ಪೊಲೀಸ್, ಕಂದಾಯ ಇಲಾಖೆ ಸಹಯೋಗದಲ್ಲಿ ನಡೆದ ಶಾಂತಿಸಭೆ ಉದ್ದೇಶಿಸಿ ಮಾತನಾಡಿದರು.

ಕ್ಷುಲ್ಲಕ ಕಾರಣಕ್ಕೆ ಆಗುವ ಜಗಳ ಅನಾಹುತದ ಹಂತ ತಲುಪಲು ಬಿಡಬಾರದು. ವೈಮನಸ್ಸು ತಕ್ಷಣವೇ ಮರೆತು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಗಮನ ಹರಿಸಿ ಹಳ್ಳಿಯನ್ನು ಆದರ್ಶ ಗ್ರಾಮವನ್ನಾಗಿಸಿ ಜಿಲ್ಲೆಗೆ ಹೆಸರು ತರಬೇಕು ಎಂದರು.

ಡಿವೈಎಸ್‌ಪಿ ವಿಜಯಕುಮಾರ್ ಮಾತನಾಡಿ, ಪೊಲೀಸರು ಕಾನೂನು ರಕ್ಷಕರಾಗಿದ್ದು, ಶಾಂತಿಗೆ ಭಂಗ ಬಾರದಂತೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ. ನಿಮ್ಮೆಲ್ಲರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ತಾವೂ ಸಹ ಇಲಾಖೆಯೊಂದಿಗೆ ಸಹಕರಿಸಿ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದು ಕೋರಿದರು.

ವೃತ್ತ ನಿರೀಕ್ಷಕ ಗಿರೀಶ್, ರಾಜಸ್ವ ನಿರೀಕ್ಷಕ ತಿಪ್ಪೇಸ್ವಾಮಿ, ಪಿಡಿಒ ನಾಸೀರ್ ಪಾಷಾ, ಗ್ರಾಮ ಲೆಕ್ಕಾಧಿಕಾರಿ ವೀಣಾ ಹಾಗೂ ಗ್ರಾಮದ ಮುಖಂಡರಿದ್ದರು.

Leave a Reply

Your email address will not be published. Required fields are marked *