ಭಾರದ್ವಾಜ ಕೆ. ಆನಂದ ತೀರ್ಥ ಜತೆ ಸಂವಾದ

blank

ಮಡಿಕೇರಿ:

ಕಾದಂಬರಿಕಾರ ಕುಶಾಲನಗರ ತಾಲೂಕು ಕಣಿವೆಯ ಭಾರದ್ವಾಜ್ ಕೆ. ಆನಂದತೀರ್ಥ ಅವರ ಜತೆ ‘ಕನ್ನಡ ಓದುಗರ ಒಕ್ಕೂಟ 2012 ಮೈಸೂರು’ ಸಂಸ್ಥೆ ವತಿಯಿಂದ ಮಂಗಳವಾರ ಸಂಜೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಿಂಗಳಿಗೊAದು ಕನ್ನಡ ಪುಸ್ತಕ ಓದಿ ಆ ಕುರಿತು 2012ರಿಂದ ಚರ್ಚೆ, ಸಂವಾದ ನಡೆಸುತ್ತಾ ಬರುತ್ತಿರುವ ಮೈಸೂರಿನ ಮಹಿಳಾ ಸಾಹಿತ್ಯ ಓದುಗರ ಒಕ್ಕೂಟ ಈ ಬಾರಿ ಮೈಸೂರಿನ ಕಾಳಿದಾಸ ರಸ್ತೆಯ ‘ಅನ್ ಬಾಂಡ್ ಎಸ್ಕೆಪ್ ರೂಂ’ ಸಭಾಂಗಣದಲ್ಲಿ ಭಾರದ್ವಾಜ ಆನಂದ ತೀರ್ಥ ಅವರ ‘ವೀರಲೋಕ’ ಪ್ರಕಾಶನದಿಂದ ಮರುಮುದ್ರಣ ಕಂಡಿರುವ ‘ಕ್ರಮಣ’ ಕಾದಂಬರಿ ಕುರಿತು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಸಂದರ್ಭ ಕಾದಂಬರಿ ಕುರಿತು ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡರಲ್ಲದೆ ಕಾದಂಬರಿಯ ರಚನೆ ಕುರಿತು ಲೇಖಕರೊಂದಿಗೆ ಚರ್ಚಿಸಿ, ಮಾತುಕತೆ ನಡೆಸಿದರು.

ಕಾದಂಬರಿ ರಚನೆಯ ಕ್ರಮದ ಕುರಿತು ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಾರದ್ವಾಜ್, ‘ಕಾದಂಬರಿಯ ವಿಷಯ ಸಹಜವಾಗಿ ಬರಹಗಾರನಿಗೆ ದಕ್ಕಿದ ಅನುಭವ ಆಗಿದ್ದಲ್ಲಿ ಅದು ಓದುಗರನ್ನು ಹೆಚ್ಚು ತಲುಪಲು ಸಾಧ್ಯ ಎಂದರಲ್ಲದೆ ತಮ್ಮ ಕಾದಂಬರಿ ರಚನೆಯ ಕ್ರಮದ ಕುರಿತು ಮಾತನಾಡಿ ಯಾವುದೇ ಪೂರ್ವಾಪರ ಹಾಗೂ ಮುಂದಾಲೋಚನೆಗಳ ಗೊಡವೆಗೆ ಹೋಗದೆ ಆ ಕ್ಷಣಕ್ಕೆ ತೋಚಿದ್ದನ್ನು ನೋಟ್ ಪ್ಯಾಡ್‌ನಲ್ಲಿ ಬರೆಯುತ್ತಾ ಹೋಗುವುದು, ಬರೆದು ಮುಗಿದ ನಂತರ ಅದನ್ನು ಯಾವುದೇ ತಿದ್ದುಪಡಿ ಮಾಡದೇ ಅಕ್ಷರ ದೋಷ ಇದ್ದಲ್ಲಿ ಸರಿಪಡಿಸಿ ಪ್ರಕಟಿಸುವುದು ನನ್ನ ಬರವಣಿಗೆಯ ಕ್ರಮ. ಒಬ್ಬ ಬರಹಗಾರನ ಪುಸ್ತಕವನ್ನು ಹಲವರು ತಿದ್ದುವ ಕ್ರಮದ ಕುರಿತು ವಿಷಾದ ವ್ಯಕ್ತಪಡಿಸಿದ ಅವರು ಹಾಗೆ ತಿದ್ದಿ ತೀಡಿ ಬಿಡುಗಡೆಯಾಗುವ ಪುಸ್ತಕಗಳು ಮೂಲ ಲೇಖಕನ ಪುಸ್ತಕವಾಗಿ ಉಳಿಯಲು ಸಾಧ್ಯ ಇಲ್ಲ. ತಮ್ಮ ತಿರುಗಾಟ, ಜೀವನದ ಅನುಭವ ಹಾಗೂ ಪತ್ರಿಕೋದ್ಯಮದ ಅನುಭವಗಳು ತಮ್ಮ ಪುಸ್ತಕಗಳ ಸರಕುಗಳು ಎಂದರು. ಕನ್ನಡ ಓದುಗರ ಒಕ್ಕೂಟದ ಅಧ್ಯಕ್ಷೆ ಶುಭ ಸುಜಯ್ ಅರಸ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಪ್ರಮುಖರು ಹಾಗೂ ಸದಸ್ಯರು ಸಂವಾದದಲ್ಲಿ ಭಾಗಿಯಾಗಿದ್ದರು.

ಕೆ.ಯು. ಉಮೇಶ್, ವೆಂಕಟ್ ನಾಯಕ್, ಕೆ.ಎಸ್. ಮಹೇಶ್ ಹಾಗೂ ರಂಜಿತ್ ಕವಲಪಾರ ಈ ಸಂದರ್ಭ ಹಾಜರಿದ್ದರು. ಲೇಖಕ ಭಾರದ್ವಾಜ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…