ಭಾಗವತ ಪ್ರವಚನ 24ರಿಂದ

0 Min Read

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಭಾಗವತ ಮಂಡಳಿ ವತಿಯಿಂದ ಮನೆ- ಮನಗಳಲ್ಲಿ ಶ್ರೀಮದ್ ಭಾಗವತ ಪ್ರವಚನ ಸಪ್ತಾಹದ ಎರಡನೇ ಸರಣಿಯು ಜೂನ್ 24ರಿಂದ ಆರಂಭವಾಗಲಿದೆ.

ಈ ಸರಣಿಯ ಪ್ರಥಮ ಸ್ಕಂದದ ಪ್ರವಚನವು ಜೂನ್ 24ರಿಂದ 30ರ ವರೆಗೆ ನಗರದ ಕೇಶ್ವಾಪುರ ಬಡಾವಣೆಯ ಹೇಮಂತ ನಗರದ ರಾಘವೇಂದ್ರ ಗುಡಿ ಅವರ ನಿವಾಸದಲ್ಲಿ (ಮನೆ. ನಂ. 93) ಜರುಗಲಿದೆ.

ಪ್ರತಿ ದಿನ ಸಂಜೆ 6.30ಕ್ಕೆ ಹುಬ್ಬಳ್ಳಿಯ ಪಂ. ಪಾಂಡುರಂಗಾಚಾರ್ಯ ಹುನಗುಂದ ಅವರು ಪ್ರವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

See also  ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆಕಾಂಗ್ರೆಸ್ ದೂರು
Share This Article