ಬೈಲಹೊಂಗಲ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಾ ಅಂಗಡಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರು ಶಿಕ್ಷಣದೊಂದಿಗೆ ಉದ್ಯೋಗ ಪಡೆಯಲು ಬೇಕಾಗುವ ವಿವಿಧ ಕೌಶಲ ಕಲಿತುತೊಂಡು ಜೀವನ ಕಟ್ಟಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು. ಪ್ರಾಚಾರ್ಯ ಬಿ.ಕೆ. ಮದವಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಿಂದ ಬಿಸಿಎ, ಬಿಎಸ್‌ಸಿ ವರ್ಗಗಳು ಪ್ರಾರಂಭವಾಗಿದ್ದು. ಮುಂದಿನ ವರ್ಷ ಎಕಾಂ (ಪಿಜಿ) ಕೋರ್ಸ್ ಪ್ರಾರಂಭಿಸಲಾಗುವುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಸನಸಾಬ್ ಗೊರವನಕೊಳ್ಳ ಮಾತನಾಡಿದರು. ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾಧಕ ತಂಡಕ್ಕೆ ಸನ್ಮಾನಿಸಲಾಯತು. ಸಾಂಸ್ಕತಿಕ ಕಾರ್ಯಕ್ರಮ ಜರುಗಿದವು. ಸಿಡಿಸಿ ಸದಸ್ಯರಾದ ಆನಂದ ವಾಲಿ, ಶಿವಕುಮಾರ ಹಂಪನ್ನವರ, ಬಸವರಾಜ ಕಿತ್ತೂರ ಸಂಗಪ್ಪ ಕಾದ್ರೋಳ್ಳಿ ಹಾಗೂ ಜಯಶ್ರೀ ಮತ್ತಿಕೊಪ್ಪ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ.ಎಂ.ವೈ. ಹಿತಾರಗೌಡರ, ಜಡ್.ಎಂ. ನನ್ನೆ, ವಿದ್ಯಾರ್ಥಿ ಪ್ರತಿನಿಧಿ ಮಹಾದೇವಿ ಛಬ್ಬಿ, ಕ್ರೀಡಾ ಸಂಚಾಲಕ ಬಿ.ಸಿ. ಹಾರ್ಲಾಪೂರ, ಪ್ರೊ.ಕೆ.ಟಿ. ತಿಪ್ಪೇಸ್ವಾಮಿ ಇತರರಿದ್ದರು.