More

    ಭಗವದ್ಗೀತೆ ಜ್ಞಾನವೆಂಬ ಬೆಳಕು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಮನುಷ್ಯನ ಜೀವನದಲ್ಲಿ ಭಗವದ್ಗೀತೆಯು ಅತ್ಯಂತ ಮಹತ್ವ ಪಾತ್ರ ವಹಿಸಿದೆ. ಅದು ಮನುಷ್ಯನ ಅಜ್ಞಾನ ಎಂಬ ಕತ್ತಲೆ ದೂರ ಮಾಡುವ ಜ್ಞಾನವೆಂಬ ಬೆಳಕಾಗಿದೆ ಎಂದು ಉಪನ್ಯಾಸಕ ಡಾ. ಶ್ರೀರಾಮ ಭಟ್ ಹೇಳಿದರು.
    ನಗರದ ಕೆ.ಎನ್.ಕೆ. ಬಾಲಕಿಯರ ಪ್ರೌಢ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಶ್ರೀಕೃಷ್ಣನು ಅರ್ಜುನನಿಗೆ ಗೀತೆ ಉಪದೇಶಿಸಿದ್ದು ನೆಪ ಮಾತ್ರ. ಸಮಸ್ತ ಮಾನವ ಕುಲದ ಮೇಲಿನ ಅನುಕಂಪದಿಂದ ಮಾನವ ಕುಲದ ಉದ್ಧಾರಕ್ಕಾಗಿ ಭಗವದ್ಗೀತೆಯ ಉಪದೇಶವಾಗಿದೆ. ಅಂತಹ ಭಗವದ್ಗೀತೆ ಪಠಣ ಮತ್ತು ಅಧ್ಯಯನ ಮಾಡುವುದರಿಂದ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದರು.
    ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಎನ್. ಜೋಶಿ ಮಾತನಾಡಿ, ಭಗವದ್ಗೀತೆಯ ಜ್ಞಾನವೆಂಬ ಅಮೃತ ಸವಿದವನೇ ಪರಮ ಭಾಗ್ಯಶಾಲಿ. ಈ ಕಾರಣಕ್ಕೆ ಎಲ್ಲರೂ ಭಗವದ್ಗೀತೆಯ ಅಧ್ಯಯನ ಮಾಡಬೇಕು ಎಂದರು.
    ಸಂಚಾಲಕ ಜಿ. ಆರ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುರಾ ಹೆಗಡೆ ಮತ್ತು ವಾಣಿ ಹಂದಿಗೋಳ ಭಗವದ್ಗೀತೆಯ ಹತ್ತನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು. ಆರ್. ಡಿ. ಕುಲಕರ್ಣಿ, ವಿ.ಎಂ. ಭಟ್, ರಾಜು ಪಾಟೀಲ ಕುಲಕರ್ಣಿ, ಸೂರ್ಯನಾರಾಯಣ ಭಟ್, ಎಸ್.ಎನ್. ಭಟ್, ಇತರರು ಇದ್ದರು.
    ಮಹೇಶ ಭಟ್ ಸ್ವಾಗತಿಸಿದರು. ಎಸ್. ಎಸ್. ಬಾಸೂರ ವಂದಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts