ಕವಿತಾಳ: ಮಠಗಳು ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಮುಖಾಂತರ ಜನಪರ ಕೆಲಸಗಳನ್ನು ಮಾಡುತ್ತಿವೆ ಎಂದು ಸಿರವಾರ ಸರ್ಕಾರಿ ನೌಕರರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಅಯ್ಯನಗೌಡ ಏರಡ್ಡಿ ಹೇಳಿದರು.
ಇದನ್ನು ಓದಿ: ಮೋಕ್ಷ ಪ್ರಾಪ್ತಿಗೆ ಭಕ್ತಿ ಮಾರ್ಗವೇ ಪ್ರಧಾನ; ಕೇಂದ್ರ ಸಚಿವ ಶ್ರೀಪಾದ ನಾಯಕ
ಸ್ಥಳೀಯ ಕಲ್ಮಠದಲ್ಲಿ 17ನೇ ಜ್ಞಾನ ವಾಹಿನಿ ಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಕವಿತಾಳ ಕಲ್ಮಠವು ಭಕ್ತರಲ್ಲಿ ಭಕ್ತಿಯನ್ನು ಉಂಟುಮಾಡುವ ಸಲುವಾಗಿ ಜ್ಞಾನ ವಾಹಿನಿ ಕಾರ್ಯಕ್ರಮವನ್ನು ನಡೆಸುವ ಮುಖಾಂತರ ಸುಜ್ಞಾನ ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು. ರುದ್ರಯ್ಯ ಕಣಬಿ ಉಪನ್ಯಾಸ ನೀಡಿದರು.
ಪ್ರಮುಖರಾದ ದಾಸೋಹ ದಾನಿ ಗಿರಿಜಮ್ಮ, ಬಸವರಾಜ, ಸಂಗಪ್ಪ ಗೊರೆಬಾಳ, ಸುಭಾಸ್ ಚಕೋಟಿ, ಮಹೇಶ ನಂದಿಕೋಲಮಠ, ಮಲ್ಲಿಕಾರ್ಜುನ ಬಳೆ, ವೆಂಕಟೇಶ ಅಮೀನಗಡ, ಬಸವರಾಜ ಗಡ್ಲ, ಮರೇಶ ದಿನ್ನಿ, ಶರಣಬಸವ ಹಣಗಿ ಇತರರಿದ್ದರು.