ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ಭರಮಸಾಗರ: ಇತ್ತೀಚೆಗೆ ಹೆಗ್ಗೆರೆ ಗ್ರಾಮದಲ್ಲಿ ಸಿಡಿಲು ಬಡಿದು ಮೃತರಾದ ಮಹಿಳೆಯ ಕುಟುಂಬದ ಮುಖ್ಯಸ್ಥ ಭೀಮೇಶಪ್ಪ ಅವರಿಗೆ, ಭಾನುವಾರ ಶಾಸಕ ಎಂ.ಚಂದ್ರಪ್ಪ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.

ಹೆಗ್ಗೆರೆ ಗ್ರಾಮದಲ್ಲಿ ಏ.29ರಂದು ಮನೆಯ ಅಂಗಳದಲ್ಲಿದ್ದ ಸೌದೆ ತರಲು ಹೊದ ಶಾರದಮ್ಮ ಸಿಡಿಲಿಗೆ ಬಲಿಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಕಂದಾಯ ಇಲಾಖೆ ಅಧಿಕಾರಿಗಳು, ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಚೆಕ್ ಬಿಡುಗಡೆಯಾಗಿದ್ದು, ಶಾಸಕರು ಚೆಕ್ ವಿತರಿಸಿದರು. ತಹಸೀಲ್ದಾರ್ ಕಾಂತರಾಜ್, ಸಾಮಿಲ್ ಶಿವಣ್ಣ ಮೋಹನ್, ಗುಡದೇಶಪ್ಪ, ಸುನಿಲ್ ಇತರರಿದ್ದರು.

Leave a Reply

Your email address will not be published. Required fields are marked *