ಭಕ್ತಿ-ಶ್ರದ್ಧೆ ಕೇಂದ್ರ ನಿಲೋಗಿಪುರ

blank

ಅಳವಂಡಿ: ನಾಗರಿಕರಿಗೆ ಶರಣರ ಕಾಯಕತ್ವ, ಧಾರ್ಮಿಕ ನಾಯಕರ ಬಗ್ಗೆ ತಿಳಿಸುವುದು ಅಗತ್ಯ ಎಂದು ಹೂವಿನಹಡಗಲಿ ಶ್ರೀ ಹಿರೇಶಾಂತವೀರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಬಿ.ಸಿ.ರೋಡ್ ಹಿಂದು ಧಾರ್ಮಿಕ ಸೇವಾ ಸಮಿತಿ

ಸಮೀಪದ ನಿಲೋಗಿಪುರದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ, ಪ್ರವಚನ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಭಕ್ತಿ, ಶ್ರದ್ಧೆ ಹಾಗೂ ವಿಶ್ವಾಸದ ಕೇಂದ್ರ ನಿಲೋಗಿಪುರ ಗ್ರಾಮ. ಇಲ್ಲಿನ ಧಾರ್ಮಿಕ ಕಾರ್ಯಗಳು ಜನ ಮನಪರಿವರ್ತನೆಗೆ ಸಾಕ್ಷಿಯಾಗಿವೆ. ಪುರಾಣಗಳು ಬದುಕುವ ಮಾರ್ಗ ತಿಳಿಸುತ್ತವೆ. ಸಾಮೂಹಿಕ ವಿವಾಹದಿಂದ ಜನರ ಆರ್ಥಿಕ ಹೊರೆ ತಗ್ಗುತ್ತದೆ. ಹೀಗಾಗಿ ಇಂತಹ ಕಾರ್ಯಕ್ರಮದಲ್ಲಿ ಮದುವೆ ಮಾಡಿಕೊಳ್ಳಿ ಎಂದರು.

ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರು ದುಡಿದು ಉಣ್ಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪರಿಶ್ರಮದ ಬದುಕು ನಿಮ್ಮನ್ನು ಸಮಾಜ ಗುರುತಿಸುವಂತೆ ಮಾಡುತ್ತದೆ. ಸಾಧನೆ ಗುರಿ ಮುಟ್ಟಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೆ, ಮನುಷ್ಯ ಶಾಂತಿ, ನೆಮ್ಮದಿ, ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ.

ಇವುಗಳು ಪುರಾಣ, ಪ್ರವಚನ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಬರುತ್ತವೆ. ಮನುಷ್ಯ ಸಂಘಜೀವಿಯಾಗಿ ಬಾಳಿದರೆ ನೆಮ್ಮದಿ ಲಭಿಸಲಿದೆ ಎಂದರು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಕಳಶ, ಕುಂಭ ಹಾಗೂ ವಾದ್ಯ ಮೇಳದೊಂದಿಗೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು.

ಪ್ರಮುಖರಾದ ಈಶಪ್ಪ ಮಾದಿನೂರ, ಯಲ್ಲಪ್ಪ ಮುಕ್ಕಣ್ಣವರ, ಭೀಮೇಶಪ್ಪ ಹವಳಣ್ಣವರ, ಈರಪ್ಪ, ರವಿ, ಮಹೇಶರಡ್ಡಿ, ಮುದಿಯಪ್ಪ, ಆನಂದರಡ್ಡಿ, ಅಂದಪ್ಪ, ರವಿ, ಬಸವರಾಜ, ಚನ್ನಪ್ಪ, ಸಿದ್ದಪ್ಪ, ಪರಸಪ್ಪ, ಹನುಮೇಶ, ಶಿವನಗೌಡ, ರಾಮಣ್ಣ, ಹನುಮಪ್ಪ, ಶಿವಪ್ಪ, ಈರಣ್ಣ, ಶರಣಪ್ಪ, ಹೇಮಂತ, ಅಶೋಕ, ಶ್ರೀಕಾಂತ, ಕೃಷ್ಣಪ್ಪ, ಲಚ್ಚಪ್ಪ, ಲಕ್ಷ್ಮಣ, ಶಿವು, ಪ್ರಕಾಶ ಮಹೇಶ ಇತರರಿದ್ದರು.

Share This Article

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…

ಮದ್ವೆಯಾದ ನಂತ್ರ ಮಹಿಳೆಯರು… ಇದುವರೆಗೂ ನಾವಂದುಕೊಂಡಿದ್ದು ತಪ್ಪು, ಹೊಸ ಅಧ್ಯಯನದಲ್ಲಿ ಅಚ್ಚರಿ ಸಂಗತಿ! Marriage

Marriage : ಸಾಮಾನ್ಯವಾಗಿ ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅವರು ಎಷ್ಟೇ…

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…