ಭರಮಸಾಗರ: ಉತ್ತಮ ಮಳೆ, ಕಾಯಿಲೆ ತಡೆಗಾಗಿ ಶುಕ್ರವಾರ ಗ್ರಾಮ ಹಾಗೂ ಹೋಬಳಿಯಾದ್ಯಂತ ಅಜ್ಜಿ (ಹೋಳಿಗೆ ಅಮ್ಮ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂಪ್ರದಾಯದಂತೆ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಈ ಹಬ್ಬ ಆಚರಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಭಕ್ತಿಯಿಂದ ದುರ್ಗಮ್ಮ ದೇಗುಲದ ಬಳಿ ಪ್ರತಿಷ್ಠಾಪಿಸಿದ್ದ ಹೋಳಿಗೆಮ್ಮ ದೇವಿಗೆ ಹೋಳಿಗೆ ಎಡೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಜೆ ಮೆರವಣಿಗೆ ಮೂಲಕ ದೇವಿಯನ್ನು ಕೊಂಡೊಯ್ದು ಊರಿನ ಗಡಿ ದಾಟಿಸಿ ಬರಲಾಯಿತು. ಹೀಗೆ ಮಾಡುವುದರಿಂದ ರೋಗ ರುಜನಗಳು ದೂರವಾಗಿ ಸಮೃದ್ಧ ಮಳೆ ಬೆಳೆ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.