22.8 C
Bengaluru
Saturday, January 18, 2020

ಚೈತನ್ಯ ತುಂಬುವ ಭಗವದ್ಗೀತೆ; ಡಿ.8ರಂದು ಸಾಮೂಹಿಕ ಪಠಣ

Latest News

ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ನವದೆಹಲಿಯಲ್ಲಿ ಜನವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ವೇದಾ ಆಯ್ಕೆ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದು, ಜನವರಿ 20...

ಶತಮಾನಗಳಿಂದ ದಾರ್ಶನಿಕ ಪ್ರಪಂಚದ ಮುಕುಟಮಣಿಯಂತೆ ಶೋಭಿಸುತ್ತಿರುವ ಮಹಾನ್ ಕೃತಿ ಭಗವದ್ಗೀತೆ. ಸಮಾಜದ ನಾನಾ ಕ್ಷೇತ್ರಗಳ ಸಾಧಕರು ಭಗವದ್ಗೀತೆಯ ಅನುಸಂಧಾನದಲ್ಲಿ ಚೈತನ್ಯವನ್ನು ಪಡೆದುಕೊಂಡಿದ್ದಾರೆ. ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ನೇತೃತ್ವದಲ್ಲಿ ಇದೇ ಡಿಸೆಂಬರ್ ಎಂಟರಂದು ಬೆಳಗ್ಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾಮೂಹಿಕ ಭಗವದ್ಗೀತಾ ಪಾರಾಯಣ ಜರುಗಲಿದೆ. ತನ್ನಿಮಿತ್ತ ಬರಹವಿದು. 

‘ಭಾರತ’ವು ಇಡೀ ಜಗತ್ತು ಎನ್ನುವ ದೊಡ್ಡ ಗ್ರಾಮದ ಬೃಹತ್ ದೇವಾಲಯವಿದ್ದಂತೆ. ಧೀಮಂತರ, ಚಿಂತನಶೀಲರ, ಆಧ್ಯಾತ್ಮಜೀವಿಗಳ ಸ್ವರ್ಗ ಭಾರತ. ಎಲ್ಲ ಸಾಧನೆಗಳ ಹಿಂದೆ ಒಂದು ಸಂಸ್ಕಾರ, ಒಂದು ಶ್ರೇಷ್ಠ ಪರಂಪರೆಯ ಪ್ರಭಾವ ಇದ್ದೇ ಇರುತ್ತದೆ. ಭಾರತ ಎಂದರೆ ಓಂಕಾರದ, ಗಾಯತ್ರಿಯ, ಮಹಾಭಾರತದ, ಭಗವದ್ಗೀತೆಯ, ದಿವ್ಯಪರಂಪರೆ. ಭಾರತೀಯರ ಬದುಕಿನ ಸತ್ವ ಸಹಸ್ರಾರು ವರ್ಷಗಳ ಕಾಲ ಇದ್ದದ್ದೇ ಪರಂಪರೆಯ ತತ್ತ ್ವಲ್ಲಿ. ಅವುಗಳನ್ನು ಆಧುನಿಕ ಮನಸ್ಸುಗಳು ಅರ್ಥಮಾಡಿಕೊಂಡು, ನವಭಾರತದ ಹೊಸದಿಗಂತಗಳನ್ನು ವಿಸ್ತರಿಸುವ ಪಾರಂಪರಿಕ ಜ್ಞಾನವನ್ನು ತೊಡಗಿಸಿಕೊಳ್ಳುವ, ಅದನ್ನು ವ್ಯಾಪಕವಾಗಿ ಪ್ರಸರಿಸುವ ಕಾರ್ಯ ಈಗ ಪ್ರಸ್ತುತ ಸಂದರ್ಭದಲ್ಲಿ ಆಗಬೇಕಿದೆ. ಸಂತರು, ಮಹಂತರು, ಶಾಸ್ತ್ರರು, ಜ್ಞಾನಿಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ.

ಒಂದು ರಾಷ್ಟ್ರದ, ಒಂದು ಜನಾಂಗದ, ಒಂದು ಸಂಸ್ಕೃತಿಯ, ಎತ್ತರಬಿತ್ತರಗಳು ಅರಿವಾಗುವುದೇ ಆ ರಾಷ್ಟ್ರದ-ಜನಾಂಗದ ಸಾಹಿತ್ಯದಿಂದ. ಸಂಸ್ಕೃತ ಸಾಹಿತ್ಯದ, ವೈದಿಕ ಸಾಹಿತ್ಯದ, ಉಪನಿಷತ್ತಿನ ಬರಹಗಳ ಮೂಲಕ ಪ್ರಾಚೀನ ಕಾಲದಲ್ಲೇ ಭಾರತ ಸಂಸ್ಕೃತಿ ಸೀಮೆಯ ದಿಗಂತಗಳತ್ತ ಕೈಚಾಚಿತ್ತು. ಭಗವದ್ಗೀತೆಯ ಪರಿಕಲ್ಪನೆ, ಭಾಷೆ, ಶೈಲಿ, ವಿಚಾರ, ಸಂವಹನ ಇವೆಲ್ಲ ಆ ಕಾಲಕ್ಕೇ ಭಾರತವು ಸಾಧಿಸಿದ್ದ ಆಧ್ಯಾತ್ಮಿಕ, ಸಾಹಿತ್ಯಿಕ, ವೈಚಾರಿಕ ಸಿದ್ಧಿಯ ಹೆಗ್ಗುರುತುಗಳು. ಮಹಾಭಾರತ ಹಾಗೂ ಅದರ ಭಾಗವಾದ ಭಗವದ್ಗೀತೆ ಸೂರ್ಯ-ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯುವ ಪವಿತ್ರ ಗ್ರಂಥಗಳು. ಭಾರತದ ವ್ಯಾಪ್ತಿಯೇ ಮಹಾಭಾರತವೂ ಆಗಿದೆ. ಮಹಾಭಾರತದ ಪಾತ್ರಗಳೇ ಅದನು ್ನ ಸಾರಿ ಹೇಳುತ್ತಿವೆ.

ಮಹಾಭಾರತಕ್ಕೆ ಶಂತನುಚಕ್ರವರ್ತಿಯು ಪರಮ ಶಾಂತನಾದ ಪರಬ್ರಹ್ಮನಂತೆ. ಶಂತನುವಿನ ಪತ್ನಿ ಗಂಗೆ, ನಿರಂತರ ಹರಿಯುವ ನೀರು. ಚೈತನ್ಯ ಪುಳಕ, ಪ್ರಕೃತಿ ಹಾಗೂ ಪಾವಿತ್ರ್ಯಳಿಗೆ ಇನ್ನೊಂದು ಹೆಸರೇ ಗಂಗೆ. ಶಂತನುವಿನ ಎರಡನೆಯ ಹೆಂಡತಿ ಸತ್ಯವತಿ. ಸತ್ಯವು ಪರಮ ಸತ್ಯದ ಗೆಳತಿ. ಗಂಗೆಯ ಮಗ ಭೀಷ್ಮ. ನೀರಿನ ಪಾವಿತ್ರ್ಯ ಹಾಗೂ ಪ್ರಚಂಡ ರಭಸದಷ್ಟೇ ಅವನ ಪ್ರತಿಜ್ಞೆಯೂ ಕೂಡ.

ಗಂಗೆಯಂತೆಯೇ ದೇವಲೋಕದಿಂದ ಭೂಮಿಗೆ ಬಂದವರೇ ವೇದವ್ಯಾಸರು. ಸಕಲ ಜ್ಞಾನ ವಿವೇಕಗಳ, ದೂರದೃಷ್ಟಿಯ ತೇಜಸ್ವಿ, ತಪಸ್ವಿ, ಮಹಾಭಾರತದ ಸೃಷ್ಟಿಕರ್ತ. ಹಾಗಾಗಿಯೇ ಪರಬ್ರಹ್ಮನಿದ್ದಂತೆ. ಪರಬ್ರಹ್ಮನದೇ ಇನ್ನೊಂದು ಅವತಾರವೇ ಎನ್ನುವುದು ಖಚಿತವಾದಂತೆ.

ಧೃತರಾಷ್ಟ್ರ ನಾದರೋ ಅಂಧಕ. ಹುಟ್ಟುಕುರುಡ. ಕುರುಡು ಮನಸ್ಸು ಹಾಗೂ ಕುರುಡು ಕಾಂಚಾಣದ ಅಧಿಪತಿ. ಪಾಂಡು ಮನಸ್ಸನ್ನು ನಿಯಂತ್ರಿಸಬಲ್ಲ ಬುದ್ಧಿ. ವ್ಯವಸಾಯಾತ್ಮಿಕಾ ಬುದ್ಧಿ ಗಾಂಧಾರಿ. ಹೊರಗಣ್ಣಿನ ಪತಿ ಕುರುಡನಾದರೂ, ಒಳಗಣ್ಣಿನ ಧರ್ಮದೇವತೆಯಾಗಿ ಎಂದಿಗೂ ಧರ್ಮಕ್ಕೇ ಜಯ ಎಂದು ಮಗನಿಗೆ ಆಶೀರ್ವಾದ ಮಾಡಿದ ಮಹಾತಾಯಿ. ಕುಂತಿ ಜವಾಬ್ದಾರಿ, ಕಷ್ಟ ಸಂಕಷ್ಟ ಕಣ್ಣೀರಿನ ತ್ಯಾಗಮೂರ್ತಿ. ದುರ್ಯೋಧನ ಹಾಗೂ ಒಂದುನೂರು ಕೌರವರು ಎಂದರೆ ನೂರಾರು ಬಗೆಯ ಪ್ರಲೋಭನೆಗಳು, ದುರಾಸೆಗಳು, ವಿಷಯಾಸಕ್ತಿಗಳು. ಧರ್ಮರಾಜ ಆಕಾಶತತ್ತ ್ವ ಭೀಮ ವಾಯುತತ್ತ ್ವ ಅರ್ಜುನ ತೇಜೋತತ್ತ ್ವ ನಕುಲ ಜಲತತ್ತ ್ವ ಸಹದೇವ ಭೂತತ್ತ ್ವ ದ್ರೌಪದಿಯಾದರೋ ಅಗ್ನಿಯಿಂದೆದ್ದು ಬಂದ ಮಹಾ ಸಾಧಕಿ.

ಭಗವದ್ಗೀತೆ ಮಹಾಭಾರತದ ಭೀಷ್ಮಪರ್ವದ ಒಂದು ಭಾಗ. ಕೃಷ್ಣಾರ್ಜುನರ ಸಂವಾದ. ಇಬ್ಬರ ನಡುವಿನ ಸಂವಾದವೊಂದು ಜಗತ್ತಿನ ಒಂದು ಸಹಸ್ರಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದವಾಗಿ ಶತಶತಮಾನಗಳ ಕಾಲ ಕೋಟಿ ಕೋಟಿ ಜನರಿಗೆ ನೆಮ್ಮದಿ, ಸಮಾಧಾನ, ಸಾಂತ್ವನ, ಧನ್ಯತೆ, ತಂದುಕೊಟ್ಟಿದ್ದರೆ ಅದೇ ಭಗವದ್ಗೀತೆ. ರಣರಂಗದ ನಡುವೆ ರಥ ಬಂದಾಗ ಅರ್ಜುನನಿಗೆ ಕೃಷ್ಣ ಶತ್ರುಸೈನ್ಯದವರನ್ನೆಲ್ಲ ಪರಿಚಯಿಸಿದ. ಎದುರು ಪಕ್ಷದಲ್ಲಿದ್ದವರೆಲ್ಲ ತನ್ನ ಬಂಧು-ಬಾಂಧವರು, ಆಪ್ತರು, ಆತ್ಮೀಯರು, ಗುರುಗಳು; ಬಂಧು ವ್ಯಾಮೋಹದಿಂದ ತಲ್ಲಣಿಸಿದ ಅರ್ಜುನನಿಗೆ ವಿಚಿತ್ರ ಕರುಣೆ ಉಕ್ಕಿತು. ಕಣ್ಣು ಮಂಜಾದವು. ಒಳಗೆ-ಹೊರಗೆ ವಿಷಾದ ಆವರಿಸಿಕೊಂಡಿತು. ಖಿನ್ನತೆ ತುಂಬಿದ ಅರ್ಜುನ ಧೈರ್ಯ-ಸ್ಥೆ ೖರ್ಯ ಕಳೆದುಕೊಂಡು ಮಾನಸಿಕವಾಗಿ ಕುಸಿದುಬಿದ್ದ. ಗಾಂಡೀವ ಜಾರಿತು. ಮೈ ಅದುರಿತು. ಮುಖ ಸೊರಗಿತು. ಯಾವ ಯಾವ ಭಾಗ್ಯಕ್ಕಾಗಿ ಬಂಧು ಜನರನ್ನು ನಾನು ಕೊಲ್ಲಬೇಕು, ಇದರಲ್ಲಿ ಇಹ, ಪರ ಏನೂ ಇಲ್ಲ. ನಿರಂತರ ಶೋಕ, ಅವಮಾನ, ಅಪವಾದ, ನೋವು, ನರಕ, ಈ ಚಿಂತನೆಗಳಿಂದ ಬೇಸತ್ತು, ಸತ್ತಂತಾದ ಅರ್ಜುನ ಪೂರ್ಣಪ್ರಮಾಣದಲ್ಲಿ ಸೋತುಹೋಗಿದ್ದ. ಎಲ್ಲ ಶಕ್ತಿ ಉಡುಗಿತ್ತು. ವಿವೇಕ ಜಾರಿತ್ತು.

ಆಗ ಕೃಷ್ಣ ಸಮಾಧಾನ, ಸಂಧಾನದ ಮಾತಾಡಲಿಲ್ಲ. ಬದಲಾಗಿ ಪ್ರಾರಂಭಿಸಿದ್ದೇ ಗೀತೆಯನ್ನು. ನೀನು ಮಾಡುತ್ತಿರುವ ಯೋಚನೆ ಹೇಡಿಗಳ ದಾರಿ. ಇಲ್ಲಿ ಕೀರ್ತಿ, ಸ್ವರ್ಗ, ಸಾಧನೆ, ಪುಣ್ಯಪುರುಷಾರ್ಥ ಏನೂ ಇಲ್ಲ. ಈಗ ನಾನು ಹೇಳುವುದನ್ನು ಕೇಳು ಎಂದು ಕೃಷ್ಣಪರಮಾತ್ಮ ಹೇಳಿದ್ದೇ ಭಗವದ್ಗೀತೆ. ಅರ್ಜುನನ ಚಿತ್ತಗ್ಲಾನಿಯನ್ನು, ಹೃದಯ ದೌರ್ಬಲ್ಯವನ್ನು ಸಂಪೂರ್ಣ ತೊಳೆದ ಗೀತೆಯ ಏಳುನೂರು ಶ್ಲೋಕಗಳು ಮುಗಿಯುವ ಹೊತ್ತಿಗೆ ಅರ್ಜುನನಿಗೆ ‘ನಷ್ಟೋ ಮೋಹಃ, ಸ್ಮೃಲಬ್ಧಃ’ ವ್ಯಾಮೋಹ ತೊಲಗಿತ್ತು. ಮನಸ್ಸು ಜಾಗೃತವಾಯಿತು. ಸೋತು ನೆಲಕ್ಕೆ ಕುಸಿದಿದ್ದವನು ತ್ರಿವಿಕ್ರಮನಂತೆ ಎದ್ದ. ಗೀತೆ ತುಂಬಿದ ಪೌರುಷ, ಚೈತನ್ಯ ಎಷ್ಟಿತ್ತೆಂದರೆ, ಅರ್ಜುನ ಒಮ್ಮೆ ಗಾಂಡೀವದ ಮೇಲೆ ಕೈಯಾಡಿಸಿದೊಡನೆಯೇ ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯ ನಡುಗಿಹೋಯಿತು. ಎಲ್ಲಿಂದ ತುಂಬಿ ಬಂದಿತು ಈ ಮಹಾಚೈತನ್ಯ, ಈ ಮಹಾ ಪ್ರೇರಣ, ಈ ಮಹಾದ್ಭುತ ಸಾಧನೆಯ ಪ್ರಚಂಡ ಶಕ್ತಿ ಪರ್ವತ. ಅದೇ ಭಗವದ್ಗೀತೆ. ಗೀತಾಂತರಂಗ.

ನೊಂದು, ಬೆಂದು, ಹೆದರಿ, ಬೆದರಿ, ಖಿನ್ನತೆಯಿಂದ ಕುಳಿತಿರುವ ಆಧುನಿಕ ಯುವ ಮನಸ್ಸುಗಳಿಗೆ ಮತ್ತೆ ಚೈತನ್ಯ ತುಂಬಬೇಕಾದರೆ ಈಗ ಮತ್ತೊಮ್ಮೆ ಆ ಗೀತೆಯ ಮಹಾಪ್ರಾಣ ಸಂದೇಶ ಬರಬೇಕಾಗಿದೆ ಜ್ಞಾನಿಗಳು ಅದನ್ನು ತರಬೇಕಾಗಿದೆ.

‘ಭಗವದ್ಗೀತೆ ಶ್ರೀಕೃಷ್ಣ ನಮಗೆ ನಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ನೀಡಿರುವ ನೇರ ಹಾಗೂ ಅತ್ಯಂತ ಉಪಯುಕ್ತ ಸಂದೇಶ. ನಮ್ಮ ಜೀವನದ ಎಲ್ಲ ದುಃಖ, ಸಂಶಯಗಳನ್ನು ನಿವಾರಿಸಿ ನೆಮ್ಮದಿ ಮನಶ್ಯಾಂತಿ ಹಾಗೂ ಆರೋಗ್ಯ ನೀಡಿ ಸಾಧನಾಮಾರ್ಗದಲ್ಲಿ ಕೈಹಿಡಿದು ನಡೆಸುವ ಜಗತ್ತಿನ ಅತಿ ಶ್ರೇಷ್ಠ ಗ್ರಂಥ ಭಗವದ್ಗೀತೆ. ಏಳುನೂರು ಶ್ಲೋಕಗಳನ್ನು ಕಂಠಸ್ಥ ಮಾಡಿ ಕೃತಾರ್ಥರಾಗಿ, ಜೀವನ ಸಾರ್ಥಕ ಮಾಡಿಕೊಳ್ಳಿ.’

| ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ವಿಶ್ವಮಟ್ಟದ ಗೀತಾಯಜ್ಞ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತಮ್ಮ ನೂರಾ ಐವತ್ತಕ್ಕೂ ಹೆಚ್ಚಿನ ವಿಶ್ವಧರ್ಮ ವಿಜಯಯಾತ್ರೆಗಳ ಮೂಲಕ ಜಗತ್ತಿನಾದ್ಯಂತ ಶಾಂತಿಸಂದೇಶ, ಮಾನವತಾವಾದ, ಪ್ರೀತಿ, ಸೌಹಾರ್ದತೆ, ಭಾರತೀಯ ಸನಾತನ ಧರ್ಮದ ವ್ಯಾಪಕ ಪ್ರಚಾರ ಮಾಡುವಲ್ಲಿ ಹೊಸ ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ, ಮಲೇಷ್ಯ, ಟ್ರಿನಿಡಾಡ್, ಜರ್ಮನಿ, ಕೆನಡಾ, ಆಸ್ಟ್ರೇಲಿಯಾ, ಮುಂತಾದ ದೇಶಗಳಲ್ಲಿ ಅವಧೂತದತ್ತ ಪೀಠಗಳನ್ನು ಸ್ಥಾಪಿಸಿ, ಬೃಹತ್ ಪ್ರಮಾಣದ ಧರ್ಮಪ್ರಸಾರ ಮಾಡುತ್ತಿದ್ದಾರೆ. 2015ರಲ್ಲಿ ಆಂಧ್ರದ ತೆನಾಲಿಯಲ್ಲಿ ಎರಡು ಲಕ್ಷ ಸಹಸ್ರ ಜನರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಾಡಿಸಿ ವಿಶ್ವದಾಖಲೆ ನಿರ್ವಿುಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ ಅಪೇರಾಹೌಸ್​ನಲ್ಲಿ ಬೃಹತ್ ನಾದಚಿಕಿತ್ಸಾ ಕಾರ್ಯಾಗಾರ ನಡೆಸಿ ಮತ್ತೊಂದು ವಿಶ್ವದಾಖಲೆ ನಿರ್ವಿುಸಿದ್ದಾರೆ. ಕ್ಯಾಲಿಫೋರ್ನಿಯದ ಮಲ್ಟಿಟಾಸ್​ನಲ್ಲಿ ವಿರಾಟ್ ಯೋಗಶಿಬಿರದ ವ್ಯವಸ್ಥೆ ಮಾಡಿ ಹೊಸ ದಾಖಲೆ ನಿರ್ವಿುಸಿದ್ದಾರೆ. ಒಂದೇ ವರ್ಷದಲ್ಲಿ ಮೂರು ಗಿನ್ನಿಸ್ ದಾಖಲೆಯ ಪ್ರಶಸ್ತಿಗಳನ್ನು ಸ್ವಾಮೀಜಿ ಪಡೆದಿದ್ದಾರೆ. ಈಗ ಸ್ವಾಮೀಜಿ ವಿಶ್ವಮಟ್ಟದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಮಹಾಯಜ್ಞವನ್ನು ಕೈಗೊಂಡಿದ್ದಾರೆ. 2015ರಲ್ಲಿ ಸ್ವಾಮೀಜಿಯವರು ಪ್ರಾರಂಭಿಸಿದ ಈ ಗೀತಾ ಪಾರಾಯಣದ ವಿರಾಟ್ ಸಂಕಲ್ಪದಿಂದ ಪ್ರೇರಿತರಾಗಿ ಈಗಾಗಲೇ ವಿಶ್ವಾದ್ಯಂತ ಸಹಸ್ರಾರು ಜನ ಗೀತೆಯ ಏಳುನೂರು ಶ್ಲೋಕಗಳನ್ನು ಪುಸ್ತಕ ನೋಡದೆಯೇ ಪಾರಾಯಣ ಮಾಡುತ್ತಿದ್ದಾರೆ. ಸ್ವಾಮೀಜಿಯವರು ಸಹಸ್ರ ಸಹಸ್ರ ಜನರನ್ನು ಕುರುಕ್ಷೇತ್ರಕ್ಕೇ ಕರೆದೊಯ್ದು ಕೃಷ್ಣ ಬೋಧಿಸಿದ ಸ್ಥಳದಲ್ಲೇ ಗೀತೆಯನ್ನು ಹೇಳಿಸಿದ್ದಾರೆ. ವೆಬ್​ಸೈಟ್, ಸ್ಕೆ ೖಪ್, ಮೊಬೈಲ್ ಫೋನ್ ಮುಂತಾದ ತಂತ್ರಜ್ಞಾನ ಬಳಸಿಕೊಂಡು ಸಹಸ್ರಾರು ನುರಿತ ಗೀತಾಶಿಕ್ಷಕರ ತಂಡಗಳು ಈಗಾಗಲೇ ಜಗತ್ತಿನ ನಾನಾ ರಾಷ್ಟ್ರಗಳ ಮಕ್ಕಳಿಗೆ ಗೀತೆಯನ್ನು ಕಂಠಸ್ಥ ಮಾಡಿಸುತ್ತಿವೆ.

ಸಾಮೂಹಿಕ ಪಾರಾಯಣ

ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಹಮ್ಮಿಕೊಂಡಿರುವ ಬೃಹತ್ ಭಗವದ್ಗೀತಾ ಸಾಮೂಹಿಕ ಪಾರಾಯಣ ಮಹಾಯಜ್ಞದ ಮುಖ್ಯ ಕಾರ್ಯಕ್ರಮವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2019ರ ಡಿಸೆಂಬರ್ 8ರಂದು ಬೆಳಗ್ಗೆ 9 ಘಂಟೆಯಿಂದ ಭಗವದ್ಗೀತಾ ಸಾಮೂಹಿಕ ಪಾರಾಯಣದ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವೇದಿಕೆಯಲ್ಲಿ ಏಳು ವರ್ಷ ವಯಸ್ಸಿನಿಂದ ಹಿಡಿದು ಎಂಬತ್ತು ವರ್ಷ ವಯಸ್ಸಿನವರೆಗೂ ಇರುವ ಮುನ್ನೂರಕ್ಕೂ ಹೆಚ್ಚು ಜನ ಗೀತಾಪಾರಾಯಣ ಮಾಡುತ್ತ ಮಾರ್ಗದರ್ಶನ ಮಾಡಲಿದ್ದಾರೆ. ಪುಸ್ತಕ ನೋಡಿಕೊಳ್ಳದೆ, ಅತ್ಯಂತ ಸ್ಪಷ್ಟವಾಗಿ, ಮಧುರವಾಗಿ, ಭಕ್ತಿಪೂರಿತವಾಗಿ, ಶ್ರವಣ ಮಾಡುವವರಿಗೆ ಅಮೃತಾನುಭವ ನೀಡುವಂತಹ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

| ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ 

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...