ಬಾಗಿದ ವಿದ್ಯುತ್ ಕಂಬಗಳು

ಬೇಲೂರು: ಜಮೀನುಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗದ ಕಂಬಗಳು ಸಂಪೂರ್ಣ ಭಾಗಿ ತಂತಿಗಳು ನೆಲಕ್ಕೆ ತಾಗುವ ಮಟ್ಟದಲ್ಲಿದ್ದು, ಅವಘಡ ಸಂಭವಿಸುವ ಮುನ್ನ ಸೆಸ್ಕ್ ಅಧಿಕಾರಿಗಳು ದುರಸ್ತಿಗೆ ಮುಂದಾಗುವಂತೆ ಚಿನ್ನೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಗ್ರಾಮದಲ್ಲಿ ಜಮೀನುಗಳ ಮೇಲೆ ವಿದ್ಯುತ್ ಲೈನ್ ಹಾದು ಹೋಗಿದೆ. ಇದೇ ಮಾರ್ಗದಿಂದಲೇ ಕೃಷಿ ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಮೀನಿನಲ್ಲಿ ನಿಲ್ಲಿಸಿರುವ ವಿದ್ಯುತ್ ಕಂಬಗಳ ಗಾರೆ ಚಕ್ಕೆಗಳೆಲ್ಲ ಉದರಿ ಬಿದ್ದಿದ್ದು, ಕಬ್ಬಿಣದ ಸರಳು ಹೊರಗೆ ಕಾಣಿಸುವಷ್ಟು ಶಿಥಿಲಗೊಂಡಿವೆ. ಅಲ್ಲದೆ ವಿದ್ಯುತ್ ಕಂಬ ಸಂಪೂರ್ಣವಾಗಿ ನೆಲದತ್ತ ಬಾಗಿದ್ದು, ವಿದ್ಯುತ್ ತಂತಿಗಳು ಜಮೀನಿನಲ್ಲಿ ಕೈ ತಾಕುವಂತಿವೆ. ಆಕಸ್ಮಿಕವಾಗಿ ಜಮೀನಿನಲ್ಲಿ ಕೆಲಸ ಮಾಡುತಿದ್ದ ಸಂದರ್ಭ ಏನಾದರೂ ಮೈ ಮರೆತು ಕೈ ಮೇಲೆತ್ತಿದರೆ ಅಥವಾ ಈಗ ಬರುತ್ತಿರುವ ಗಾಳಿ ಮಳೆಗೇನಾದರೂ ವಿದ್ಯುತ್ ಕಂಬದೊಂದಿಗೆ ತಂತಿಗಳು ನೆಲಕ್ಕುರುಳಿದರೆ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಗಳಿದೆ.


ಸಂಬಂಧಿಸಿದ ಸೆಸ್ಕ್ ಜೆಇ ಹಾಗೂ ಲೈನ್‌ಮನ್‌ಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಬೆಳೆ ಕೊಯ್ಲು ಸಂದರ್ಭ ಏನಾದರೂ ಅಪಘಾತ ಸಂಭವಿಸಿದರೆ ಯಾರೂ ಹೊಣೆ? ತಕ್ಷಣ ಸೆಸ್ಕ್ ಎಇಇ ಹಾಗೂ ಈ ಭಾಗದ ಜೆಇ ಇತ್ತ ಗಮನ ಹರಿಸಿ ಶಿಥಿಲಾವಸ್ಥೆ ತಲುಪಿರುವ ವಿದ್ಯುತ್ ಕಂಬವನ್ನು ಬದಲಿಸಿ, ತಂತಿಗಳನ್ನು ದುರಸ್ತಿಗೊಳಿಸಬೇಕು ಎಂದು ಚಿನ್ನೇನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…