ಭಾಲ್ಕಿ ಕಲುಷಿತ ವಾತಾವರಣ ತಿಳಿಗೊಳಿಸಬೇಕಾದರೆ ಪ್ರತಿಯೊಬ್ಬರೂ ಬಯಲು ಪ್ರದೇಶದಲ್ಲಿ ವಿವಿಧ ನಮೂನೆಯ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಕ್ಕಳ ತಜ್ಞ ಡಾ.ವಸಂತ ಪವಾರ್ ಹೇಳಿದರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಸಸಿ ನೆಟ್ಟು ಚಾಲನೆ ನೀಡಿದ ಅವರು, ಇತ್ತೀಚೆಗೆ ಅತಿ ವೇಗವಾಗಿ ಹರಡುವ ಮಾರಕ ಕಾಯಿಲೆಗಳಾದ ಡೆಂಘೆ, ಚಿಕೂನ್‌ಗುನ್ಯಾ ನಿಯಂತ್ರಿಸಲು ಮನೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಬೇಕು ಎಂದರು.
ಡಾ.ಅಮಿತ್ ಅಷ್ಟೂರೆ ಮಾತನಾಡಿ, ಅರಣ್ಯ ನಾಶದಿಂದ ಆಮ್ಲಜನಕ ಕೊರತೆ ಕಾಡುತ್ತಿದೆ. ಕಾರಣ ಮರ ಬೆಳೆಸಿ ಕಾಡು ಉಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ಅಧ್ಯಕ್ಷ ಡಾ.ವಿಲಾಸ ಕನಸೆ, ನ್ಯಾಯವಾದಿ ಉಮಾಕಾಂತ ವಾರದ ಮಾತನಾಡಿದರು.
ರೋಟರಿಯನ್‌ಗಳಾದ ಡಾ.ಯುವರಾಜ ಜಾಧವ್, ಡಾ.ಅನೀಲ ಸುಕಾಳೆ, ಸಂಜೀವಕುಮಾರ ಪಂಢರಗೆರೆ, ಡಾ.ಶ್ರೀರಂಗ ಬಿರಾದಾರ, ಡಾ.ಸಜ್ಜಲ ಬಳತೆ, ಡಾ.ಗುಂಡೇರಾವ ಶೆಡೋಳೆ, ದತ್ತುಕುಮಾರ ಮೆಹಕರೆ, ಪ್ರಾಚಾರ್ಯ ಅಶೋಕ ರಾಜೋಳೆ, ಚಂದ್ರಕಾಂತ ಥಮಕೆ ಇತರರಿದ್ದರು.