20.4 C
Bangalore
Monday, December 9, 2019

ಪ್ರತಿವಾದಿ ಭಯಂಕರ ರಾಮ್ ​ಜೇಠ್ಮಲಾನಿ ಇನ್ನಿಲ್ಲ: ಇಂದಿರಾ ಹಂತಕರ ಪರ ವಕಾಲತು, ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ವಕೀಲ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ನವದೆಹಲಿ: ಹೆಸರಾಂತ ನ್ಯಾಯವಾದಿ, ಕೇಂದ್ರದ ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ ಭಾನುವಾರ ಬೆಳಗ್ಗೆ 7.45ರ ಸುಮಾರಿಗೆ ದೆಹಲಿಯಲ್ಲಿ ವಿಧಿವಶರಾದರು. ಇನ್ನು ಆರು ದಿನಗಳಲ್ಲಿ ಅವರಿಗೆ 96 ವರ್ಷ ತುಂಬುತ್ತಿತ್ತು. ಜೇಠ್ಮಲಾನಿಯವರ ಅಂತ್ಯಕ್ರಿಯೆ ಲೋಧಿ ರಸ್ತೆಯ ಚಿತಾಗಾರದಲ್ಲಿ ಭಾನುವಾರ ಸಂಜೆ ನೆರವೇರಿತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕೆಲವು ತಿಂಗಳಿಂದ ಅಸ್ವಸ್ಥರಾಗಿದ್ದರು ಎಂದು ಪುತ್ರ ಮಹೇಶ್ ಜೇಠ್ಮಲಾನಿ ತಿಳಿಸಿದ್ದಾರೆ. ಜೇಠ್ಮಲಾನಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು. ಮಗಳು ರಾಣಿ ಮತ್ತೊಬ್ಬ ಪುತ್ರ ಜನಕ್ ಮೃತಪಟ್ಟಿದ್ದಾರೆ. ಮಹೇಶ್ ವಕೀಲರಾಗಿದ್ದು, ಮತ್ತೊಬ್ಬ ಪುತ್ರಿ ಶೋಭಾ ಅಮೆರಿಕದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಶೋಕ: ಜೇಠ್ಮಲಾನಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಅನೇಕ ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅನೇಕ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಸಂತಾಪ ಸೂಚಿಸಿದ್ದಾರೆ. ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದು, ಜೇಠ್ಮಲಾನಿ ನ್ಯಾಯಾಂಗ ಮತ್ತು ಸಂಸತ್ತಿನಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಅದ್ವಿತೀಯ. ತಮ್ಮ ಅಭಿಪ್ರಾಯವನ್ನು ಖಚಿತವಾಗಿ ಮತ್ತು ನಿರ್ಭೀತಿಯಿಂದ ವ್ಯಕ್ತಪಡಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕ ವಿಷಯಗಳ ಬಗ್ಗೆ ಅವರಿಗೆ ಅಪಾರ ಕಳಕಳಿ ಇತ್ತು. ಕಾನೂನಿನ ಪಾಂಡಿತ್ಯ, ಅಪಾರ ಬುದ್ಧಿವಂತಿಕೆ, ವಾಕ್ಚಾತುರ್ಯದ ಹಿರಿಯ ನ್ಯಾಯವಾದಿಯನ್ನು ದೇಶ ಕಳೆದುಕೊಂಡಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಹೇಳಿದ್ದಾರೆ. ಕಾನೂನು ಪಂಡಿತ, ದೇಶಭಕ್ತ ಜೇಠ್ಮಲಾನಿ ಇಳಿ ವಯಸ್ಸಿನಲ್ಲೂ ವಕೀಲಿಕೆಯಲ್ಲಿ ಸಕ್ರಿಯರಾಗಿದ್ದರು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಜೇಠ್ಮಲಾನಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಕಾನೂನು ಸಂಸ್ಥೆಯಾಗಿದ್ದವರು ಜೇಠ್ಮಲಾನಿ, ಮತ್ತೊಬ್ಬ ಜೇಠ್ಮಲಾನಿಯನ್ನು ನಾವು ಕಾಣಲು ಬಹುಶಃ ಅಸಾಧ್ಯ ಎಂದು ಅನೇಕ ವಕೀಲರು, ರಾಜಕೀಯ ನಾಯಕರು ಹೇಳಿದ್ದಾರೆ. ದೇಶಾದ್ಯಂತ ವಕೀಲರ ಸಂಘಗಳು ಸಂತಾಪ ಸೂಚಿಸಿವೆ.

ಪಾಕ್​ನ ಸಿಂಧ್ ಪ್ರಾಂತ್ಯದಲ್ಲಿ ಜನನ

ವಿಕ್ಷಿಪ್ತ ಮನೋಭಾವ. ಇಡೀ ಸಮಾಜ ಒಪ್ಪದಿದ್ದುದು ಇವರಿಗೆ ಆಪ್ಯಾಯಮಾನ. ಆ ಬಗ್ಗೆ ಸಮಾಜವನ್ನೂ ಒಪ್ಪಿಸುತ್ತೇನೆಂಬ ಹುಂಬತನ. ಯಾರು ಏನೇ ಅನ್ನಲಿ ತನಗೆ ಸಂಬಂಧವೇ ಇಲ್ಲವೆಂಬಂತೆ ಮುನ್ನುಗ್ಗುವ ದಾರ್ಷ್ಯr. ಸುಳ್ಳನ್ನೂ ನಿಜಗೊಳಿಸುವ ಚಾಲಾಕಿತನ-ಇದಿಷ್ಟೂ ಒಟ್ಟು ಸೇರಿದರೆ ಆಗುವುದೇ ರಾಮ್ ಜೇಠ್ಮಲಾನಿ. ಹೀಗೆ ಪದಗಳಲ್ಲಿ ಅವರನ್ನು ಹಿಡಿದಿಡುವುದೇ ಕಷ್ಟದ ಕೆಲಸ. ರಾಮ್ ಜೇಠ್ಮಲಾನಿ ಹುಟ್ಟಿದ್ದು 1923 ರ ಸೆಪ್ಟೆಂಬರ್ 14 ರಂದು. ಈಗಿನ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಶಿಕಾರ್​ಪುರ್ ಮೂಲಸ್ಥಳ. ಅಲ್ಲಿ ಖ್ಯಾತಿ ಪಡೆದಿದ್ದ ಜೇಠ್ಮಲ್ ಕುಟುಂಬಕ್ಕೆ ಸೇರಿದವರಾದ್ದರಿಂದ ಜೇಠ್ಮಲಾನಿ ಎಂಬುದು ಇವರ ಹೆಸರಿನೊಂದಿಗೆ ಸೇರಿಕೊಂಡಿತು. 13ನೇ ವರ್ಷದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, 17 ನೇ ವಯಸ್ಸಿಗೆ ಎಲ್​ಎಲ್​ಬಿ ಪದವಿ ಪಡೆದರು. ಆಗ ವಕೀಲರಾಗಿ ಕೆಲಸ ಮಾಡಲು 21 ವರ್ಷ ಆಗಬೇಕು ಎಂಬ ನಿಯಮ ಇತ್ತಾದರೂ ಯಾವುದೋ ವಿಶೇಷ ಪರಿಗಣನೆ ಮೇರೆಗೆ ರಾಮ್ ಜೇಠ್ಮಲಾನಿ 18ನೇ ವಯಸ್ಸಿಗೇ ವಕೀಲ ವೃತ್ತಿಯನ್ನು ಆರಂಭಿಸಿದರು.

ವಿಭಜನೆಗೆ ಮುನ್ನ ಪಾಕಿಸ್ತಾನದಲ್ಲಿ ಉಪನ್ಯಾಸಕರಾಗಿ ಕೆಲಸ. ನಂತರ ಎ.ಕೆ. ಬ್ರೋಹಿ ಎಂಬುವರೊಂದಿಗೆ ಕೂಡಿ ಕರಾಚಿಯಲ್ಲಿ ಕಾನೂನು ಸಂಸ್ಥೆ ಆರಂಭಿಸಿದರು. ಭಾರತ ವಿಭಜನೆ ನಂತರ ಬೋಧಿ ಎಂಬುವರ ಸಲಹೆ ಮೇರೆಗೆ 1948 ರಲ್ಲಿ ಜೇಠ್ಮಲಾನಿ ಭಾರತಕ್ಕೆ ವಲಸೆ ಬಂದರು.

1947ರಲ್ಲಿ 18 ರ ಹರೆಯದಲ್ಲಿ ದುರ್ಗಾ ಅವರೊಡನೆ ವಿವಾಹ. ನಂತರ ವಕೀಲರಾಗಿದ್ದ ರತ್ನಾ ಶೆಹಾನಿ ಎಂಬುವರೊಂದಿಗೂ ಗುಟ್ಟಾಗಿ ಮದುವೆ. ಮೊದಲ ಪತ್ನಿ ದುರ್ಗಾ ಅವರಿಗೆ ರಾಣಿ, ಶೋಭಾ ಮತ್ತು ಮಹೇಶ್ ಎಂಬ ಮೂರು ಮಕ್ಕಳು. ರಾಣಿ ಮತ್ತು ಮಹೇಶ್ ವಕೀಲರಾಗಿದ್ದಾರೆ. ರತ್ನಾ ಶೆಹಾನಿ ಅವರಿಗೆ ಜನಕ್ ಎಂಬ ಒಬ್ಬ ಮಗ.

ಮಹತ್ವದ ಪ್ರಕರಣಗಳು

 • ಕೆ.ಎಂ.ನಾನಾವತಿ ಮತ್ತು ಮಹಾರಾಷ್ಟ್ರ ಸರ್ಕಾರ ವಿರುದ್ಧದ ಪ್ರಕರಣ (ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಪ್ರಿಯಕರನ ಹತ್ಯೆ ಪ್ರಕರಣ).
 • ಬೊಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿಗೆ ದಿನಕ್ಕೆ 10 ಪ್ರಶ್ನೆ ಹಾಕುತ್ತಿದ್ದ ಜೇಠ್ಮಲಾನಿ.
 • ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳ ಪರ ವಕಾಲತ್ತು.
 • ಬಹುಕೋಟಿ ಷೇರು ಹಗರಣದಲ್ಲಿ ಹರ್ಷದ್ ಮೆಹ್ತಾ ಮತ್ತು ಕೇತನ್ ಪಾರೇಖ್ ಪರ ವಾದ.
 • ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ದೆಹಲಿ ವಿವಿ ಪ್ರೊ.ಗಿಲಾನಿ ಪರ ಲಾಯರ್.
 • ಜೆಸ್ಸಿಕಾ ಲಾಲ್ ಹತ್ಯೆ ಪ್ರಮುಖ ಆರೋಪಿ ಮನು ಶರ್ಮಾ ಪರ ವಕಾಲತ್ತು.
 • ಯುಪಿಎ-1 ಆಡಳಿತದಲ್ಲಿ ವಿದೇಶದಲ್ಲಿರುವ ಕಾಳಧನ ವಿರುದ್ಧ ಸುಪ್ರೀಂಕೋರ್ಟ್​ಗೆ ಪಿಐಎಲ್.
 • ಹವಾಲಾ ಪ್ರಕರಣದಲ್ಲಿ ಎಲ್.ಕೆ. ಆಡ್ವಾಣಿ ಪರ ವಕೀಲಿಕೆ.
 • ಸೊಹ್ರಾಬುದ್ದೀನ್ ಶೇಖ್ ಎನ್​ಕೌಂಟರ್ ಪ್ರಕರಣದಲ್ಲಿ ಅಮಿತ್ ಷಾ ಪರ ಲಾಯರ್.
 • ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಪರ ವಾದ.
 • ಸ್ಪೆಕ್ಟ್ರಂ 2-ಜಿ ಹಗರಣದಲ್ಲಿ ಕರುಣಾನಿಧಿ ಮಗಳು ಕನಿಮೋಳಿ ಪರ ವಕಾಲತ್ತು.
 • ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಪರ ವಕೀಲಿಕೆ.
 • ಸುಪ್ರೀಂಕೋರ್ಟ್​ನಲ್ಲಿ ನಟ ಸಂಜಯ್ ದತ್​ಗೆ ಜಾಮೀನು ದೊರಕಿಸಿಕೊಟ್ಟಿದ್ದ ಜೇಠ್ಮಲಾನಿ.
 • ಭೂಗತ ದೊರೆ ಹಾಜಿಮಸ್ತಾನ್ ಪರ ವಕಾಲತ್ತು.
 • ರಾಮಾವತಾರ್ ಜಗ್ಗಿ ಕೊಲೆ ಪ್ರಕರಣದ ಅಮಿತ್ ಜೋಗಿ (ಅಜಿತ್ ಜೋಗಿ ಮಗ) ಲಾಯರ್.
 • ಮಾನಹಾನಿ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಪರ ವಾದ.

ರಾಜ್ಯದಲ್ಲಿಯೂ ವಾದ ಮಂಡನೆ

ಅಕ್ರಮ ಆಸ್ತಿ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರವಾಗಿ ಕರ್ನಾಟಕ ಹೈಕೋರ್ಟ್​ನಲ್ಲಿ ಜೇಠ್ಮಲಾನಿ ವಾದ ಮಂಡಿಸಿದ್ದರು. ಡಿನೋಟಿಫಿಕೇಶನ್, ಗಣಿಗಾರಿಕೆ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಹೈಕೋರ್ಟ್​ನಲ್ಲಿ ವಾದ ಮಾಡಿದ್ದರು. ಬಿಎಸ್​ವೈ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದರು.

ಪ್ರಮುಖ ವಿವಾದಗಳು …

 • ‘ನಾನೊಬ್ಬ ವಕೀಲ. ಯಾವುದೇ ವ್ಯಕ್ತಿ ಅಥವಾ ಪ್ರಸಂಗದ ಬಗ್ಗೆ ಜನರಿಗೆ ಅನ್ನಿಸಿದ್ದೇ ನನಗೂ ಅನ್ನಿಸುವುದಾದರೆ ಅಥವಾ ಜನರ ದೃಷ್ಟಿಕೋನದಿಂದಲೇ ನಾನೂ ನೋಡುವುದಾದರೆ ಅದು ವಕೀಲ ವೃತ್ತಿಗೆ ಬಗೆವ ದ್ರೋಹ’ ಎಂದು ಜೇಠ್ಮಲಾನಿ ಹೇಳಿದ್ದರು. ಮಾಜಿ ಪ್ರಧಾನಿ ಇಂದಿರಾ ಹಂತಕರ ಪರವಾಗಿ ಅವರು ವಕಾಲತ್ತು ವಹಿಸಿದ್ದರು. 1989 ಜನವರಿ 6ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯ ಆದೇಶಿಸಿತು. ಈ ಸಂದರ್ಭದಲ್ಲಿ ಜೇಠ್ಮಲಾನಿ ಅಪರಾಧಿಗಳ ಪರವಾಗಿ ಸ್ವಪ್ರೇರಿತ ಅರ್ಜಿ ಸಲ್ಲಿಸಿದರು. ಇದರಿಂದಾಗಿ ಇಡೀ ದೇಶ ಜೇಠ್ಮಲಾನಿ ವಿರುದ್ಧ ಕಿಡಿಕಾರಿತ್ತು. ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಆದರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಯಿತು.
 • ಸವೋಚ್ಚ ನ್ಯಾಯಾಲಯ 2011 ರ ಸೆಪ್ಟೆಂಬರ್ 9 ಕ್ಕೆ ರಾಜೀವ್​ಗಾಂಧಿ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಅಷ್ಟರಲ್ಲಿ ರಾಷ್ಟ್ರಪತಿ ಕ್ಷಮಾದಾನವನ್ನು ನಿರಾಕರಿಸಿದ್ದರು. ಇಂತಹ ಸಂದರ್ಭದಲ್ಲೂ ಜೇಠ್ಮಲಾನಿ ಅಪರಾಧಿ ಪರ ವಾದ ಮಾಡಲು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆಗಸ್ಟ್ 30 ರಂದು ಅವರು ವಾದ ಮಂಡಿಸಿದರು. ಇದಕ್ಕೆ ಮನ್ನಣೆ ನೀಡಿದ ನ್ಯಾಯಾಲಯ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತು.
 • ಸಂಸತ್ ಭವನದ ಮೇಲಿನ ದಾಳಿಯ ಆರೋಪಿ ಉಗ್ರ ಅಫ್ಜಲ್ ಮರಣ ದಂಡನೆ ವಿರುದ್ಧ ಅವರು ದನಿ ಎತ್ತಿದ್ದರು. ಇದರ ವಿರುದ್ಧ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ಕೇಳಿಬಂದಿತ್ತು.
 • 2010ರಲ್ಲಿ ಬಿಜೆಪಿಗೆ ಮರಳಿದ ಜೇಠ್ಮಲಾನಿ ಉಲ್ಟಾ ಹೊಡೆದರು. ‘ಅಫ್ಜಲ್​ನನ್ನು ಮುಲಾಜಿಲ್ಲದೆ ಗಲ್ಲಿಗೇರಿಸಬೇಕೆಂದು’ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ಆ ಸಂದರ್ಭದಲ್ಲಿ ಇತರ ಪಕ್ಷಗಳ ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಿನ ತನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ತನ್ನ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳದೆ ವರದಿ ಮಾಡಿವೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.

ರಾಜಕೀಯ ರಂಗದಲ್ಲಿ…

 • 1971ರಲ್ಲಿ ಜೇಠ್ಮಲಾನಿ ಮೊಟ್ಟ ಮೊದಲು ರಾಜಕೀಯ ರಂಗಪ್ರವೇಶ
 • ಮುಂಬೈನ ಉಲ್ಲಾಸ್​ನಗರ್ ಕ್ಷೇತ್ರದಿಂದ ಪಕ್ಷೇತರವಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲು
 • ತುರ್ತಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಮುಂಬೈನ ವಾಯವ್ಯ ಕ್ಷೇತ್ರದಿಂದ ಜನತಾಪಕ್ಷದಿಂದ ನಿಂತು ಗೆಲುವು
 • 1980 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಮರುಆಯ್ಕೆ.
 • 1988 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.
 • 1996ರಲ್ಲಿ ಕೇಂದ್ರ ಕಾನೂನು ಸಚಿವ.
 • 1998ರಲ್ಲಿ ನಗರಾಭಿವೃದ್ಧಿ ಮತ್ತು ಉದ್ಯೋಗ ಸಚಿವರಾಗಿ ಕಾರ್ಯನಿರ್ವಹಣೆ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...