ಕಡೂರು: ಪಕ್ಷಗಳ ಬಲಾಬಲಕ್ಕಿಂತ ಸದಸ್ಯರ ವಿಶ್ವಾಸದ ಮತಗಳೇ ನಿರ್ಣಾಯಕ ಪಾತ್ರವಹಿಸುತ್ತದೆ ಎಂಬುದಕ್ಕೆ ಸೋಮವಾರ ಪುರಸಭೆ ಎರಡನೇ ಅವಧಿಯ ನಡೆದ ಕಡೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದ್ದು, ನೂತನ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಭಂಡಾರಿ ಶ್ರೀನಿವಾಸ್,ಉಪಾಧ್ಯಕ್ಷೆಯಾಗಿ ಮಂಜುಳಾ ಚಂದ್ರು ಆಯ್ಕೆಯಾಗಿದ್ದಾರೆ.
ಒಟ್ಟು 23 ಸದಸ್ಯ ಬಲದ ಕಡೂರು ಪುರಸಭೆಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಭಂಡಾರಿಶ್ರೀ ನಿವಾಸ್ ಮತ್ತು ತೋಟದಮನೆ ಮೋಹನ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಚಂದ್ರು ಮತ್ತು ಜ್ಯೋತಿ ಆನಂದ್ ಉಮೇದುವಾರಿಕೆ ಸಲ್ಲಿಸಿದ್ದರು.
ಪುರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ತೋಟದಮನೆ ಮೋಹನ್ ಕುಮಾರ್ ಮತ್ತು ಜ್ಯೋತಿ ಆನಂದ್ ತಲಾ 5 ಮತ ಪಡೆದು ಪರಾಭವಗೊಂಡರೆ, ಭಂಡಾರಿಶ್ರೀ ನಿವಾಸ್ ಮತ್ತು ಮಂಜುಳಾ ಚಂದ್ರು ತಲಾ15 ಮತ ಪಡೆದು ವಿಜೇತರಾದರು. ಕಾಂಗ್ರೆಸ್ ಸದಸ್ಯರಾದ ಸೈಯಾದ್ ಯಾಸೀನ್, ಸೈಯಾದ್ ಇಕ್ಬಾಲ್ ಹಾಗೂ ಈರಳ್ಳಿ ರಮೇಶ್ ಮತದಾನಕ್ಕೆ ಗೈರಾಗಿದ್ದರು.
ಪುರಸಭೆ ಚುನಾವಣೆ ವೇಳೆ ಬೆರಳಣಿಕೆ ಸದಸ್ಯರನ್ನು ಹೊರತು ಪಡಿಸಿ ಉಳಿದವರಿಗೆ ಪ್ರವಾಸ ಭಾಗ್ಯ ಕಲ್ಪಿಸಲಾಗಿತ್ತು. ಆಯಾ ಪಕ್ಷದ ಮುಖಂಡರು ಸದಸ್ಯರ ಮೇಲೆ ಹಿಡಿತ ಸಾಧಿಸಿದ್ದರು. ಆದರೆ ಮೈತ್ರಿ ಧರ್ಮಕ್ಕೆ ಕಟ್ಟು ಬಿದ್ದ ಸದಸ್ಯರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಭಂಡಾರಿ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆ ಯಾಗಿ ಮಂಜುಳಾ ಚಂದ್ರು ಅವಕಾಶ ಕಲ್ಪಿಸಿಸಲಾಗಿದೆ.
ಪುರಸಭೆ ಸದಸ್ಯರಾದ ಚಿನ್ನರಾಜು, ಗೋವಿಂದು, ಜಿ.ಸೋಮಯ್ಯ, ಕಮಲಾ ವೆಂಕಟೇಶ್, ಯತಿರಾಜ್, ಮೋಹನ್, ಪದ್ಮಾಶಂಕರ್, ಲತಾರಾಜು, ಮರುಗುದ್ದಿ ಮನು, ಸುಧಾಉಮೇಶ್, ಸುಬ್ಬಣ್ಣ, ಪುಷ್ಪ ಲತಾ ಮಂಜುನಾಥ್, ಗೋವಿಂದು, ಮುಖಂಡರಾದ ಸಿಗೇಹಡ್ಲು ಹರೀಶ್, ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ಕೋಡಿಹಳ್ಳಿ ಮಹೇಶ್ವರಪ್ಪ, ಬಿದರೆ ಜಗದೀಶ್, ಕಂಸಾಗರ ರೇವಣ್ಣ, ತಿಪ್ಪೇಶ್, ಧರ್ಮರಾಜ್, ಯರದಕೆರೆಓಂಕಾರ್ ಮತ್ತಿತರಿದ್ದರು.
ಕಡೂರು ಪುರಸಭೆಗೆ ಭಂಡಾರಿ ಶ್ರೀನಿವಾಸ್ ಅಧ್ಯಕ್ಷ, ಮಂಜುಳಾ ಉಪಾಧ್ಯಕ್ಷೆ
You Might Also Like
ಮಳೆಗಾಲದಲ್ಲಿ ಬೆಚ್ಚಗಿರುವುದು ಹೇಗೆ? ಚಳಿಗೆ ಥರಥರ ನಡುಗುವ ಬದಲು ಹೀಗೆ ಮಾಡಿ…Rainy Weather Tips
ಬೆಂಗಳೂರು: ಕಳೆದ ಎರಡು ದಿನದಿಂದ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ನಗರದಲ್ಲಿ ಸುರಿದ ಧಾರಾಕಾರ ಮಳೆಗೆ…
ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain
ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…
ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!
ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…