ಬೆಸ್ಕಾಂನಲ್ಲಿ ಕೆಲಸದ ಆಮಿಷ: 33 ಲಕ್ಷ ರೂ. ನಾಮ ಹಾಕಿದ್ದ ಆರೋಪಿ ಬಂಧನ

ಬೆಂಗಳೂರು: ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ 11 ಜನರಿಂದ 33 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಮನುಕುಮಾರ್‌(26) ಬಂಧಿತ ಆರೋಪಿ. ಈತ ಮಂಜುನಾಥ್‌ ಸೇರಿ ಒಟ್ಟು 11 ಜನರಿಗೆ ನಕಲಿ ನೇಮಕಾತಿ ಪತ್ರ ತೋರಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ.

ಆರು ತಿಂಗಳಾದರೂ ಮನುಕುಮಾರ್ ಕೆಲಸ ಕೊಡಿಸದ ಕಾರಣ, ಬಾಗಲಗುಂಟೆ ಠಾಣೆಯಲ್ಲಿ ಸಂತ್ರಸ್ತರು ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್​)