ಕಾರ್ಕಳ: ಸ್ವಸಹಾಯ ಗುಂಪಿನ ಸದಸ್ಯರ ಒಗ್ಗಟ್ಟಿನಿಂದ ಕ್ಷೇತ್ರಕ್ಕೆ ಗೌರವ ಹೆಚ್ಚಾಗಿದೆ. ಪಾರದರ್ಶಕತೆ ಸಹಭಾಗಿತ್ವ ಹೊಂದಾಣಿಕೆಯಿಂದ ಯೋಜನೆ ಬೆಳವಣಿಗೆಗೆ ಸಹಕರಿಸುತ್ತಿರುವ ಶ್ರೀವಾಣಿ ಸ್ವಸಹಾಯ ಸಂಘದಿಂದ ಗ್ರಾಮಾಭಿವೃದ್ಧಿ ಯೋಜನೆಗೆ ನೀಡುವ ಕೊಡುಗೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರ್ಕಳ ತಾಲೂಕು ಯೋಜನಾಧಿಕಾರಿ ಹೇಮಲತಾ ಹೇಳಿದರು.
ಯುವಕ ಮಂಡಲ ಸಾಣೂರು ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರ್ಕಳ ತಾಲೂಕು, ಸಾಣೂರು ವಲಯದ ಶ್ರೀವಾಣಿ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಭಜನೆ ಪೂಜೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಣೂರು ವಲಯ ಮೇಲ್ವಿಚಾರಕ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಣೂರು ಬಿ ಒಕ್ಕೂಟದ ಅರುಣಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ಸಾಣೂರು ಅಧ್ಯಕ್ಷ ಪ್ರಸಾದ್ ಶೆಟ್ಟಿ ಶುಭಹಾರೈಸಿದರು. ಸಾಣೂರು ಎ ಒಕ್ಕೂಟದ ಸೇವಾಪ್ರತಿನಿಧಿ ಪುಷ್ಪಲತಾ ರಾವ್ ಸಾಣೂರು, ಒಕ್ಕೂಟದ ಕಾರ್ಯದರ್ಶಿ ಶಾಲಿನಿ ದೇವಾಡಿಗ ಉಪಸ್ಥಿತರಿದ್ದರು.
ಶ್ರೀವಾಣಿ ಸ್ವಸಹಾಯ ಸಂಘದ ಯೋಗೀಶ್ ಸಾಲ್ಯಾನ್ ಪ್ರಾರ್ಥಿಸಿ, ಸಾಣೂರು ಎ ಒಕ್ಕೂಟ ಮಾಜಿ ಅಧ್ಯಕ್ಷ ಚಂದ್ರಹಾಸ ಪೂಜಾರಿ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಗಣೇಶ್ ಶೆಟ್ಟಿ ವರದಿ ಮಂಡಿಸಿ, ಸದಸ್ಯ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಂಯೋಜಕ ಜಗದೀಶ್ ಕುಮಾರ್ ವಂದಿಸಿದರು. ಅನಿಲ್ ಕೋಟ್ಯಾನ್, ರಮೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ, ಸ್ವಸ್ತಿಕ್ ಭಂಡಾರಿ ಸಹಕರಿಸಿದರು.