21 C
Bengaluru
Wednesday, January 22, 2020

ಅವಧೂತರ ಅವಧೂತ ಶ್ರೀ ಗುರುದತ್ತ

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಭಾರತದ ಆಧ್ಯಾತ್ಮಿಕ ಜಗತ್ತಿನ ಹತ್ತುಹಲವು ಮಾರ್ಗಗಳಲ್ಲಿ ದತ್ತಪಂಥವೂ ಒಂದು. ಈ ಪಂಥದ ಪ್ರವರ್ತಕ ತ್ರಿಮೂರ್ತಿಗಳ ಅವತಾರವೆನಿಸಿದ ಭಗವಾನ್ ದತ್ತಾತ್ರೇಯ. ಪ್ರಮುಖ ದತ್ತಕ್ಷೇತ್ರಗಳಲ್ಲಿ ಒಂದಾದ ಗಾಣಗಾಪುರಕ್ಕೆ ಹೋಗಿದ್ದ ಲೇಖಕರು ಈ ಬರಹದಲ್ಲಿ ಅಲ್ಲಿನ ದರ್ಶನ, ಅನುಭವಗಳನ್ನು ತಮ್ಮ ನೆನಪುಗಳೊಂದಿಗೆ ಸುಂದರವಾಗಿ ಸಮನ್ವಯಗೊಳಿಸಿದ್ದಾರೆ.

| ಡಾ. ಎಂ. ಚಿದಾನಂದಮೂರ್ತಿ

ಗುರುಬ್ರಂಹ್ಮಾ ಗುರುರ್ವಿಷ್ಣುಃ

ಗುರುರ್ದೇವೋ ಮಹೇಶ್ವರಃ |

ಗುರುಸ್ಸಾಕ್ಷಾತ್ ಪರಬ್ರಹ್ಮಾ

ತಸ್ಮೈ ಶ್ರೀ ಗುರವೇ ನಮಃ ||

‘ಗುರು’ವು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮಾನ ಮಾತ್ರವಲ್ಲ, ಈ ಲೋಕದ ಆಚೆ ಇರುವ ಅಗೋಚರ ಪರಬ್ರಹ್ಮಚೈತನ್ಯವೂ ಹೌದು. ಅಂತಹ ‘ಗುರುಗಳ ಗುರು’ ಎಂದೇ ಖ್ಯಾತವಾಗಿರುವ ದತ್ತಾತ್ರೇಯನ ‘ಕ್ಷೇತ್ರ’ವು ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿದೆ. ಅಲ್ಲಿನ ಪಾದುಕೆಗಳ ದರ್ಶನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ರಾಜಸ್ಥಾನ, ನೇಪಾಳಗಳಿಂದಲೂ ಲಕ್ಷಾಂತರ ಜನರು ಆಗಮಿಸುತ್ತಾರೆ. ಕೆಲವು ತಿಂಗಳ ಹಿಂದೆ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಹೋಗಿ ಅದರ ವಿಷಯ ತಿಳಿದು ಗಾಣಗಾಪುರಕ್ಕೇ ಹೋಗಿ ಅಲ್ಲಿನ ದೇವಾಲಯಗಳು, ನದಿಗಳ ಸಂಗಮ, ಮರಗಳು ತೋಪು, ಜನರ ಭಕ್ತಿಭಾವ ಇವುಗಳನ್ನು ಕಂಡು ಭಕ್ತ್ಯಾನಂದತುಂದಿಲನಾದೆ. ಕಲಬುರಗಿಗೆ ಹೋಗಲು ನಿಮಿತ್ತರಾದ ಕುಲಪತಿ ಡಾ. ಎಚ್.ಎಂ. ಮಹೇಶ್ವರಯ್ಯ, ಮಾಹಿತಿ ಸಂಗ್ರಹಕ್ಕೆ ಸಹಕರಿಸಿದ ಡಾ. ವಿಕ್ರಮ ವಿಸಾಜಿ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಪುರಾಣಗಳಲ್ಲಿ ‘ಧನಪುರ’ ಎಂದೇ ಕರೆಯಲಾಗಿರುವ ಪ್ರಾಚೀನ ಊರು ಗಾಣಗಾಪುರವು ಭೀಮಾ, ಅಮರಜಾ ನದಿಗಳ ಸಂಗಮಸ್ಥಾನದಲ್ಲಿದ್ದು, ಊರ ಹೊರಗೆ-ಒಳಗೆ ಹಿಂದಿನ ದೇವಾಲಯಗಳಿಂದ ಕಿಕ್ಕಿರಿದಿದೆ. ಭೀಮಾತೀರದ ದತ್ತಾತ್ರೇಯ ಪೀಠವು ಅವುಗಳಲ್ಲಿ ಬಹು ಮುಖ್ಯವಾದುದು. ಪೀಠದ ಮುಂದೆ ನದಿ ದಂಡೆಯ ಮೇಲೆ ಇರುವ ಹಲವು ವೃಕ್ಷಗಳಲ್ಲಿ ಔದುಂಬರವು (ಅತ್ತಿಮರ) ಬಹು ಮುಖ್ಯವಾದುದು. ದತ್ತಾತ್ರೇಯ ಮಂದಿರದಲ್ಲಿ ಯಾವುದೇ ದೇವತಾಮೂರ್ತಿ ಅಥವಾ ಶಿವಲಿಂಗ ಇಲ್ಲ. ಅಲ್ಲಿ ಚಿಕ್ಕ ಕೊಠಡಿಯಲ್ಲಿ ಮರದ ಎರಡು ಪಾದುಕೆಗಳಿವೆ. ಅವು ದತ್ತಾತ್ರೇಯನ ಎರಡನೆಯ ಅವತಾರವಾದ ನರಸಿಂಹ ಸರಸ್ವತಿ ಸ್ವಾಮಿಗಳು ಮೆಟ್ಟಿದ ಪಾದರಕ್ಷೆಗಳು ಎಂದು ನಂಬುತ್ತಾರೆ. ಭಕ್ತರು ಭೀಮಾ ಅಮರಜಾ ಸಂಗಮದಲ್ಲಿ ಮಿಂದು, ಸಾಲಾಗಿ ನಿಂತು ನಿಧಾನವಾಗಿ ನಡೆದು ಕಿಟಕಿ ಮೂಲಕ ಪಾದುಕಾ ದರ್ಶನ ಮಾಡಿ ಪುನೀತರಾಗುತ್ತಾರೆ. ಜನರ ನೂಕುನುಗ್ಗಲು ತಡೆಗಟ್ಟಲು ಕಾವಲುಗಾರರಿದ್ದಾರೆ. ನರಸಿಂಹ ಸರಸ್ವತಿ ಸ್ವಾಮಿಗಳು (ಸು. ಕ್ರಿ.ಶ. 1400-50) ತ್ರಿಮೂರ್ತಿಗಳ ಎರಡನೆಯ ಅವತಾರ

ಎಂದು ಹೇಳುತ್ತಾರೆ. ದತ್ತಾತ್ರೇಯನು (ತ್ರಿಮೂರ್ತಿಗಳ ಏಕೀಕೃತ ರೂಪ) ಮೊದಲು ಬ್ರಾಹ್ಮಣಕುಲದ ಅಪ್ಪಳ ರಾಜ, ಸುಮತಿ ಅವರ ಮಗನಾದ ಶ್ರೀಪಾದವಲ್ಲಭ ರೂಪಿಯಾಗಿ ಬಳಿಕ ನರಸಿಂಹಸ್ವಾಮಿಗಳಾಗಿ ಅವತರಿಸಿದ ಎಂಬುದೇ ಪ್ರಬಲವಾದ ನಂಬಿಕೆ. ಆದರೆ ಐತಿಹಾಸಿಕ ವ್ಯಕ್ತಿ ನರಸಿಂಹ ಸರಸ್ವತಿಯವರು ಮಹಾರಾಷ್ಟ್ರದ ಕಾರಂಜಾ ಎಂಬಲ್ಲಿ ಜನಿಸಿದಾಗ ತಂದೆ-ತಾಯಿ ಬಾಲಕನಿಗೆ ‘ನರಹರಿ’ ಎಂಬ ನಾಮಕರಣ ಮಾಡಿದರು.

ಅವರು ಯೌವನದಲ್ಲೇ ತಪಸ್ವಿಗಳಾಗಿ ಅಧ್ಯಾತ್ಮಿಕ ಚಿಂತಕರಾಗಿ ವಿಕಾಸಗೊಂಡು ತಮ್ಮ ಹುಟ್ಟೂರನ್ನು ಬಿಟ್ಟು ಏಕಾಂಗಿಯಾಗಿ ಹೊರಟರು. ಅವರು ದಾರಿಯಲ್ಲಿನ ಊರುಗಳಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಐದು ಮನೆಗಳ ಮುಂದೆ ನಿಂತು ‘ಭಿಕ್ಷಾ’ ಎಂದು ಹೇಳಿದೊಡನೆ ಮನೆಗಳವರು ಅವರಿಗೆ ಊಟಕ್ಕೆ ಆಹಾರ ಕೊಡುತ್ತಿದ್ದರು. ಇದನ್ನು ‘ಮಧುಕರವೃತ್ತಿ’ ಎನ್ನುತ್ತಾರೆ (ಜೇನುಹುಳವು ಹೂಗಳಿಂದ ಜೇನು ಸಂಗ್ರಹಿಸುವುದು). ಮಧುಕರವೃತ್ತಿಯ ಪಂಢರಪುರದ ವಿಠ್ಠಲನ ಭಕ್ತರ ‘ವಾರಕರಿ’ಯನ್ನು ಹೋಲುತ್ತದೆ (ಅಪರಿಚಿತರ ಮನೆಯ ಮುಂದೆ ವಿಠ್ಠಲನ ಭಜನೆ ಮಾಡುತ್ತ ಯಾತ್ರಾರ್ಥಿಗಳು ಪಡೆಯುವ ಆಹಾರವೇ ವಾರಕರಿ). ಕಾರಂಜಾದಿಂದ ನಡೆದುಬಂದಾಗ ದಾರಿಯಲ್ಲಿ ಭೀಮಾ ಅಮರಜಾ ನದಿಗಳ ಸಂಗಮಸ್ಥಾನವು ಅವರಿಗೆ ಪವಿತ್ರವಾಗಿ ಕಾಣಿಸಿತು. ಅದರ ದಡದಲ್ಲಿ ಬೆಳೆದಿದ್ದ ಅಸಂಖ್ಯಾತ ಮರಗಳೇ ಅವರ ತಪೋವನವಾಯ್ತು. ಅಲ್ಲಿಯ, ಅದರಲ್ಲೂ ಗಾಣಗಾಪುರದ ಗ್ರಾಮೀಣ ಜನರು ಅವರ ದಿವ್ಯತೇಜಸ್ಸಿಗೆ, ನಿಷ್ಕಳಂಕ ದೈವಭಕ್ತಿಗೆ ಮಾರುಹೋದರು; ಅವರ ಭಕ್ತರಾದರು. ಅವರು ಅಲ್ಲಿದ್ದು ಒಂದು ಔದುಂಬರ ವೃಕ್ಷದ ಕೆಳಗೆ ಗುಡಿಸಲು ಕಟ್ಟಿಕೊಂಡು ನಿತ್ಯವೂ ಭಗವದ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದರು. ನದಿಯ ದಡದಲ್ಲಿ ಅಷ್ಟಷಷ್ಟ ತೀರ್ಥಗಳಿದ್ದುವು. ಅವುಗಳಲ್ಲಿ ಪಾಪವಿನಾಶ ತೀರ್ಥ, ಕಾವ್ಯತೀರ್ಥ ಇವು ಕೆಲವು. ಅವರ ಗುಡಿಸಲ ಪಕ್ಕದಲ್ಲಿದ್ದು ಔದುಂಬರ ವೃಕ್ಷವು ತನ್ನ ಉಗ್ರತೆಯನ್ನು ಕಳೆದುಕೊಂಡಿತು. ಅದರ ಹಣ್ಣು ಆರೋಗ್ಯಕ್ಕೆ ಅಪಾಯಕಾರಿ, ಅದರಲ್ಲಿ ಭೂತಪ್ರೇತಗಳಿವೆ ಎಂದು ಜನ ಹೆದರುತ್ತಿದ್ದರು. ನರಸಿಂಹ ಸರಸ್ವತಿಗಳು ಅದರ ಹಣ್ಣುಗಳನ್ನೇ ಮುಖ್ಯವಾಗಿ ಆಹಾರವಾಗಿ ಬಳಸಿಕೊಂಡದ್ದರಿಂದ ಜನರ ಭಯ ನಿವಾರಣೆಯಾಯ್ತು; ಜನರಿಗೆ ಪವಿತ್ರ ಎನ್ನಿಸಿತು. ಭೀಮಾನದಿಯಲ್ಲಿ ಸ್ನಾನ ಮಾಡಿ ಔದುಂಬರಫಲವನ್ನು ತಿಂದುದರ ಫಲವಾಗಿ ಬಂಜೆಯೊಬ್ಬಳು ಗರ್ಭಿಣಿಯಾದಳು ಎಂಬ ನಂಬಿಕೆ ಇದ್ದುದರಿಂದ ಆ ಪ್ರದೇಶವು ಜನರಿಗೆ ಪವಿತ್ರ ಕ್ಷೇತ್ರವೆನ್ನಿಸಿತು. ಅದು ಇಷ್ಟಫಲ ಪ್ರದಾಯಕವಾಯ್ತು. ಈಗಲೂ ಎಲ್ಲ ಕಡೆ ಸ್ತ್ರೀಯರು ಔದುಂಬರವೃಕ್ಷದ ಸುತ್ತ ದಾರ ಕಟ್ಟಿ ಊದುಬತ್ತಿಯಿಂದ ಪೂಜಿಸಿ ಹರಕೆ ಹೊರುತ್ತಾರೆ.

ನರಸಿಂಹ ಸರಸ್ವತಿ ಪ್ರತಿದಿನವೂ ಬೆಳಗ್ಗೆ ಸಂಗಮದಲ್ಲಿ ಸ್ನಾನಮಾಡಿ ಔದುಂಬರ ವೃಕ್ಷದ ಕೆಳಗೆ ದತ್ತಾತ್ರೇಯನ ಧ್ಯಾನದಲ್ಲಿ ಮಗ್ನರಾಗಿ ಮಧ್ಯಾಹ್ನದ ಹೊತ್ತಿಗೆ ಊರೊಳಕ್ಕೆ ಹೋಗಿ ಐದು ಮನೆಗಳ ಮುಂದೆ ನಿಂತು ‘ಭಿಕ್ಷಾ’ ಎಂದು ಧ್ವನಿ ಮಾಡಿದರೆ ಜನರು ಕೊಡುತ್ತಿದ್ದ ಆಹಾರವನ್ನು ಸ್ವೀಕರಿಸುತ್ತಿದ್ದರು. ಅವರಿಗೆ ದಿನಕ್ಕೆ ಒಂದು ಸಾರಿ ಊಟ ಮಾಡುವುದು ಪದ್ಧತಿಯಾಗಿತ್ತು. ಅದನ್ನು ಅವರ ಕಾಲದಲ್ಲೇ ಜನರು ‘ಮಧುಕರಿ’ ಎಂದು ಕರೆದು ಗೌರವಿಸಿದರು. (ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ ‘ಮಧುಕರ ವೃತ್ತಿ ಎನ್ನದು, ಅದು ಬಲು ಚೆನ್ನದು’ ಎಂದು ಹೇಳಿಕೊಂಡಿದ್ದಾರೆ). ಇಂದಿಗೂ ಗಾಣಗಾಪುರದ ದತ್ತಮಂದಿರದ ಅರ್ಚಕರು, ಹರಕೆ ಹೊತ್ತ ಭಕ್ತರು ಪ್ರತಿದಿನ ಮಧ್ಯಾಹ್ನ ಐದೈದು ಮನೆ ಬಳಿಗೆ ಹೋಗಿ ಆಹಾರ ಪಡೆದು ಆ ಪ್ರಸಾದವನ್ನು ಸ್ವೀಕರಿಸುತ್ತಾರೆ.

ನರಸಿಂಹ ಸರಸ್ವತಿ ಸ್ವಾಮಿಗಳು ಗಾಣಗಾಪುರದಲ್ಲಿ ನೆಲಸಿ ದಡದ ಔದುಂಬರ ಕೆಳಗೆ ಹಲವು ಕಾಲ ವಾಸವಾಗಿದ್ದರು ಎಂಬುದರ ಕುರುಹಾಗಿ ಇಂದಿಗೂ ಅವರು ಅಲ್ಲಿನ ಔದುಂಬರ ವೃಕ್ಷದಲ್ಲಿ ಗೋಪ್ಯವಾಗಿ ನೆಲಸಿದ್ದಾರೆ ಎಂಬ ಶ್ರದ್ಧೆ ವ್ಯಾಪಕವಾಗಿದೆ. ಅವರು ಅಲ್ಲಿನ ಯಕ್ಷಿಣಿಯರಿಗೆ ಯೋಗಿನಿಯರಿಗೆ ಧಮೋಪದೇಶ ಮಾಡಿದರು, ಬಂಡೆಯ ಮೇಲಿನಿಂದ ಹಾಲು ಸುರಿಸಿದರು ಎಂಬ ದಂತಕತೆಯು ಅವರು ಜನರ ಮೌಢ್ಯವನ್ನು ಪರಿಹರಿಸಿ ಬಡವರಿಗೆ ಅನಾಥರಿಗೆ ಸಹಾಯವನ್ನು ಮಾಡಿದರು, ಅವರ ರಕ್ಷಣೆ ಮಾಡಿದರು ಎಂಬುದರ ಸೂಚಕ.

ದತ್ತಾತ್ರೇಯ ತ್ರಿಮೂರ್ತಿಗಳ ಸಂಗಮವಾದರೂ ಅವರಲ್ಲಿ ವಿಷ್ಣುವಿಗೆ ಹೆಚ್ಚು ಪ್ರಾಧಾನ್ಯ; ತಾತ್ವಿಕವಾಗಿ ಅದು ದ್ವೈತ ಮತ್ತು ಅದ್ವೈತಗಳ ಸಮನ್ವಯವಾದರೂ ಶಂಕರಾಚಾರ್ಯರ ಅದ್ವೈತಕ್ಕೇ ಹೆಚ್ಚು ಮಹತ್ವ. ಹುಟ್ಟು ಬ್ರಾಹ್ಮಣರಾದ ‘ಗುರು’ ನರಸಿಂಹ ಸರಸ್ವತಿಯವರಿಗೆ ಗಾಣಗಾಪುರವೇ ‘ಕಾಶಿ’ ಆಗಿದ್ದರೂ ಅವರು ಅಲ್ಲಿಂದ ಮಲ್ಲಿಕಾರ್ಜುನ, ಭ್ರಮರಾಂಬೆಯರ ದರ್ಶನಕ್ಕಾಗಿ ಶ್ರೀಶೈಲಕ್ಕೆ ಹೋಗಿ ಅಲ್ಲಿನ ‘ಕರ್ಗಳಿ’ವನದಲ್ಲಿ ಧ್ಯಾನಮಗ್ನರಾದರು ಮತ್ತು ಅಲ್ಲೇ ಕೊನೆಯುಸಿರೆಳೆದರು (ಕದಳಿ ಎಂಬುದು ಹೆಚ್ಚಾಗಿ ಬಾಳೆಮರಗಳೇ ಇರುವ ಶ್ರೀಶೈಲದ ಒಂದು ವನ. ಅಲ್ಲೇ ಅಲ್ಲಮ, ಅಕ್ಕಮಹಾದೇವಿಯರು ಶಿವೈಕ್ಯರಾದುದು). ಅವರು ಗಾಣಗಾಪುರದಿಂದ ಹೊರಟಾಗ ತಮ್ಮ ‘ಪಾದುಕೆ’ಗಳನ್ನು ಅಲ್ಲೇ ಬಿಟ್ಟರು. ಗಾಣಗಾಪುರದ ಭಕ್ತರಿಗೆ ‘ಗುರು’ಗಳ ಆ ಮರದ ಪಾದುಕೆಗಳೇ ಹಿಂದಿನ ಎಲ್ಲ ನೆನಪುಗಳ ಪುಣ್ಯ ಪವಿತ್ರ ಸ್ಮಾರಕ; – ಆ ಪೂಜ್ಯರ ‘ನೆನಪಿನ ಸುಖ ಸಮುದ್ರ’. (ಇದು ಬಸವನ ಭಾವೈಕ್ಯದ ನಂತರ ವಚನಕಾರನೊಬ್ಬ ಆಡಿದ ಮಾತು.)

ದತ್ತಾತ್ರೇಯನ ಕೇಂದ್ರಗಳು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ನೇಪಾಳ ಇತ್ಯಾದಿ ಕಡೆ ವ್ಯಾಪಕವಾಗಿವೆ. ಬೆಂಗಳೂರಿನ ಹೊಸಕೆರೆಹಳ್ಳಿಯ ದತ್ತಾತ್ರೇಯ ಬಡಾವಣೆ, ಮಲ್ಲೇಶ್ವರ ಬಡಾವಣೆ, ಬೆಳಗಾವಿಯಿಂದ 13 ಕಿ.ಮೀ. ದೂರದ ಬಾಳೇಕುಂದ್ರಿ, ಮೈಸೂರು ನಂಜನಗೂಡು ರಸ್ತೆಯ ‘ಶ್ರೀ ಕಾಲಾಗ್ನಿ ಶಮನ ದತ್ತಮಠ’ ಅಥವಾ ‘ಶ್ರೀ ಗಣಪತಿ ಸಚ್ಚಿದಾನಂದ ಸೇವಾಶ್ರಮ’, ಚಿಕ್ಕಮಗಳೂರು ಜಿಲ್ಲೆಯ ‘ದತ್ತಪೀಠ’ ಇವು ಅವುಗಳಲ್ಲಿ ಕೆಲವು ಮಾತ್ರ.

ಗಾಣಗಾಪುರ, ಬೆಂಗಳೂರು ಇಲ್ಲಿಯ ಮೂರು ದತ್ತಪೀಠಗಳನ್ನು ನಾನು ಪ್ರತ್ಯಕ್ಷ ಕಂಡು ಕ್ಷೇತ್ರಕಾರ್ಯ ಮಾಡಿದ ಮಾಹಿತಿ ಪ್ರಕಾರ ದತ್ತಪೀಠಗಳಿಗೆ ಅರ್ಚಕರು ವ್ಯವಸ್ಥಾಪಕರು ಇದ್ದರೂ ಅವರು ‘ಮಠಾಧಿಪತಿಗಳು’ ಅಲ್ಲ (ಬಹುತೇಕ ಬೇರೆ ಎಲ್ಲ ಮಠಗಳಿಗೆ ಮುಖ್ಯಸ್ಥರು ಇರುತ್ತಾರೆ). ಅಲ್ಲಿನ ಪ್ರಮುಖ ಕೇಂದ್ರ ತ್ರಿಮೂರ್ತಿ ಆಕಾರದ ದತ್ತಾತ್ರೇಯನ ವರ್ಣಚಿತ್ರ – ಅದು ಶಿಲ್ಪ ಅಥವಾ ಲೋಹದಿಂದ ತಯಾರಿಸಿದ್ದು ಅಲ್ಲ. ಅಲ್ಲಿನ ಪ್ರಮುಖ ಪೂಜಾಮೂರ್ತಿಗಳೆಂದರೆ ಪಾದುಕೆ ಮತ್ತು ಔದುಂಬರ ವೃಕ್ಷ. ಯಾವುದೇ ದತ್ತಪೀಠಕ್ಕೆ ಹೋದರೂ ಅಲ್ಲಿ ಪಾದುಕೆ ಮತ್ತು ಔದುಂಬರ ವೃಕ್ಷಗಳನ್ನು ಕಾಣಬಹುದು. ಉದಾಹರಣೆಗೆ, ಬೆಂಗಳೂರಿನ ದತ್ತಾತ್ರೇಯ ನಗರದ ತಗ್ಗು ಪ್ರದೇಶದಲ್ಲಿ ಔದುಂಬರವೃಕ್ಷವಿದ್ದು ಅದರ ಕೆಳಗೆ ಸ್ವಲ್ಪ ತಗ್ಗಿನಲ್ಲಿಯದನ್ನು ‘ಸ್ವಯಂಭೂ ದತ್ತಪಾದುಕೆ’ ಎಂದು ಕರೆಯುತ್ತಾರೆ. ಅದು ಕಲ್ಲಿನಲ್ಲಿ ಕೆತ್ತಿದ್ದು. ಆವರಣದಲ್ಲಿ ಮರದ ದತ್ತ ಪಾದುಕೆಗಳಿದ್ದು ಅವುಗಳಿಗೆ ಬಾಗಿ ನಮಸ್ಕರಿಸಬಹುದು. ಔದುಂಬರವೃಕ್ಷದ ಸುತ್ತ ಆವರಣ ಹಾಕಿ ಚಪ್ಪಲಿಧಾರಿಗಳು ಅದನ್ನು ಮುಟ್ಟಲು ನಿಷೇಧಿಸಲಾಗಿದೆ. ಅಲ್ಲಿನ ಬ್ರಾಹ್ಮಣ ಅರ್ಚಕರು ಹೋಮಹವನದ ಜತೆ ವೇದಘೋಷವನ್ನು ಮಾಡುತ್ತಾರೆ; ಕೆಲವು ಬಾಲಕರಿಗೆ ವೇದಾಧ್ಯಯನವನ್ನು ಮಾಡಿಸುವುದನ್ನು ಯಾರು ಬೇಕಾದರೂ ನೋಡಬಹುದು.

ದತ್ತಾತ್ರೇಯರು ಬರೆದರೆಂದು ಹೇಳಲಾದ ‘ಅವಧೂತ ಗೀತಾ’ ಕೃತಿಯನ್ನು ಬರೆದವರು ನರಸಿಂಹ ಸರಸ್ವತಿಯವರು. ಆ ಹಾಡಿನಲ್ಲಿ ‘ಗುರು’ವಿಗೇ ಪ್ರಾಮುಖ್ಯ. ತ್ರಿಮೂರ್ತಿ ಆಕಾರದ ದತ್ತಾತ್ರೇಯನು ‘ಸ್ವಯಂಜ್ಞಾನಿ’ – ಎಂದರೆ ಮಾನವನು ಮೊದಲು ತನ್ನನ್ನು ತಾನು ಅಂತರಂಗವನ್ನು ಶುದ್ಧೀಕರಿಸಿಕೊಂಡು ಜ್ಞಾನಮೂರ್ತಿಯಾಗಿ ಪರಮಾತ್ಮನಲ್ಲಿ ಲೀನವಾಗಬೇಕು. ದತ್ತಾತ್ರೇಯನ ಆರು ಕೈಗಳು ಯಮ, ನಿಯಮ, ಶಮ, ಸಮ, ದಮ, ಶಾಂತಿಗಳಿಗೆ; ಅವನ ಪಕ್ಕದ ವೃಷಭವು ಭಾರತವು ಭಕ್ತಿಯಿಂದ ಕಾಣುವ ಶಿವನ ವಾಹನವಾಗಿ; ಅವನ ಸುತ್ತ ಇರುವ ನಾಲ್ಕು ಶ್ವಾನಗಳು ನಾಲ್ಕು ವೇದಗಳಿಗೆ ಸಂಕೇತ. ವೇದಗಳೇ ಭಾರತೀಯ ಸಂಸ್ಕೃತಿಯ, ಹಿಂದೂಧರ್ಮದ ಅಡಿಪಾಯ ಎಂಬುದನ್ನು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಸವೋಚ್ಚ ನ್ಯಾಯಾಲಯವೂ ಅದನ್ನು ಒಪ್ಪಿಕೊಂಡಿದೆ. ಶಿವ, ವಿಷ್ಣು, ಬ್ರಹ್ಮರ ಪ್ರತೀಕವಾಗಿರುವ ದತ್ತಾತ್ರೇಯನು ಸರ್ವಧರ್ಮಗಳ ಸಾಕಾರಮೂರ್ತಿ ಎಂಬುದು ಸ್ವಯಂವೇದ್ಯ. ಗಾಣಗಾಪುರದಲ್ಲಿ ದತ್ತಪಾದುಕೆಗಳನ್ನು ದರ್ಶಿಸಿದ ಜನರು ಆವೇಶಭರಿತರಾಗಿ ನರ್ತಿಸುತ್ತಾರೆ ಎಂಬುದನ್ನು ಕೇಳಿದ್ದೇನೆ. ಅದು ಭಾರತೀಯ ಸಂಸ್ಕೃತಿ, ಹಿಂದೂಧರ್ಮ – ಸ್ವಚ್ಛಜೀವನ, ದೈವಭಕ್ತಿ ಅದರ ಒಳಹೃದಯ, ಅಂತರಾಳದ ತಿರುಳು.

ಕೊನೆಯ ಮಾತು: 2007ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ (ಬಾಬಾ ಬುಡನ್​ಗಿರಿ) ತುದಿಗೆ ಹೋಗಿ ಅಲ್ಲಿನ ಗುಹೆ ಅಥವಾ ‘ದತ್ತಪೀಠ’ವನ್ನು ಪರಿಶೀಲಿಸಿದಾಗ ಅಲ್ಲಿದ್ದ ಏಕೈಕ ಮರವೆಂದರೆ ಔದುಂಬರ ವೃಕ್ಷ: ಗುಹೆಯ ಒಳಗೆ ಪಾದುಕೆಗಳಿದ್ದುವು. ಕಮಲ, ಹಂಸ ಕೆತ್ತನೆಗಳಿವೆ. ಅದು ಸ್ಪಷ್ಟವಾಗಿ ಹಿಂದೂ ‘ದತ್ತಪೀಠ’ವಾಗಿದ್ದರೂ ಮುಸ್ಲಿಮರು ತಮಗೆ ಸೇರಿದ್ದೆಂದು ದಾವಾ ಹೂಡಿದ್ದರು: ಆ ಗುಹೆಯ ಮುಂದೆ ಇನ್ನೂರು ವರ್ಷಗಳ ಹಿಂದಿನ ಮುಸ್ಲಿಂ ಗೋರಿಗಳಿದ್ದುವು. ನ್ಯಾಯಾಲಯವು ಆ ಗುಹೆಯು ಹಿಂದೂ, ಮುಸ್ಲಿಮರಿಬ್ಬರಿಗೂ ಪವಿತ್ರ ಜಾಗವೆಂಬ ದ್ವಂದ್ವ ನಿಲುವಿನ ತೀರ್ಪು ನೀಡಿತು. ಗಾಣಗಾಪುರದ ‘ದತ್ತಪೀಠ’ದ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಪಾದುಕೆಗಳನ್ನಿಟ್ಟು ಭಕ್ತರು ಆವೇಶಭರಿತರಾಗಿ ಹಾಡುತ್ತ ಕೆಲವೊಮ್ಮೆ ಆವೇಶದಿಂದ ಕುಣಿಯುತ್ತಾರೆ. ಅದನ್ನು ಕೇಳಿ ಆನಂದಿಸಿದ ನನಗೆ ಚಂದ್ರದ್ರೋಣಪರ್ವತದ ದತ್ತಗುಹೆಯ ನೆನಪು ಅಷ್ಟೇ ದುಃಖವನ್ನೂ ತಂದಿತು. ಅದು ಭಾರತದ ಅಥವಾ ಕರ್ನಾಟಕದ ಇತಿಹಾಸವೂ ಹೌದು. ಸಮಕಾಲೀನ ವಾಸ್ತವವೂ ಹೌದು. ಅದು ನಮಗೆ ದಾರಿದೀಪವಾಗುವ ಕಾಲ ಬರಲಿ ಎಂದು ಹಾರೈಸುತ್ತೇನೆ.

ಅವಧೂತ ಪದದ ಅರ್ಥ

ಅಕ್ಷರತ್ವಾತ್ ವರೇಣ್ಯತ್ವಾತ್ ಧೂತಸಂಸಾರಬಂಧನಾತ್ |

ತತ್ತ್ವಮಸ್ಯಾದಿಲಕ್ಷ್ಯತ್ತಾ್ವತ್ ಅವಧೂತಃ ಇತೀರ್ಯತೇ ||

‘ಅವಧೂತ’ ಎಂಬ ಮಾತಿನಲ್ಲಿ ನಾಲ್ಕು ವರ್ಣಗಳು ಅಥವಾ ಅಕ್ಷರಗಳು. ‘ಅ’ ಎನ್ನುವ ಮೊದಲ ಅಕ್ಷರದಿಂದ ‘ನಾಶವಿಲ್ಲದೆ ಇರುವ ನೆಲೆ’ ಎಂದರ್ಥವಾಗುತ್ತದೆ. ಎರಡನೆಯದಾದ ‘ವ’ ಎಂದರೆ ‘ವರೇಣ್ಯ’, ಶ್ರೇಷ್ಠನಾದವನು; ಎಲ್ಲರಿಗಿಂತ ಮಿಗಿಲಾದವನು. ಮೂರನೆಯ ಅಕ್ಷರ ‘ಧೂ’ ಎಂದರೆ ‘ಒದರುವುದು’, ‘ಝಾಡಿಸುವುದು’, ಸಂಸಾರದ ಕಟ್ಟುಗಳನ್ನು ಒದರಿಹಾಕುವವನು, ಕಿತ್ತೊಗೆದಿರುವವನು. ಕಡೆಯ ಅಕ್ಷರವಾದ ‘ತ’ ಎಂಬುದು ಉಪನಿಷತ್ತಿನ ಮಹಾವಾಕ್ಯಗಳಾದ ‘ತತ್ತ್ವಮಸಿ’ ಮೊದಲಾದುವುಗಳಿಗೆ ಹೊಂದಿಕೊಳ್ಳುವವನು. ಅವಧೂತನು ಈ ನಾಲ್ಕು ಗುಣಗಳುಳ್ಳವನು. ಭಗವಾನ್ ದತ್ತಾತ್ರೇಯರು ಸಾಂಕೃತಿ ಮುನಿಗೆ ಹೇಳಿದ್ದು (ಮಾಹಿತಿ ಸೌಜನ್ಯ: ಸಾ.ಕೃ. ರಾಮಚಂದ್ರರಾವ್ ಅವರು ರಚಿಸಿದ ‘ಅವಧೂತ’ ಕೃತಿ)

(ಲೇಖಕರು ಕನ್ನಡದ ಹಿರಿಯ ಸಂಶೋಧಕರು, ವಿದ್ವಾಂಸರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...