20.4 C
Bengaluru
Sunday, January 19, 2020

ಕರ್ಮಫಲತ್ಯಾಗಿಗೇ ಮೋಕ್ಷರೂಪದ ಶಾಂತಿ

Latest News

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

ಶ್ರೀ ರಾಮಕೃಷ್ಣರು ನರೇಂದ್ರನಿಗೆ (ಮುಂದೆ ಸ್ವಾಮಿ ವಿವೇಕಾನಂದ) ‘ಎಲ್ಲವೂ ಬ್ರಹ್ಮವೇ’ ಎಂದರು. ಅವನು ಹೊರಗೆ ಬಂದು ಹಾಜರಾ ಎಂಬುವನೊಡನೆ ಶ್ರೀ ರಾಮಕೃಷ್ಣರ ಮಾತಿನ ಬಗ್ಗೆ ಹಾಸ್ಯ ಮಾಡುತ್ತ, ‘ಗೋಡೆ, ಕೋಲು, ಮಡಕೆ ಎಲ್ಲವೂ ಬ್ರಹ್ಮವಂತೆ’ ಎಂದು ಹಾಸ್ಯ ಮಾಡಿದ. ಇದನ್ನು ಕೇಳಿದ ಶ್ರೀ ರಾಮಕೃಷ್ಣರು ಹೊರಬಂದು ಇವನನ್ನು ಮುಟ್ಟಿದರು. ಒಡನೆಯೇ ಇವನಿಗೆ ವಿದ್ಯುತ್ ಸಂಚಾರವಾದಂತಾಯಿತು. ಅವನಿಗೆ ಜಗತ್ತಿನ ಪ್ರತಿಯೊಂದು ವಸ್ತುವೂ ಬ್ರಹ್ಮಮಯವಾಗಿ ತೋರಿದ್ದು ಮಾತ್ರವಲ್ಲ, ಮನದಟ್ಟಾಯಿತು. ಬ್ರಹ್ಮಕ್ಕಿಂತ ಹೊರತಾದ ವಸ್ತುವೇ ಅವನಿಗೆ ಗೋಚರಿಸಲಿಲ್ಲ. ಅಂದಿನಿಂದ ಮೂರು ದಿನ ಅವನಿಗೆ ಅದೇ ಅನುಭವ. ಊಟಕ್ಕೆ ಕುಳಿತಾಗ, ನೀರು ಕುಡಿಯುವಾಗ, ಓಡುವಾಗ ಎಲ್ಲವೂ ಬ್ರಹ್ಮಮಯವಾಯಿತು. ಅನೇಕ ಬಾರಿ ಶ್ರೀರಾಮಕೃಷ್ಣರು ತತ್ವದ ಮೂಲಕ ಮಾಡಲಾಗದ್ದನ್ನು ಮಾಯಾತಂತ್ರದ ಮೂಲಕ ಮಾಡಿ ತೋರಿಸುತ್ತಿದ್ದರೆಂದು ಹೇಳುವರು. ಅತಿಬುದ್ಧಿವಂತರಾದವರಿಗೆ ಹೇಳಲಾಗದು, ಆದರೆ ಅವರ ಮಾಂತ್ರಿಕ ಸ್ಪರ್ಶ ಎಲ್ಲವನ್ನೂ ಮಾಡುತ್ತಿತ್ತು. ತತ್ವಜ್ಞಾನಿಗೆ ಇಂದ್ರಿಯಗಳ ಅನುಭವಗಳೆಲ್ಲ ಆಗುತ್ತಿದ್ದರೂ ಅವೆಲ್ಲವೂ ಇಂದ್ರಿಯಗಳ ವ್ಯಾಪಾರವೆಂದು ಸ್ಪಷ್ಟವಾಗಿ ತಿಳಿದ ಅವನು ಆತ್ಮಜ್ಞಾನಿಯಾದ ತಾವೇನು ಮಾಡುತ್ತಿಲ್ಲವೆಂದು ತಿಳಿದು ಅವುಗಳ ಅಂಟಿಲ್ಲದೇ ನಿರ್ಲಿಪ್ತನಾಗಿರುವನು.

ಬ್ರಹ್ಮಣ್ಯಾಧಾಯ ಕರ್ವಣಿ ಸಂಗಂ ತ್ಯಕ್ತಾ್ವ ಕರೋತಿ ಯಃ |

ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ || 5.10

‘ಯಾವನು ಎಲ್ಲ ಕರ್ಮಗಳನ್ನು ಬ್ರಹ್ಮನಲ್ಲಿ ಎಂದರೆ ಪರಮಾತ್ಮನಲ್ಲಿ ಸಮರ್ಪಿಸಿ, ಫಲದಲ್ಲಿ ಆಸಕ್ತಿ ತೊರೆದವನಿಗೆ, ತಾವರೆ ಎಲೆಯು ನೀರಿನಲ್ಲಿದ್ದರೂ ನೀರಿನಿಂದ ಅಂಟಿಕೊಳ್ಳದಂತೆ ಪಾಪವು ಅಂಟುವುದಿಲ್ಲ.’ ತತ್ವಜ್ಞಾನಿಗೆ ತಾನು ದೇಹೇಂದ್ರಿಯ ಮನಾದಿಗಳಿಂದ ಭಿನ್ನವಾದ ನಿತ್ಯ ಶುದ್ಧ-ಬುದ್ಧ-ಮುಕ್ತ ಚೈತನ್ಯನೆಂಬ ಅರಿವಿರುವುದು. ಆದರೆ ಇಲ್ಲಿರುವವನು ಸಾಧಕ. ತತ್ವಗಳನ್ನು ತಿಳಿಯಲು ಕರ್ಮಪ್ರವೃತ್ತನಾಗಿ, ಕರ್ಮಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಾನೆ. ಈ ಪ್ರಕ್ರಿಯೆಯಲ್ಲಿ ಒಂದೆಡೆ ಅಹಂಕಾರ-ಮಮಕಾರ ತೊರೆದು ಸಂಗ ಬಿಡುವನು. ಮತ್ತೊಂದೆಡೆ ಕರ್ಮಗಳಿಂದ ಬರುವ ಫಲಗಳೆಲ್ಲವನ್ನೂ ಪರಮಾತ್ಮನಿಗೆ ಸಮರ್ಪಿಸುತ್ತಿದ್ದಾನೆ. ಅವನು ಆಳು ತನ್ನ ಸ್ವಾಮಿಗೋಸ್ಕರ ಎಂದರೆ ಹನುಮಂತ ಅದ್ಭುತವಾಗಿ ಮಾಡಿದ ಕೆಲಸಗಳೆಲ್ಲವನ್ನೂ ಶ್ರೀರಾಮನಿಗೆ ಪೂಜೆ, ಅರ್ಪಣೆ ಎಂಬ ಭಾವನೆಗಳಿಂದ ಮಾಡಿದಂತೆ. ನಾನು ಎಂಬ ಭಾವನೆ ಕಿಂಚಿತ್ತೂ ಇಲ್ಲ ಎಲ್ಲವೂ ಭಗವಂತನಿಗಾಗಿ, ಸರ್ವಕರ್ಮ ಸರ್ವಫಲ ಸಮರ್ಪಣೆ. ಇವೆಲ್ಲವೂ ಮೋಕ್ಷಕ್ಕಾಗಿ ಎಂಬ ಆಸೆಯಿಂದ ಮಾಡುತ್ತಿರುವುದು. ಆದರ್ಶದ ತುತ್ತ ತುದಿಯಾದ ಮೋಕ್ಷದ ಆಸೆ ಒಳ್ಳೆಯದಾದರೂ ಆಚಾರ್ಯ ಶ್ರೀಶಂಕರರು ‘ಮೋಕ್ಷದ ಆಸೆಯನ್ನೂ ತೊರೆದ ತ್ಯಾಗ-ವೈರಾಗ್ಯಗಳಿರಬೇಕು ಸಾಧಕನಲಿ’ ಎನ್ನುವರು. ಕಾರಣವೆಂದರೆ ಮನಸ್ಸಿನಲ್ಲಿ ಆಸೆ ಬಂದೊಡನೆ ಕರ್ಮ ಕೆಡುವುದು. ಏಕಾಗ್ರತೆ ಭಂಗವಾಗುವುದು. ಮೋಕ್ಷದ ಆಸೆಯೂ ಇರದಿದ್ದಾಗ ಸ್ವರ್ಗಾದಿಗಳ ಆಸೆಗೆ ಅವಕಾಶವೇ ಇಲ್ಲ. ಕರ್ಮ ಮಾಡಿದಾಗ ಫಲ ಬರಲೇಬೇಕು; ಬರುತ್ತದೆ. (ಒಳ್ಳೆಯ ಪುಣ್ಯ ಹಾಗೂ ಕೆಟ್ಟ ಪಾಪಗಳೆರಡೂ) ಇವನು ಮಾಡುವುದೆಲ್ಲವೂ ಪರಮಾತ್ಮನಿಗಾಗಿ. ತಾವರೆ ಎಲೆಗೆ ಹುಟ್ಟು, ಬೆಳವಣಿಗೆ ಮೊದಲಾದವುಗಳೆಲ್ಲ ನೀರಿನ ಸಂಬಂಧದಿಂದ ಉಂಟಾದರೂ ನೀರಿನಿಂದ ನೆನೆಯುವುದಿಲ್ಲ. ತಾವರೆ ಎಲೆಯ ಮೇಲೆ ನೀರು ನಿಲ್ಲದು, ಹಾಗೆಯೇ ಸಾಧಕನ ಪಾಪ-ಪುಣ್ಯಗಳೂ ನಿಲ್ಲವು ಈ ಕರ್ಮದ ಕ್ರಮದಲ್ಲಿಯೇ ವೈರಾಗ್ಯ ಅಂತರ್ಗತವಾಗಿದೆ.

ಕಾಯೇನ ಮನಸಾ ಬುದ್ಧಾ ್ಯ ಕೇವಲೈರಿಂದ್ರಿಯೈರಪಿ |

ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತಾ್ವಧಿಧಿತ್ಮ ಶುದ್ಧಯೇ || 5.11

‘ಕೇವಲ ದೇಹ-ಮನಸ್ಸು-ಬುದ್ಧಿ-ಇಂದ್ರಿಯಗಳಿಂದ ಯೋಗಿಗಳು (ಫಲದಲ್ಲಿ) ಆಸಕ್ತಿಯನ್ನು ಬಿಟ್ಟು ಸತ್ವ (ಆತ್ಮ) ಶುದ್ಧಿಗಾಗಿ ಕರ್ಮ ಮಾಡುತ್ತಾರೆ.’ ಪ್ರಾರಬ್ಧಕರ್ಮದಂತೆ ಪಡೆದಿರುವ ದೇಹದಲ್ಲಿ ಮನಸ್ಸು, ವಾಕ್​ಶಕ್ತಿ, ಬುದ್ಧಿ ಇತ್ಯಾದಿಗಳು ಅಂಗಗಳಂತೆ ಕೆಲಸ ಮಾಡುತ್ತಿವೆ. ಯೋಗಿಯಾದವನು ಪ್ರಾರಬ್ಧಕರ್ಮಕ್ಕೆ ವಶವಾಗಿರುವವರೆಗೂ ಇವುಗಳ ಮೂಲಕ ಕರ್ಮ ಮಾಡುತ್ತಿರಬೇಕು. ಹದಿನೇಳನೇ ಅಧ್ಯಾಯದಲ್ಲಿ ಭಗವಂತ ಮೂರು ರೀತಿಯ ತಪಸ್ಸುಗಳನ್ನು ಹೇಳಿದ್ದಾನೆ. ದೇವ, ಬ್ರಾಹ್ಮಣ, ಗುರು, ಜ್ಞಾನಿಗಳ ಪೂಜೆಯೂ, ಶೌಚವೂ, ಆರ್ಜವವೂ (ಸರಳತೆ) ಬ್ರಹ್ಮಚರ್ಯ ಮತ್ತು ಅಹಿಂಸೆ ಇವು ಶಾರೀರಿಕ ತಪಸ್ಸು. ಉದ್ವೇಗಗಳಿಲ್ಲದ, ಸತ್ಯವೂ, ಪ್ರಿಯವೂ, ಹಿತವೂ ಆದ ವಾಕ್ಯವು ಮತ್ತು ಸ್ವಶಾಖೆಯ ಅಧ್ಯಯನವು ವಾಚಿಕ ತಪಸ್ಸು. ಮನಸ್ಸಿನ ಪ್ರಸನ್ನತೆ, ಸೌಮ್ಯಭಾವ (ಇತರರಿಗೆ ಅಭ್ಯುದಯವಾಗುವುದರಲ್ಲಿ ಮನಸ್ಸಿನ ಆಸೆ) ಮೌನ, (ಮಾತಿನ ಸಂಯಮ) , ಮನೋನಿರೋಧ ಭಾವಸಂಶುದ್ಧಿ (ಇತರರೊಡನೆ ವ್ಯವಹರಿಸುವಾಗ ಕಪಟತೆಯಿಲ್ಲದಿರುವುದು ಹಾಗೂ ಆತ್ಮವ್ಯತಿರಿಕ್ತವಾಗಿ ಆಲೋಚಿಸದಿರುವುದು) ಇವು ಮಾನಸಿಕ ತಪಸ್ಸು. ಪಂಚಜ್ಞಾನ ಹಾಗೂ ಕಮೇಂದ್ರಿಯಗಳಿಂದ ಕೆಲಸ ಮಾಡುವಾಗ ಯೋಗಿಗಳು ಮನಸ್ಸಿನ (ಆತ್ಮದ) ಶುದ್ಧಿಗಾಗಿ ಆಸಕ್ತಿಯನ್ನು ಬಿಟ್ಟು ಕರ್ಮ ಮಾಡುತ್ತಾರೆ. ಮನಸ್ಸು ಪೂರ್ಣ ಶುದ್ಧವಾದಾಗಲೇ ಮಾತ್ರ ಆತ್ಮದ ಕಡೆಗೆ ತಿರುಗಲು ಸಾಧ್ಯವಾಗುವುದು. ಸಂಗವಿದ್ದಲ್ಲಿ (ಕರ್ಮಫಲದಲ್ಲಿ) ಸಂಸಾರ ನಿಶ್ಚಿತ, ಸಂಸಾರದಿಂದ ಬಂಧನವೂ ನಿಶ್ಚಿತ. ಮೊದಲಿಗೆ ದುಷ್ಟಕರ್ಮ ತ್ಯಜಿಸಬೇಕು. ಸಂಯಮಕರ್ಮವನ್ನೂ ಬಿಡಬೇಕು. ಮೂರನೆಯದಾಗಿ ಪಾಲಿಗೆ ಬಂದ ಕರ್ತವ್ಯ, ನಿತ್ಯ ಹಾಗೂ ನೈಮಿತ್ತಿಕ ಕರ್ಮಗಳನ್ನು ಯಾವುದೇ ಆಸೆಗಳಿಲ್ಲದೆ ಮಾಡುತ್ತ, ಫಲವನ್ನು ಭಗವಂತನಿಗೆ ಸಮರ್ಪಿಸಬೇಕು. ಈ ಕ್ರಮದಲ್ಲಿ ಸಾಧನೆ ಮಾಡುವಾಗ ಆತ್ಮಶುದ್ಧಿಯಾಗಿ, ತಾನು ಆತ್ಮವಸ್ತುವೆಂಬ ಅರಿವಾಗಿ, ಅನುಭವವಾಗಿ ಜ್ಞಾನಮಾರ್ಗಕ್ಕೆ ಸಾಧಕನು ಅಣಿಯಾಗುವನು. ‘ಭಗವಂತ ಸದಾಚಾರದ ಮೂಲಕ ಮೋಕ್ಷ ಪಡೆಯುವ ವಿಧಾನವನ್ನು ತೋರಿಸುವನು. ಶರೀರದಿಂದ ಅನ್ನ-ಪಾನಾದಿಗಳನ್ನೂ ಮನಸ್ಸಿನಿಂದ ಧ್ಯಾನಾದಿಗಳನ್ನೂ (ಆತ್ಮವಸ್ತು, ವೇದಾಂತ, ಗುರುಗಳ ಪಾದದ ಮೇಲೆ) ಬುದ್ಧಿಯಿಂದ ತತ್ತ್ವ ನಿಶ್ಚಯಿಸುವುದನ್ನು ಇಂದ್ರಿಯಗಳಿಂದ ಶ್ರವಣ ಕೀರ್ತನ ಮಾಡುತ್ತ ಅವುಗಳ ಫಲತೊರೆದು ಕೇವಲ ಆತ್ಮ ಶುದ್ಧಿಗಾಗಿ ಮಾತ್ರ (ಮನಸ್ಸು) ಯೋಗಿಗಳು ಕರ್ಮ ಮಾಡುವರು’ ಎನ್ನುವರು ಜ್ಞಾನ ಹಾಗೂ ಭಕ್ತಿ ಮಿಶ್ರಣವಾಗಿ ವ್ಯಾಖ್ಯಾನ ಮಾಡಿರುವ ಶ್ರೀಧರಚಾರ್ಯರು.

ಯುಕ್ತಃ ಕರ್ಮಫಲಂ ತ್ಯಕ್ತಾ್ವ ಶಾಂತಿಮಾಪ್ನೋತಿ ನೈಷ್ಠಿಕೀಂ |

ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ || 5.12

‘(ಕರ್ಮ) ಯೋಗಿಯು ಕರ್ಮಫಲವನ್ನು ಬಿಟ್ಟು, ನಿಷ್ಠಾರೂಪವಾದ (ನಿಷ್ಠೆಯಿಂದ ಉಂಟಾಗುವ ಮೋಕ್ಷವೆಂಬ) ಶಾಂತಿಯನ್ನು ಪಡೆಯುವನು. ಯೋಗಿಯಲ್ಲದವನು (ಕರ್ಮಯೋಗದ ದೃಷ್ಟಿಯಿರದವನು ಮನಸ್ಸಮಾಧಾನವಿಲ್ಲದವನು) ಕಾಮಪ್ರೇರಣೆಯಿಂದ (ಆಸೆಯಿಂದ) ಫಲದಲ್ಲಿ ಆಸಕ್ತನಾಗಿ ಬಂಧಿಸಲ್ಪಡುತ್ತಾನೆ.’ ಈಗ ಪರಮಾತ್ಮ ಯೋಗಿಯಲ್ಲದವನ ಬಗ್ಗೆ ತಿಳಿಸುತ್ತಿದ್ದಾನೆ. ‘ಯುಕ್ತಃ’ ಎಂದರೆ ಏಕಾಗ್ರತೆ ಎಂದೂ ಅರ್ಥವಿದೆ. ಏಕಾಗ್ರತೆಯೆಂದರೆ ಮನಸ್ಸು ಪೂರ್ಣವಾಗಿ ಭಗವಂತನಲ್ಲಿಯೇ ನಿಂತಿರುವುದು. ಬಾಡಿಗೆದಾರ ಗೋಡೆಗೆ ಮೊಳೆ ಹೊಡೆದರೆ ಅದು ಮನೆಯ ಮಾಲೀಕನ ಎದೆಗೇ ಬಡಿದಂತೆ ಅನುಭವವಾಗುವುದು. ಆಗ ಜಗಳವಾಡಿ ನಿಲ್ಲಿಸುವನು. ಇದೇ ಮಮಕಾರ. ಅಹಂಕಾರ ಇರುವವರೆಗೂ ಬಂಧನ ಕಟ್ಟಿಟ್ಟ ಬುತ್ತಿ. ಅದೇ ಮನೆ ಬೇರೆಯವರದ್ದಾಗಿದ್ದರೆ ಅದು ಬಿದ್ದುಹೋದರೂ ಇವನಿಗೆ ಏನೂ ಆಗದು. ಯಾವ ಸಂಬಂಧವೂ ಇರದು. ಅರ್ಥಾತ್ ಅಹಂಕಾರಕ್ಕೂ ಮನಸ್ಸಿಗೂ ಗಾಢವಾದ ಸಂಬಂಧವಿದೆ. ಈ ಸಂಬಂಧವಿರದಿದ್ದರೆ ಬಂಧನವಿಲ್ಲ. ಸಂಬಂಧದಿಂದಲೇ ಬಂಧನ, ಅಹಂಕಾರ ಮಮಕಾರಗಳಿರದಿದ್ದರೆ ಯಾವುದೇ ಚಿಂತೆಯಿರದು. ಪ್ರತಿಯೊಂದು ಕರ್ಮವನ್ನೂ ಕೃಷ್ಣಾರ್ಪಣ ದೃಷ್ಟಿಯಿಂದ ಮಾಡಬೇಕು. ಅದರ ಆಸೆ, ಸಂಗ, ಫಲ ಎಲ್ಲವನ್ನೂ ಬಿಟ್ಟಾಗ ಸಹಜವಾಗಿ ಶಾಂತಿ ಲಭಿಸುವುದು. ನಿಜವಾದ ಶಾಂತಿ ಮೋಕ್ಷದಿಂದ ಮಾತ್ರ ಸಾಧ್ಯ. ಏಕಾಗ್ರತೆಯಿರದ ಆಸೆಬುರುಕನು ಕೆಲಸಗಳನ್ನು ಮಾಡುವಾಗಲೇ ಮತ್ತೂ ಆಸೆಗಳಿಗೆ ಬಲಿಯಾಗಿ ಎಲ್ಲ ಕರ್ಮಗಳಿಗೂ (ಕೆಲಸಗಳಿಗೂ) ಕೈಹಾಕಿ ಅತಿ ಫಲದಾಸೆಯಿಂದ ನಿರಂತರವಾಗಿ ಬಂಧಿಸಲ್ಪಡುವನು. ಆಸೆ ಈಡೇರಿದರೂ, ಈಡೇರದಿದ್ದರೂ ಆಧ್ಯಾತ್ಮಿಕ ದೃಷ್ಟಿಯಿಂದ ಎರಡೂ ಬಂಧನವೇ. ಆದ್ದರಿಂದ ಮನುಷ್ಯನು (ಸಾಧಕನು) ಅಯುಕ್ತನಾಗದೆ ಯುಕ್ತನಾಗಬೇಕು. ಫಲವಿರದ, ಮಾಡದಿದ್ದರೆ ಅಪಚಾರವಾಗುವ ಕರ್ತವ್ಯ, ನಿತ್ಯ ನೈಮಿತ್ತಿಕ ಕರ್ಮಗಳನ್ನು ಮಾತ್ರ ಭಗವರ್ದಪಿತ ಭಾವದಿಂದ ಶ್ರದ್ಧೆಯಿಂದ ಮಾಡಲೇಬೇಕು. ತನ್ಮೂಲಕ ಆತ್ಮಜ್ಞಾನವಾದಾಗ ಪರಮಶಾಂತಿ ದೊರೆಯುವುದು. ಇದಕ್ಕಾಗಿ ಮನಸ್ಸು ಕದಡಬಾರದು. ಆಸೆಗಳಿಂದ ರಹಿತವಾಗಿರಬೇಕು. ಇದ್ದಕ್ಕಿದ್ದಂತೆ ಮನ ಕದಡುವ ಆಸೆ ವಿಚಾರಗಳಿಂದ ವಿಚಲಿತರಾಗಿರಲು ಆಸೆಗಳನ್ನೇ ಪೂರ್ಣವಾಗಿ ಗೆಲ್ಲಬೇಕು. ಇದು ಕೇವಲ ಆತ್ಮಜ್ಞಾನದಿಂದ ಸಾಧ್ಯ ಎನ್ನುವುದನ್ನು ಭಗವಂತ ಭಗವದ್ಗೀತೆಯಲ್ಲಿ ಅನೇಕ ಬಾರಿ ಹೇಳಿರುವನು. ಒಂದೇ ಕರ್ಮವನ್ನು ಯುಕ್ತ ಹಾಗೂ ಅಯುಕ್ತರು ಮಾಡಿದರೂ ಯುಕ್ತರು ಮೋಕ್ಷ ಪಡೆದರೆ ಅಯುಕ್ತರು ಬಂಧನಕ್ಕೊಳಗಾಗುವರು. ಇದರ ಕಾರಣದ ವಿವೇಚನೆಯನ್ನೂ ಈ ಶ್ಲೋಕದಲ್ಲಿ ವಿಸ್ತಾರವಾಗಿ ಕಂಡಿದ್ದೇವೆ. ಅಂತಮುಖಿಯಾದ ಯುಕ್ತನಿಗೆ ಮೋಕ್ಷದ ನಿಜವಾದ ಶಾಂತಿ ಬಹಿಮುಖಿಯಾದ ಅಯುಕ್ತನಿಗೆ ಅಶಾಂತಿಯೇ ನಿಶ್ಚಿತ. ಈ ಎರಡೂ ಆದರ್ಶಗಳನ್ನು ಭಗವಂತ ತೋರಿಸಿದ್ದಾನೆ. ಆಯ್ಕೆಯ ವಿಚಾರದಲ್ಲಿ ವಿವೇಕದಿಂದ ವರ್ತಿಸಿ ಅಂತಮುಖಿಯಾದ ಯುಕ್ತರಾಗಬೇಕು. ಭಕ್ತಿಯೋಗದ ದೃಷ್ಟಿಯಿಂದ ಒಬ್ಬನೇ ಗುರು ಒಂದೇ ಇಷ್ಟದೇವತೆಯಿರಬೇಕು. ಒಂದೇ ಮಂತ್ರ, ಒಂದೇ ಸಾಧನಾಪಥವಿರಬೇಕು. ಪದೇಪದೆ ಬದಲಾಯಿಸಲಾಗದು.

(ನಿರೂಪಣೆ: ರಾಮಾಯಣ ಸುರೇಶ್ ಕುಮಾರ್)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...