More

  ಸ್ಥಳೀಯರ ಸಹಕಾರವಿದ್ದರೆ ಉತ್ತಮ ಶಿಕ್ಷಣ

  ಸಾಗರ: ಸೇವೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಖಾಸಗಿ ವಿದ್ಯಾಸಂಸ್ಥೆಗಳಿಗೆ ಸ್ಥಳೀಯರ ಸಹಕಾರ ಸಿಕ್ಕರೆ ಉತ್ತಮ ಶಿಕ್ಷಣ ಒದಗಿಸಲು ಅನುಕೂಲವಾಗುತ್ತದೆ ಎಂದು ವರದಪುರ ಶ್ರೀಧರ ಮಹಾಮಂಡಲ ನಿರ್ದೇಶಕ ಸ್ವಾಮಿದತ್ತ ಹಕ್ರೆ ಅಭಿಪ್ರಾಯಪಟ್ಟರು.

  ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಇಕ್ಕೇರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯೆಯಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎನ್ನುವ ಆಶಯದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಯಿತು ಎಂದು ತಿಳಿಸಿದರು.
  ಶಿಕ್ಷಣಾಧಿಕಾರಿ ಕೆ.ಆರ್.ಬಿಂಬಾ ಮಾತನಾಡಿ, ಶಿಕ್ಷಕರ ಸಮರ್ಪಣಾ ಭಾವದಿಂದ ಮಕ್ಕಳಿಗೆ ಅತಿಹೆಚ್ಚಿನ ಜ್ಞಾನ ಬರುತ್ತದೆ. ವಿದ್ಯಾಸಂಸ್ಥೆಯು ಪೂರಕವಾಗಿ ಕೆಲಸ ಮಾಡಿದಾಗ ಫಲಿತಾಂಶ ಅತ್ಯುತ್ತಮವಾಗಿರುತ್ತದೆ. ಇಕ್ಕೇರಿ ವಿದ್ಯಾಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
  ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಟಿ.ರತ್ನಾಕರ ಮಾತನಾಡಿ, ಐದು ದಶಕಗಳಿಂದ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಜನರ ಆದ್ಯತೆಗೆ ಅನುಸಾರ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಅಗತ್ಯ ಪೂರೈಸಲು ಸದ್ಗುರು ಸ್ಕೂಲ್ ಆಫ್ ವಿಷನ್ ಆರಂಭಿಸಲಾಗಿದೆ. ಸೇವೆಯೇ ನಮ್ಮ ಪ್ರಮುಖ ಉದ್ದೇಶ ಎಂದು ತಿಳಿಸಿದರು.
  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಇಕ್ಕೇರಿ ಪ್ರೌಢಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ರಾಮಚಂದ್ರ ಜನ್ನೆ, ದಾನಿಗಳಾದ ದೇವಕಮ್ಮ, ಭಾರತಿ ಜಿ. ಹೆಗಡೆ, ಇಕ್ಕೇರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ರಜನೀಶ್, ಎಸ್.ಜಿ.ಶ್ರೀಕಾಂತ್, ಉಮೇಶ್, ಬಿ.ಸಿ.ಮಮತಾ, ಜೆ.ಆರ್.ವೆಂಕಟೇಶ್, ರಾಮಚಂದ್ರ ಆರ್. ಹೆಗಡೆ ಇದ್ದರು.

  See also  ಚಂದ್ರಯಾನ -3 ಯಶಸ್ವಿ ಉಡಾವಣೆ: ಹೊಸ ಮೈಲಿಗಲ್ಲು ಅಂಬಾರಾಯ ಅಷ್ಠಗಿ ಶ್ಲಾಘನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts