ಸಿದ್ಧಗಂಗಾ ಶ್ರೀಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಐಸಿಯುಗೆ ಶಿಫ್ಟ್​

ಚೆನ್ನೈ: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಶ್ರೀಗಳಿಗೆ ಶನಿವಾರ ಬೆಳಗ್ಗೆ ಚೆನ್ನೈನ ಡಾ. ರೇಲಾ ಇನ್​ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್​ನಲ್ಲಿ ಪಿತ್ತನಾಳದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶ್ರೀಗಳನ್ನು ಆಪರೇಷನ್​ ಥಿಯೇಟರ್​ನಿಂದ ಐಸಿಯುಗೆ ಶಿಫ್ಟ್​ ಮಾಡಲಾಗಿದೆ.

ಬೆಳಗ್ಗೆ ಡಾ. ಮೊಹಮ್ಮದ್​ ರೇಲಾ ನೇತೃತ್ವದ 8 ಕ್ಕೂ ಹೆಚ್ಚು ತಜ್ಞ ವೈದ್ಯರು ಶ್ರೀಗಳ ತಪಾಸಣೆ ನಡೆಸಿದ್ದರು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶ್ರೀಗಳು ಇನ್ನೆರಡು ಗಂಟೆಗಳಲ್ಲಿ ಅನಸ್ತೇಶಿಯಾ ಪ್ರಭಾವದಿಂದ ಹೊರಬರುತ್ತಾರೆ ಎಂದು ಬಿಜಿಎಸ್​ ಗ್ಲೋಬಲ್​ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಅವರು ತಿಳಿಸಿದ್ದಾರೆ.

ಸಿದ್ಧಗಂಗಾ ಶ್ರೀ ಚೆನ್ನೈನಲ್ಲಿ ಕ್ಷೇಮ

ಸರ್ಕಾರವೇ ಭರಿಸಲಿದೆ ಸಿದ್ದಗಂಗಾ ಶ್ರೀಗಳ ವೈದ್ಯಕೀಯ ವೆಚ್ಚ

Leave a Reply

Your email address will not be published. Required fields are marked *