ಫೇಸ್​ಬುಕ್ ಹ್ಯಾಕರ್ಸ್ ಬಗ್ಗೆ ಎಚ್ಚರ: ಫೀಮೇಲ್ ತೋರ್ಸಿ ಇಮೇಲ್ ಹ್ಯಾಕ್! 

| ಕೀರ್ತಿನಾರಾಯಣ ಸಿ., 

ಬೆಂಗಳೂರು: ನಿಮ್ಮ ಫೇಸ್​ಬುಕ್ ಅಕೌಂಟ್​ಗೆ ಯಾರೋ ಚೆಂದದ ಹುಡುಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾಳೆಂದು ಓಕೆ ಮಾಡೋ ಮುನ್ನ ಇರಲಿ ಎಚ್ಚರ. ಏಕೆಂದ್ರೆ ಫೀಮೇಲ್ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಇಮೇಲ್ ಹ್ಯಾಕ್ ಮಾಡುವ ಮೋಸದ ಜಾಲ ಈಗ ದೇಶಾದ್ಯಂತ ಸಕ್ರಿಯವಾಗಿದೆ. ಹುಡುಗಿ ಫೋಟೋ ನೋಡಿ ಕೊಂಚ ಮೈಮರೆತರೂ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿ ಆಗುವುದು ಗ್ಯಾರಂಟಿ. ಸುಪ್ರೀಂಕೋರ್ಟ್ ನಿವೃತ್ತ ಸಿಜೆ ಅರ್.ಎಂ.ಲೋಧಾ ಅವರ ಸಹೋದ್ಯೋಗಿ, ನಿವೃತ್ತ ಜಡ್ಜ್ ಬಿ.ಪಿ.ಸಿಂಗ್​ರ ಇ-ಮೇಲ್ ಹ್ಯಾಕ್ ಮಾಡಿ 1 ಲಕ್ಷ ರೂ. ವಂಚಿಸಿದ ಪ್ರಕರಣದ ಬೆನ್ನಲ್ಲೇ ಸೈಬರ್ ಹ್ಯಾಕರ್​ಗಳ ಸರಣಿ ವಂಚನೆ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ.

ಮೇಲ್​ಗೆ ಕನ್ನ ಹಾಕ್ತಾರೆ: ಹ್ಯಾಕರ್​ಗಳು ಚೆಂದದ ಹುಡುಗಿಯ ಫೋಟೋ ಅಪ್​ಲೋಡ್ ಮಾಡಿ ಯಾವುದೋ ಹೆಸರಲ್ಲಿ ಫೇಸ್​ಬುಕ್​ನಲ್ಲಿ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ಕೆಲವೇ ಕ್ಷಣದಲ್ಲಿ ಮೆಸೆಂಜರ್ ಮೂಲಕ ಹಾಯ್ ಎಂದು ಸಂದೇಶ ಕಳುಹಿಸಿ, ತಮ್ಮ ಬಗ್ಗೆ ಒಂದಷ್ಟು ಹೈ ಪ್ರೊಫೈಲ್ ಮಾಹಿತಿ ಹಂಚಿಕೊಂಡು ಆಕರ್ಷಿಸುತ್ತಾರೆ.

ನಂತರ ಇಮೇಲ್​ನಲ್ಲಿ ನಮ್ಮ ಸಂಪರ್ಕ ಮುಂದುವರಿಸೋಣ. ಅಲ್ಲಿ ಪರಸ್ಪರ ಹೆಚ್ಚು ತಿಳಿದುಕೊಳ್ಳಬಹುದು ಹಾಗೂ ಕೆಲ ಫೋಟೋಗಳನ್ನೂ ಹಂಚಿಕೊಳ್ಳಬಹುದೆಂದು ಹೇಳುತ್ತಾರೆ. ಅಥವಾ ತಾನು ನಿಮ್ಮ ದೇಶಕ್ಕೆ ಬರುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ರ್ಚಚಿಸಬೇಕಿದ್ದು ಇಮೇಲ್​ನಲ್ಲಿ ಸಂರ್ಪಸಿ ಎಂದು ಇಮೇಲ್ ವಿಳಾಸ ಕೊಟ್ಟು ಕಣ್ಮರೆ ಆಗುತ್ತಾರೆ. ಒಂದು ವೇಳೆ ಅವರು ಕೊಟ್ಟ ಇಮೇಲ್ ವಿಳಾಸಕ್ಕೆ ನಿಮ್ಮ ಇಮೇಲ್​ನಿಂದ ಸಂದೇಶ ಕಳುಹಿಸಿ ಸಂಪರ್ಕ ಸಾಧಿಸಿದರೆ ಇ ಮೇಲ್ ಖಾತೆ ಹ್ಯಾಕ್ ಮಾಡುತ್ತಾರೆ. ಆಧಾರ್ ನಂಬರ್​ನಿಂದ ಹಿಡಿದು ಬ್ಯಾಂಕ್ ಖಾತೆಯವರೆಗೆ ಎಲ್ಲ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಹ್ಯಾಕರ್​ಗಳ ಕೈ ಸೇರುತ್ತದೆ. ಇಂತಹ ಜಾಲದ ಬಗ್ಗೆ ಎಚ್ಚರವಿರಲಿ. ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಸೈಬರ್ ಕ್ರೖೆಂ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಸುರಕ್ಷತೆ ಇಲ್ಲದ ವ್ಯಾಲೆಟ್: ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಅಮೇಜಾನ್ ಪೇ ಸೇರಿ ಹತ್ತಾರು ಮೊಬೈಲ್ ವ್ಯಾಲೆಟ್​ಗಳಿವೆ. ಈ ಯಾವ ಕಂಪನಿಗಳು ಸಹ ಗ್ರಾಹಕರನ್ನು ನೇರವಾಗಿ ಭೇಟಿಯಾಗಿ ಕೆವೈಸಿ (ಗ್ರಾಹಕರ ಗುರುತು ದಾಖಲೆ) ಪಡೆಯುವುದಿಲ್ಲ. ಬದಲಾಗಿ ಗ್ರಾಹಕರು ಬ್ಯಾಂಕ್​ಗಳಿಗೆ ನೀಡಿರುವ ಆಧಾರ್ ನಂಬರ್ ಹಾಗೂ ಇತರ ಮಾಹಿತಿ ಬಳಸಿಕೊಂಡು ಸೇವೆ ಒದಗಿಸುತ್ತವೆ. ಗೂಗಲ್ ಆಪ್​ಗೆ ಹೋಗಿ ಮೊಬೈಲ್ ವ್ಯಾಲೆಟ್​ಗೆ ಸಂಬಂಧಿಸಿದ ಆಪ್ ಡೌನ್​ಲೋಡ್ ಮಾಡಿಕೊಂಡು ಆತನ/ಆಕೆಯ ಮೊಬೈಲ್ ನಂಬರ್ ನಮೂದಿಸಿದರೆ ಸಾಕು ಆಧಾರ್ ನಂಬರ್​ನಿಂದ ಬ್ಯಾಂಕ್ ಖಾತೆವರೆಗೆ ಎಲ್ಲ ಮಾಹಿತಿ ಸಿಗುತ್ತದೆ.

ಯಾವ ರೀತಿ ವಂಚಿಸುತ್ತಾರೆ?

  • ಕಷ್ಟಕ್ಕೆ ಸಿಲುಕಿದ್ದೇನೆ. ತುರ್ತು ಹಣದ ಅಗತ್ಯವಿದೆ ಎಂದು ನಿಮ್ಮ ಸಂಪರ್ಕದಲ್ಲಿರುವವರಿಗೆ ಮೇಲ್ ಕಳುಹಿಸಿ ವಂಚನೆ
  • ಅಶ್ಲೀಲ ಸಂದೇಶ ಅಥವಾ ವಿಡಿಯೋ ಕಳುಹಿಸಿ, ಅದನ್ನು ಪ್ರಸಾರ ಮಾಡುವುದಾಗಿ ಹಣಕ್ಕಾಗಿ ಬ್ಲಾ್ಯಕ್​ವೆುೕಲ್ ಮಾಡುವ ಸಾಧ್ಯತೆ
  • ಕಂಪನಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಅಥವಾ ಸಹಭಾಗಿತ್ವ ಕಂಪನಿಗಳಿಗೆ ಮೇಲ್ ಕಳುಹಿಸಿ ಬಾಕಿ/ಮುಂಗಡ ಹಣ ಹೆಸರಲ್ಲಿ ಮೋಸ
  • ಎಲ್ಲ ಆನ್​ಲೈನ್ ವಹಿವಾಟಿಗೆ ಇಮೇಲ್ ಲಿಂಕ್ ಆಗಿರುತ್ತದೆ. ನೆಟ್ ಬ್ಯಾಂಕಿಂಗ್ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು.
  • ಇತರ ಇಮೇಲ್ ಖಾತೆಗಳು ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳ ಮಾಹಿತಿಯನ್ನು ಪಡೆಯಬಹುದು

ಇದನ್ನು ಅನುಸರಿಸಿ..

  • ಅಪರಿಚಿತರು ಕೊಡುವ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಬೇಡಿ
  • ಅಪರಿಚಿತರಿಂದ ಬರುವ ಸಂದೇಶ ಗಳಲ್ಲಿರುವ ಲಿಂಕ್​ಅನ್ನು ಕ್ಲಿಕ್ಕಿಸಬೇಡಿ
  • ವೈಯಕ್ತಿಕ/ವ್ಯವಹಾರ ಮೇಲ್ ಅಲ್ಲದಿದ್ದರೆ ಸ್ಪ್ಯಾಮ್ ಅಥವಾ ನಿರ್ಬಂಧಿಸಿ
  • http, URL ಇಲ್ಲದ ವೆಬ್​ಸೈಟ್​ಗಳನ್ನು ತೆಗೆಯಬೇಡಿ
  • ಐಡಿ, ಪಾಸ್​ವರ್ಡ್, ಒಟಿಪಿ, ಯುಆರ್​ಎನ್ ಯಾರಿಗೂ ಕೊಡಬೇಡಿ.

ಅಪರಿಚಿತ ಇಮೇಲ್, ಪಾಪ್-ಅಪ್, ಎಸ್ಸೆಮ್ಮೆಸ್​ಗಳಿಗೆ ಯಾವ ಕಾರಣಕ್ಕೂ ಪ್ರತಿಕ್ರಿಯಿಸಬೇಡಿ. ಹ್ಯಾಕ್ ಮಾಡಿ ವಂಚಿಸುವ ಜಾಲ ಇರಬಹುದು. ಇಂಟರ್​ನೆಟ್ ಬ್ಯಾಂಕಿಂಗ್ ಮಾಡುವಾಗಲೂ ಎಚ್ಚರಿಕೆ ಇರಲಿ.

| ಹಿರಿಯ ಅಧಿಕಾರಿ ಸೈಬರ್ ಘಟಕ

Leave a Reply

Your email address will not be published. Required fields are marked *