More

  ಮತದಾರರ ಮಿಂಚಿನ ನೋಂದಣಿಗೆ ಚಾಲನೆ

  ಭರಮಸಾಗರ: ಗ್ರಾಮದಲ್ಲಿ ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಮತದಾರರ ಮಿಂಚಿನ ನೋಂದಣಿ ಜಾಗೃತಿ ಜಾಥಾ ನಡೆಯಿತು.

  18 ವರ್ಷ ತುಂಬಿದವರು ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಿಕೊಂಡು ಮತದಾನದ ಹಕ್ಕು ಪಡೆದುಕೊಳ್ಳಬೇಕೆಂದು ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.

  ಜಾಥಾಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಡಾ.ಆರ್. ಮಹೇಶ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಅರ್ಹ ಯುವಕ, ಯುವತಿಯರು ಹೆಸರು ನೋಂದಾಯಿಸಿ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

  ನಾಡಕಚೇರಿ ಶಶಿಧರಯ್ಯ ಮಾತನಾಡಿ, ಜಿಲ್ಲಾದ್ಯಂತ ಎಲ್ಲ ಪ್ರೌಢಶಾಲೆ, ಕಾಲೇಜುಗಳಲ್ಲಿ ಜ.8 ರವರೆಗೆ ಮತದಾರರ ಮಿಂಚಿನ ನೋಂದಣಿ ನಡೆಯಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಂಪೂರ್ಣ ಮಾಹಿತಿ ಪಡೆದು ಅರ್ಹರು ಮತದಾರರ ಪಟ್ಟಿ ಸೇರುವಂತೆ ನೋಡಿಕೊಳ್ಳಬೇಕು ಎಂದರು.

  ಉಪನ್ಯಾಸಕರಾದ ಡಾ. ಪ್ರವೀಣ್, ಸೌಮ್ಯ, ಮೇಘನಾ, ಚಿದಾನಂದಪ್ಪ, ಸಂಗಮೇಶ್ವರ, ಲೋಕೇಶ್ ನಾಯ್ಕ, ಪುನೀತ್‌ಕುಮಾರ್, ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts