ಕವಿತಾಳ: ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಕಠಿಣ ಪರಿಶ್ರಮದಿಂದ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಿಕ್ಷಕ ಶರಣಬಸವ ಹೇಳಿದರು.
ಇದನ್ನೂ ಓದಿ: ಗುರುಗಳು ತೋರಿದ ಮಾರ್ಗದಿಂದ ಉತ್ತಮ ಸ್ಥಾನ
ಸಮೀಪದ ಹಾಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಮಾತನ್ನು ಚಾಚೂ ತಪ್ಪದೆ ಪಾಲಿಸಬೇಕು.
ಪಾಲಕರ ಪಾದಪೂಜೆ ಮೂಲಕ ಅವರ ಹರ್ಷಕ್ಕೆ ಕಾರಣರಾಗಿದ್ದಿರಿ. ಮುಂದಿನ ದಿನದಲ್ಲಿ ಉತ್ತಮ ಅಂಕ ಪಡೆದು ಉನ್ನತ ಸ್ಥಾನ ಪಡೆಯುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಯಂಕೋಬ ದೇವಪುರ ಮಾತನಾಡಿ, ಕಳೆದ ವರ್ಷ ಶಾಲೆ ಉತ್ತಮ ಫಲಿತಾಂಶ ಪಡೆದಿತ್ತು.
ಈ ಬಾರಿಯು ಉತ್ತಮ ಅಂಕ ಪಡೆದು ಶಾಲೆ, ಪಾಲಕರಿಗೆ ಕೀರ್ತಿ ತರಬೇಕು ಎಂದರು. ಬಳಿಕ ವಿದ್ಯಾರ್ಥಿನಿಯರಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ನಡೆಯಿತು. ಜಂಗಮರಹಳ್ಳಿಯ ದಂಡಗುಂಡಪ್ಪ ತಾತ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಕವಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಭಾಸ್‌ಸಿಂಗ್,
ಪ್ರಾಚಾರ್ಯ ಚನ್ನಬಸಪ್ಪ, ಪಾಲಕರಾದ ರಮೇಶ, ಶರಣಮ್ಮ, ಸಿಬ್ಬಂದಿ ರೇವಣಸಿದ್ದಪ್ಪ, ವೆಂಕಟೇಶ, ವೀರಯ್ಯ, ಶರಣಬಸವ, ಶರಣಮ್ಮ, ಸುನೀತಾ, ಅಚ್ಚಮ್ಮ, ಶಾಂತಮ್ಮ, ರತ್ನಮ್ಮ, ವಿದ್ಯಾಶ್ರೀ, ಸೌಮ್ಯಾ, ಉಪನ್ಯಾಸಕ ಸಿದ್ಧಾರ್ಥ ಪಾಟೀಲ್ ಇತರರಿದ್ದರು.