Friday, 16th November 2018  

Vijayavani

Breaking News

ನೆನಪಿನ ಶಕ್ತಿಗೆ ಸವಾಲು ದವನೀ

Saturday, 30.06.2018, 3:02 AM       No Comments

ರೆವು ಮನುಷ್ಯನಿಗೆ ಬರದೆ ಮರಕ್ಕೆ ಬಂದೀತೆ ಎಂಬ ಮಾತಿದೆ. ನಿತ್ಯಜೀವನದಲ್ಲಿ ಹಲವಾರು ಸಂಗತಿಗಳನ್ನು ಮರೆತು ಹೋಗುತ್ತೇವೆ. ಅಷ್ಟೇ ಯಾಕೆ, ಪರೀಕ್ಷೆಗಾಗಿ ಹಗಲು-ರಾತ್ರಿ ನಿದ್ದೆಗೆಟ್ಟು ಬಾಯಿಪಾಠ ಮಾಡಿದರೂ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಿಗೆಲ್ಲ ಉತ್ತರಿಸಲಾಗದೆ ಸಪ್ಪೆ ಮೋರೆ ಹಾಕಿಕೊಂಡು ಹಿಂದಿರುಗುವು ದುಂಟು. ಆಶ್ಚರ್ಯ ಎಂದರೆ ಇಲ್ಲೊಬ್ಬಳು ನಾಲ್ಕು ವರ್ಷದ ಹುಡುಗಿ ನೆನಪಿನ ಶಕ್ತಿಗೆ ಸವಾಲು ಹಾಕಿದ್ದಾಳೆ. ಅಗಾಧ ಪ್ರಮಾಣದ ಸ್ಮರಣ ಶಕ್ತಿ ಹೊಂದಿರುವ ಆ ಪೋರಿ ಹಾಸನದ ಅರಕಲಗೂಡಿನ ನವೀನ್​ಕುಮಾರ್ ಮತ್ತು ರೇಖಾ ದಂಪತಿಯ ಪುತ್ರಿ ದವನೀ. ಚಿತ್ರಕಲೆ, ಯೋಗ, ನೃತ್ಯ, ಸಂಗೀತ, ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ದವನೀ ಒಂದೂವರೆ ವರ್ಷ ಇದ್ದಾಗಿನಿಂದಲೂ ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು. ಮಹಾಭಾರತದ ಧೃತರಾಷ್ಟ್ರನ 101 ಮಕ್ಕಳ ಹೆಸರನ್ನು ತಪ್ಪದೆ ಹೇಳಬಲ್ಲಳು ಈ ಪುಟಾಣಿ. ಈಗ ಯಾವ ಸಂವತ್ಸರ ಎಂದು ಕೇಳಿದರೆ ಕೆಲವರು ತಡವರಿಸುತ್ತಾರೆ. ಆದರೆ ದವನೀ 60 ಸಂವತ್ಸರ

ಗಳ ಹೆಸರು ಹೇಳುತ್ತಾಳೆ. ಪಕ್ಷ, ಕಾಲ, ಆಯನ, ಜ್ಞಾನಪೀಠ ಪ್ರಶಸ್ತಿ, ಮಾಸಗಳು, ರಾಶಿಗಳನ್ನು ಪಟಪಟನೆ ಒಪ್ಪಿಸುತ್ತಾಳೆ. ನಕ್ಷತ್ರಗಳು, ಯೋಗ, ತಿಥಿ, ಜ್ಯೋತಿರ್ಲಿಂಗ ಗಳು, ಅಷ್ಟಲಕ್ಷಿ್ಮೕಯರು, ಗ್ರಹಗಳು, ಸಪ್ತ ಋಷಿಗಳು, ಸಪ್ತ ಪರ್ವತಗಳು, ಋತುಗಳು, ಪವಿತ್ರ ನದಿಗಳು ಹೀಗೆ ಹಲವಾರು ಸಂಗತಿಗಳು ದವನೀಯ ನಾಲಿಗೆಯ ತುದಿಯಲ್ಲೇ ಇವೆ. ಅದಲ್ಲದೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಸುಮಾರು 250 ಪ್ರಶ್ನೆಗಳಿಗೆ ಈ ಹುಡುಗಿ ಉತ್ತರಿಸುತ್ತಾಳೆ. ರಾತ್ರಿ 2 ಗಂಟೆವರೆಗೂ ಕುಳಿತು ಸಾಮಾನ್ಯ ಜ್ಞಾನ ವೃದ್ಧಿ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾಳೆ ಈ ಪೋರಿ. ದವನೀಗೆ ಅಮ್ಮನೇ ಗುರು. ಪುಸ್ತಕಗಳನ್ನು ತಂದು ಹೇಳಿಕೊಡುವಂತೆ ಅಮ್ಮನಿಗೆ ಹೇಳುತ್ತಾಳೆ ಈ ಪುಟಾಣಿ. ಈಗಾಗಲೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ವಯಸ್ಸಿಗೆ ಮೀರಿದ ಗ್ರಹಿಸುವ ಶಕ್ತಿ ದವನೀಯದ್ದು.

Leave a Reply

Your email address will not be published. Required fields are marked *

Back To Top