More

  ಬಿಎಫ್‌ಸಿ ಬೋಯಿಕೇರಿ ತಂಡ ಚಾಂಪಿಯನ್

  ಸಿದ್ದಾಪುರ: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಅಮ್ಮತ್ತಿಯ ಫ್ರೌಢಶಾಲಾ ಮೈದಾನದಲ್ಲಿ ಇತ್ತೀಚೆಗೆ ಆರು ದಿನಗಳ ಕಾಲ ನಡೆದ ಕೊಡಗು ಜಿಲ್ಲಾ ಮಟ್ಟದ ನೋಂದಾಯಿತ ಫುಟ್ಬಾಲ್ ಕ್ಲಬ್‌ಗಳ ನಡುವಿನ ಲೀಗ್ ಪಂದ್ಯಾವಳಿಯಲ್ಲಿ ಬಿಎಫ್‌ಸಿ ಬೋಯಿಕೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 25 ಸಾವಿರ ರೂ. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

  ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡ ರನ್ನರ್ಸ್ ಪ್ರಶಸ್ತಿ ಪಡೆಯುವ ಮೂಲಕ 15 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಫೈನಲ್ ಪಂದ್ಯದ ಮುಖ್ಯ ತೀರ್ಪುಗಾರರಾಗಿ ಧೀರಜ್ ರೈ, ಸಹ ತೀರ್ಪುಗಾರರಾಗಿ ಇಬ್ರಾಹಿಂ, ಪವನ್, ದರ್ಶನ್, ಸುಕುಮಾರ್ ಕಾರ್ಯನಿರ್ವಹಿಸಿದರು.
  ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ವಹಿಸಿದ್ದರು.

  ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಕ್ರಿಸ್ಟೋಫರ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ದೀಪು ಮಾಚಯ್ಯ, ಲಿಜೇಶ್ ಅಮ್ಮತ್ತಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts