ಮರಾಠಿಗರ ಬೇಡಿಕೆಗೆ ಸದಾ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿ
ಮರಾಠಿ ಭಾಷಿಕರ ಬೇಡಿಕೆಗಳಿಗೆ ಸ್ಪಂದಿಸಲು ಸದಾ ಸಿದ್ಧ ಎಂದು ಕೆಪಿಸಿಸಿ ಕಾಯರ್ಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಮರಾಠಾ ಭವನ ಉದ್ಘಾಟಿಸಿ, ಮಾತನಾಡಿ, ಭಾಲ್ಕಿ ಕ್ಷೇತ್ರದ ಬಹುಸಂಖ್ಯಾತ ಮರಾಠಾ ಸಮಾಜದವರಿಗೆ ಸಮುದಾಯ ಭವನದ ಅವಶ್ಯಕತೆ ಇತ್ತು. ಇದನ್ನು ಮನಗಂಡು ಕೆಲವೇ ದಿನಗಳಲ್ಲಿ ಭವನ ನಿರ್ಮಿಸಿಕೊಡಲಾಗಿದೆ. ಎಲ್ಲ ಸಮುದಾಯದವರಿಗೂ ಒಂದೊಂದು ಭವನ ನಿಮರ್ಿಸಲಾಗಿದೆ. ಮರಾಠಿಗರಿಗಾಗಿ ಒಟ್ಟಿಗೆ ಸೇರಲು ಸ್ಥಳದ ಕೊರತೆ ಇತ್ತು. ಆದ್ದರಿಂದ ಅವರ ಆಶೆಗೆ ಸ್ಪಂದಿಸಿ, ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸಮುದಾಯ ಭವನದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಶಿವಶರಣಪ್ಪ ಛತ್ರೆ ಮಾತನಾಡಿ, ಶಾಸಕ ಈಶ್ವರ ಖಂಡ್ರಯವರು ತಮ್ಮ ಅನುದಾನದಲ್ಲಿ ಪ್ರತಿಯೊಂದು ಸಮಾಜಕ್ಕಾಗಿ ಸಮುದಾಯ ಭವನ, ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿಸಿ, ದೇವಾಲಯಗಳ ಅಭಿವೃದ್ಧಿ ಮಾಡಿದ್ದಾರೆ ಎಂದರು.

ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್, ತಾಪಂ ಉಪಾಧ್ಯಕ್ಷ ಮಾರುತಿರಾವ ಮಗರ, ಕಾಂಗ್ರೆಸ್ ಕಮಿಟಿ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್, ಸತೀಶ ಸೂರ್ಯವಂಶಿ, ಶಿವಾಜಿರಾವ ಇತರರಿದ್ದರು.