ಆನೇಕಲ್: ಚಂದಾಪುರ ಕೆಎಂಎಸ್ ಕಲ್ಯಾಣ ಮಂಟಪದಲ್ಲಿ ಜ.23, 24ರಂದು ಹೆಬ್ಬಗೋಡಿಯ ಸರ್ವೋದಯ ಯೋಗ ಫೌಂಡೇಶನ್ ಕೇಂದ್ರದಿಂದ ಭಕ್ತಿ ಕಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸರ್ವೋದಯ ಯೋಗ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಾಮ್ ಗುರೂಜಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಕಲಾವಿದರಿಗೆ ಅವಕಾಶ ಸಿಗುವ ನಿಟ್ಟಿನಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸರ್ಕಾರ ಭಜನಾ ಕಲಾವಿದರಿಗೆ ಗೌರವಧನ ನೀಡಿ ಪ್ರೋತ್ಸಾಹಿಸಿದಾಗ ಅವರ ಬದುಕುಗಳು ಹಸನಾಗುತ್ತವೆ, ಇದರ ಕಡೆ ಸಚಿವರು ಗಮನ ಹರಿಸಬೇಕು. ಭಜನೆಯಿಂದ ಶಾಂತಿ ಸಹನೆ ಹೆಚ್ಚಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ಯೋಗ ಗುರು ಶಿವಶಂಕರ್ ರೆಡ್ಡಿ ಮಾತನಾಡಿ, ಭಜನೆ ಎಂದರೆ ಕೊನೆಯವರೆಗೂ ದೇವರನ್ನು ನೆನೆಯುವುದು ಎಂದರ್ಥ ಭಕ್ತಿ ಮಾರ್ಗದಿಂದ ಇಷ್ಟ ಸಿದ್ದಾರ್ಥಗಳು ಲಭಿಸಿ ಮನುಷ್ಯ ಪಾವನಾಗುತ್ತಾನೆ. ಮನುಷ್ಯ ಇಂದು ನಾವ್ಯಾರು ಅಲ್ಲದ ಪ್ರಪಂಚದಲ್ಲಿ ವಾಸ ಮಾಡುತ್ತಿದ್ದಾನೆ ಎಂದರು. ಸರ್ವೋದಯ ಯೋಗ ಫೌಂಡೇಶನ್‌ನ ಗೌರವಾಧ್ಯಕ್ಷ ರಾಮಣ್ಣ ಸ್ವಾಮಿ ಮಾತನಾಡಿ, ಕಲಾ ಸಮ್ಮೇಳನಕ್ಕೆ ವಿವಿಧ ರಾಜ್ಯಗಳಿಂದ ಹಾಗೂ ನಮ್ಮ ರಾಜ್ಯದ ಅನೇಕ ಜಿಲ್ಲೆಗಳಿಂದ ಅನೇಕ ಕಲಾತಂಡಗಳು, ಬಜನಾ ತಂಡಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ತಾಲೂಕಿನ ಎಲ್ಲ ಕಲಾವಿದರು ಭಾಗವಹಿಸಿ ಇದರ ಆನಂದ ಕಣ್ತುಂಬಿಕೊಳ್ಳಬೇಕು ಎಂದರು. ಕೋಲಾಟದ ಗುರುಗಳಾದ ವೆಂಕಟಸ್ವಾಮಿ ರೆಡ್ಡಿ, ಯೋಗ ಗುರುಗಳಾದ ಮಂಜುಳಾ ಟ್ರಸ್ಟ್‌ನ ಖಜಾಂಚಿ ಪ್ರದೀಪ್ ಇದ್ದರು.
23,24 ರಂದು ಭಕ್ತಿ ಕಲಾ ಸಮ್ಮೇಳನ

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…