ಚಿಕ್ಕೋಡಿ: ಮನಸ್ಸಿನ ಭಾವನೆಗಳನ್ನು ಪರಮಾತ್ಮನ ಭಕ್ತಿಕಡೆಗೆ ಕರೆದುಕೊಂಡು ಹೋದಾಗ ಮಾತ್ರ ಬದುಕು ಹಸನಾಗುತ್ತದೆ ಎಂದು ಸದ್ಗುರು ಬಸವಪ್ರಭು ಮಹಾರಾಜರು ಹೇಳಿದರು.
ಮಜಲಟ್ಟಿಯ ಕಲೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿವಮಹಾ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಮತೇನಟ್ಟಿಯ ಹನುಮಂತ ಶಾಸ್ತ್ರಿ ಮಾತನಾಡಿ, ಪುರಾಣ ಕೇಳುವುದರಿಂದ ಜೀವನ ಮುಕ್ತಿಯಡೆಗೆ ಸಾಗುತ್ತದೆ ಎಂದರು. ಗುರುಭಕ್ತಿ ಮಂದಿರ ಸೇವೆ ಮಾಡಿದ ಮಾತೆಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತು